ಬಜೆಟ್’ನಲ್ಲಿ ಜನತೆಗೆ ಸಿಹಿ ಸುದ್ದಿ ನೀಡಲಿದೆ ಕೇಂದ್ರ?| ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗುವ ಸಂಭವ?| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೇಡಿಕೆ ಕುಸಿತ| ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಸಂಭವ| ನಾಳಿನ ಬಜೆಟ್’ನಲ್ಲಿ ತೈಲ ಬೆಲೆ ನಿಯಂತ್ರಣದ ಅಂಶಗಳು?
ನವದೆಹಲಿ(ಜು.04): ನಾಳೆ ಮೋದಿ 2.0 ಸರ್ಕಾರ ನಾಳೆ(ಜು.05) ತನ್ನ ಮೊದಲ ಬಜೆಟ್ ಮಂಡಿಸಲಿದ್ದು, ಕೇಂದ್ರದ ಬಜೆಟ್ ಮೇಲೆ ಜನತೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ಕಳದ ವರ್ಷ ಚುನಾವಣಾ ಪುರ್ವ ಜನಪ್ರಿಯ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ, ಇದೀಗ ಕಳೆದ ಬಜೆಟ್’ನಲ್ಲಿ ಘೋಷಿಸಿದ್ದ ಯೋಜನೆಗಳನ್ನು ಮುಂದುವರೆಸುವ ಒತ್ತಡಕ್ಕೂ ಸಿಲುಕಿದೆ.
ಈ ಮಧ್ಯೆ ಮೋದಿ ಸರ್ಕಾರಕ್ಕೆ ಬಜೆಟ್ ರೂಪದಲ್ಲಿ ಹೊಸದೊಂದು ಅಸ್ತ್ರ ಸಿಗಲಿದ್ದು, ತೈಲ ಬೆಲೆ ನಿಯಂತ್ರಣಕ್ಕೆ ಬರುವ ಮುನ್ಸೂಚನೆಯನ್ನು ಆರ್ಥಿಕ ಸಮೀಕ್ಷೆ ವರದಿ ನೀಡಿದೆ.
ಜಾಗತಿಕ ಬೇಡಿಕೆ ಕುಸಿತದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಾಣಲಿದ್ದು, ಇದರಿಂದ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕಾಣಲಿದೆ.
ಇದು ಬಜೆಟ್‌ಗೂ ಮೊದಲೇ ಮೋದಿ 2.0 ಸರ್ಕಾರಕ್ಕೆ ಸಂತಸ ತಂದಿದ್ದು, ತೈಲ ಬೆಲೆ ನಿಯಂತ್ರಣದ ಅಂಶಗಳು ನಾಳಿನ ಬಜೆಟ್’ನಲ್ಲಿ ಇರಲಿವೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
2019-20ರ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ದೇಶದ ಜಿಡಿಪಿ ಸುಮಾರು ಶೇ.7ರ ಆಸುಪಾಸಿನಲ್ಲಿರಲಿದ್ದು, ಇದಕ್ಕೆ ಪೂರಕವೆಂಬಂತೆ ತೈಲ ಬೆಲೆಯಲ್ಲಿ ಇಳಿಕೆಯಾಗಲಿರುವುದು ಸದೃಢ ಆರ್ಥಿಕತೆಗೆ ಮುನ್ನುಡಿ ಬರೆದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.
