ಮೇ ೧ ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹೧೦೨.೯೨ ಹಾಗೂ ಡೀಸೆಲ್ ₹೮೯.೦೨ ರಂತಿದೆ. ಚಂಡೀಘಡ, ಅಹಮದಾಬಾದ್, ಲಕ್ನೋಗಳಲ್ಲಿ ಇಂಧನ ಬೆಲೆ ಕಡಿಮೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಏರಿಳಿತಗಳಿಗೆ ಅನುಗುಣವಾಗಿ ದೈನಂದಿನ ಬೆಲೆ ಪರಿಷ್ಕರಣೆಯಾಗುತ್ತದೆ. ರಾಜ್ಯ ತೆರಿಗೆಗಳಿಂದಾಗಿ ನಗರಗಳಲ್ಲಿ ಬೆಲೆ ವ್ಯತ್ಯಾಸವಿದೆ.
ಬೆಂಗಳೂರು(ಮೇ.01) ಭಾರತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳು ಅತ್ಯಂತ ಪ್ರಮುಖ. ಕಾರಣ ಈ ತಿಂಗಳಲ್ಲಿ ಹಲವು ಹಣಕಾಸು ನೀತಿಗಳು ಬದಲಾಗುತ್ತದೆ, ಪರಿಷ್ಕರಣೆಯಾಗುತ್ತದೆ. ಬೆಲೆಗಳು ಏರಿಳಿತ ಕಾಣುತ್ತದೆ. ಮೇ.1ರಿಂದ ಹಲವು ನೀತಿಗಳು ಪರಿಷ್ಕರಣೆಯಾಗುತ್ತಿದೆ. ಇದರ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲಯಲ್ಲಿ ಆಗಿರುವ ಬದಲಾವಣೆ ಏನು ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ. ಇಂದನ ಬೆಲೆ ಪ್ರತಿ ದಿನ ಪರಿಷ್ಕರಣೆಯಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಆಯಿಲ್ ಮಾರ್ಕೆಂಟಿಂಗ್ ಕಂಪನಿ(OMCs) ಬೆಲೆ ಪರಿಷ್ಕರಣೆ ಮಾಡುತ್ತದೆ. ಮೇ.1 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.92 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 89.02 ರೂಪಾಯಿ ಆಗಿದೆ.
ಈ ಮೂರು ನಗರದಲ್ಲಿ ಕಡಿಮೆ ಬೆಲೆಗೆ ಲಭ್ಯ
ದೇಶದ ಪ್ರಮುಖ ನಗರಗಳ ಪೆಟ್ರೋಲ್ ಡೀಸೆಲ್ ಬೆಲೆಯ ಹೋಲಿಕೆ ಮಾಡಿದರೆ ಗುಜರಾತ್‌ನ ಅಹಮ್ಮದಾಬಾದ್, ಪಂಜಾಬ್‌ನ ಚಂಡೀಘಡ ಹಾಗೂ ಉತ್ತರ ಪ್ರದೇಶದ ಲಖನೌದಲ್ಲಿ ಇಂದನ ಬೆಲೆ ಕಡಿಮೆ ಇದೆ. ಇನ್ನುಳಿದ ಬಹುತೇಕ ಕಡೆ 100 ರೂಪಾಯಿ ಗಡಿ ದಾಟಿದೆ. ಚಂಡೀಘಡದಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.30 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 82.45 ರೂಪಾಯಿ ಇದೆ. ಇನ್ನು ಅಹಮ್ಮಾದಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.49 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 90.17 ರೂಪಾಯಿ ಇದೆ. ಲಖನೌದಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.69 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 87.80 ರೂಪಾಯಿ ಆಗಿದೆ.
ಸರ್ಕಾರದ ದಿಟ್ಟ ಕ್ರಮ: ಜು.1 ರಿಂದ ಈ ರಾಜ್ಯದ ಹಳೆಯ ವಾಹನಗಳಿಗೆ ಸಿಗೋದಿಲ್ಲ ಪೆಟ್ರೋಲ್, ಡೀಸೆಲ್!
2022ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂದನ ಮೇಲಿನ ತೆರಿಗೆ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂದನ ದರದಲ್ಲಿ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ. ಆದರೆ ದುಬಾರಿಯಾಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳು, ಕಚ್ಚಾ ತೈಲ ಬೆಲೆಗಳ ಏರಿಳಿತ ಭಾರತದಲ್ಲೂ ಸಣ್ಣ ಪ್ರಮಾಣದಲ್ಲಿ ಬೆಲೆ ಪರಿಷ್ಕರಣೆಗೆ ಕಾರಣವಾಗಿದೆ.
ಯಾವ ನಗರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟೆಷ್ಟು?
ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 104.21 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 92.15 ರೂಪಾಯಿ ಆಗಿದೆ. ಇನ್ನು ಕೋಲ್ಕತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.94 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 90.76 ರೂಪಾಯಿ ಆಗಿದೆ. ಚೆನ್ನೈ ನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 100.75 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 92.34 ರೂಪಾಯಿ ಆಗಿದೆ. ಹೈದರಾಬಾದ್‌ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 107.46 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 95.70 ರೂಪಾಯಿ ಆಗಿದೆ.
ಜೈಪುರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.72 ರೂಪಯಿ ಆಗಿದ್ದರೆ, ಡೀಸೆಲ್ ಬೆಲೆ 90.21 ರೂಪಾಯಿ ಆಗಿದೆ. ಪುಣೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.04 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 90.57 ರೂಪಾಯಿ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106.48 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 91.88 ರೂಪಾಯಿ ಆಗಿದೆ. ಪಾಟ್ನಾದಲ್ಲಿ ಪೆಟ್ರೋಲ್ ಬೆಲೆ 105.58 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 93.80 ರೂಪಾಯಿ ಆಗಿದೆ. ಸೂರತ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 95.00 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 89.00 ರೂಪಾಯಿ ಆಗಿದೆ.
ಭಾರತ ಬಳಕೆ ಮಾಡುವ ಇಂದನ ಪ್ರಮಾಣದಲ್ಲಿ ಬಹುತೇಕ ಪ್ರಮಾಣದ ಇಂಧವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರತಿ ಬದಲಾವಣೆ ಹಾಗೂ ಪರಿಷ್ಕರಣೆ ಭಾರತದ ಮೇಲೂ ಪರಿಣಮ ಬೀರುತ್ತದೆ. ಭಾರತದ ಹಲವು ರಾಜ್ಯ ಹಾಗೂ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ವ್ಯತ್ಯಾಸವಿದೆ. ಇದಕ್ಕೆ ಮುಖ್ಯ ಕಾಣ ಆಯಾ ರಾಜ್ಯಗಳು ವಿಧಿಸುವ ತೆರಿಗೆ.
ಡೀಸೆಲ್, ಜೆಟ್ ಫ್ಯುಯೆಲ್ ಸ್ಟಾಕ್ ಇರಿಸಿಕೊಳ್ಳಿ, ರಿಫೈನರಿಗಳಿಗೆ ಸೂಚಿಸಿದ ಪಾಕಿಸ್ತಾನ ಸರ್ಕಾರ!


