ಬಿಜ್ಲಿ ಬಿಜ್ಲಿ ಹಾಡಿಗೆ ಡಾನ್ಸ್‌ ಮಾಡಿದ ಓಲಾ ಬಾಸ್‌: ವಿಡಿಯೋ ವೈರಲ್

ಬಿಜಲಿ ಬಿಜಲಿ ಹಾಡಿಗೆ ಓಲಾ ಬಾಸ್‌ ಸಖತ್ ಸ್ಟೆಪ್ 
ಭವಿಶ್‌ ಅಗರ್ವಾಲ್ ಡಾನ್ಸ್‌ ಇಂಟರ್‌ನೆಟ್‌ನಲ್ಲಿ ವೈರಲ್
 

Ola boss Bhavish Aggarwal shows off his dance moves video goes viral akb

ಓಲಾ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಭವಿಶ್‌ ಅಗರ್ವಾಲ್ ಅವರು ಹಾರ್ಡಿ ಸಂಧು ಅವರ ಬಿಜಲಿ ಬಿಜಲಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು ಅವರು ಡಾನ್ಸ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓಲಾ ಮತ್ತೆ ಉತ್ತಮ ನಿರ್ವಹಣೆಯ ಹಳಿಗೆ ಮರಳಿದ ಬಳಿಕ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಡಾನ್ಸ್‌ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಅಗರ್ವಾಲ್ ಅವರು ಹಾರ್ಡಿ ಸಂಧು ಅವರ 'ಬಿಜ್ಲೀ ಬಿಜ್ಲೀ' ಹಾಡಿಗೆ ಸಹೋದ್ಯೋಗಿಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಸ್ವತಃ ಆನಂದಿಸುತ್ತ ಭವಿಶ್ ಅಗರ್ವಾಲ್ ಅವರು ನೃತ್ಯ ಮಾಡುತ್ತಿದ್ದಾರೆ. ಅಗರ್ವಾಲ್ ಮತ್ತು ಅವರ ಸಹೋದ್ಯೋಗಿಯ ನೃತ್ಯ ಸಮನ್ವಯವು ಸರಿಯಾಗಿದ್ದರೂ, ನೃತ್ಯದ ಕೊರಿಯೋಗ್ರಾಫರ್ ಮಾತ್ರ ಅವರ ಅಭಿನಯದಿಂದ ತುಂಬಾ ಸಂತೋಷವಾಗಿಲ್ಲ, ಏಕೆಂದರೆ ಅವರು ನೃತ್ಯದ ಕೊನೆಯಲ್ಲಿ ನೋ ನೋ ನೋ ಎಂದು ಬೊಬ್ಬೆ ಹೊಡೆಯುತ್ತಿರುವುದು ಕೇಳಿಸುತ್ತಿದೆ. ಆದಾಗ್ಯೂ, Ola CEO ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. MoveOS 2 ಸಂಗೀತ ವೈಶಿಷ್ಟ್ಯಕ್ಕಾಗಿ ಕೆಲವು ಅಂತಿಮ  ಪರೀಕ್ಷೆ ಮಾಡುತ್ತಿದ್ದೇನೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಅಗ್ನಿ ಅವಘಡ ಹಿನ್ನೆಲೆ: ತಪಾಸಣೆಗಾಗಿ 3,215 ವಾಹನಗಳನ್ನು ಹಿಂಪಡೆದ ಒಕಿನಾವ

ಅಗರ್ವಾಲ್ ಅವರ ಈ ನಡೆಯಿಂದ ಎಲ್ಲರೂ ಖುಷಿ ಗೊಂಡಂತೆ ಕಾಣುತ್ತಿಲ್ಲ. ಅನೇಕರು ಓಲಾ ಸಂಸ್ಥಾಪಕರ ಗಮನವನ್ನು ಓಲಾದ ಇಲೆಕ್ಟ್ರಿಕ್ ವಾಹನಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ವಿಡಿಯೋಗೆ ಕಾಮೆಂಟ್ ಮೂಲಕ ಅವರ ಗಮನಕ್ಕೆ ತಂದಿದ್ದಾರೆ. ಕೆಲವು ಬಳಕೆದಾರರು ತಮ್ಮ ಸ್ಕೂಟರ್‌ಗಳ ವಿತರಣೆಯಲ್ಲಿ ವಿಳಂಬದ ಬಗ್ಗೆ ದೂರು ನೀಡಿದರೆ, ಕೆಲವರು ಪುಣೆಯಲ್ಲಿ ಸಂಭವಿಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಕಳೆದ ತಿಂಗಳು Ola ಹೊಸದಾಗಿ ಬಿಡುಗಡೆ ಮಾಡಿದ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪುಣೆಯಲ್ಲಿ ಬೆಂಕಿ ಹತ್ತಿಕೊಂಡಿತು.

ಓಲಾ ಈ ವಿಷಯದ ಬಗ್ಗೆ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ. ಆದಾಗ್ಯೂ, ಎಲೆಕ್ಟ್ರಿಕ್ ವಾಹನಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾದ ಲಿಥಿಯಂ-ಐಯಾನ್ ಬ್ಯಾಟರಿಗಳು ಸರಿಯಾಗಿ ತಯಾರಿಸಲ್ಪಡದಿದ್ದರೆ ಅಥವಾ ಹಾನಿಗೊಳಗಾಗಿದ್ದರೆ  ಅಥವಾ ಬ್ಯಾಟರಿಯನ್ನು ನಡೆಸುವ ಸಾಫ್ಟ್‌ವೇರ್‌ ಸರಿಯಾಗಿ ವಿನ್ಯಾಸಗೊಳಿಸಲ್ಪಡದೇ ಇದ್ದಲ್ಲಿ ಬೆಂಕಿ ಅನಾಹುತ ಸಂಭವಿಸಬಹುದು ಎಂದು  ರಾಯಿಟರ್ಸ್‌ನಲ್ಲಿ ವರದಿ ಮಾಡಿತ್ತು.

ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್

ಕಂಪನಿಯು ತನ್ನ ಬ್ಯಾಟರಿ ಸೆಲ್‌ಗಳನ್ನು ದಕ್ಷಿಣ ಕೊರಿಯಾದಿಂದ (South Korea) ಆಮದು ಮಾಡಿಕೊಳ್ಳುತ್ತದೆ ಆದರೆ ಸ್ಥಳೀಯವಾಗಿ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಓಲಾ ಕಂಪನಿಯ ಅಧಿಕಾರಿಗಳು ಈ ಹಿಂದೆ ಹೇಳಿದ್ದರು ಎಂದು ವರದಿ ಆಗಿತ್ತು. ಬೆಂಕಿಯ ಘಟನೆಯ ನಂತರ, ಅಗರ್ವಾಲ್ ಅವರು ಇಂಜಿನಿಯರಿಂಗ್, ಉತ್ಪನ್ನ ಅಭಿವೃದ್ಧಿ ಮತ್ತು ಭವಿಷ್ಯದ ವ್ಯವಹಾರಗಳಾದ ಎಲೆಕ್ಟ್ರಿಕ್ ವೆಹಿಕಲ್ಸ್ (EV) ಮತ್ತು ತ್ವರಿತ ವಾಣಿಜ್ಯದಂತಹ ತಂಡ ನಿರ್ಮಾಣದ ಮೇಲೆ ಹೆಚ್ಚಿನ ಗಮನ ಹರಿಸುವುದಾಗಿ ಆಂತರಿಕ  ಹೇಳಿಕೆಯಲ್ಲಿ ಘೋಷಿಸಿದರು. ಅನೇಕ ಓಲಾ ಗ್ರಾಹಕರು ವೆಹಿಕಲ್ ಸ್ಕೂಟರ್‌ಗಳ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ. ಇದು ಎಲೆಕ್ಟ್ರಿಕ್ ವೆಹಿಕಲ್ಸ್ ವ್ಯಾಪಕ ಪರಿಶೀಲನೆಗೆ ಕಾರಣವಾಯಿತು.
 

Latest Videos
Follow Us:
Download App:
  • android
  • ios