Asianet Suvarna News Asianet Suvarna News

ತೈಲ ಆಮದು : ಭಾರತಕ್ಕೆ ಶಾಕ್ ಕೊಟ್ಟ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಶಾಕ್ ನೀಡಿದ್ದಾರೆ. ತೈಲ ಆಮದು ಸಂಬಂಧ ನೀಡಿದ್ದ ವಿನಾಯ್ತಿಯನ್ನು  ಹಿಂದಕ್ಕೆ ಪಡೆದಿದೆ. 

Oil Export America Shock To India
Author
Bengaluru, First Published Apr 23, 2019, 9:24 AM IST

ಮುಂಬೈ/ವಾಷಿಂಗ್ಟನ್‌: ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತ, ಚೀನಾ ಸೇರಿದಂತೆ ಕೆಲವೇ ಕೆಲವೇ ದೇಶಗಳಿಗೆ ನೀಡಿದ್ದ ವಿನಾಯ್ತಿಯನ್ನು ಅಮೆರಿಕಕ್ಕೆ ಹಿಂದಕ್ಕೆ ಪಡೆದಿದೆ. ಮೇ ಆರಂಭದಿಂದ ಜಾರಿಗೆ ಬರುವಂತೆ ಕೆಲ ದೇಶಗಳಿಗೆ ತೈಲ ಆಮದಿಗೆ ನೀಡಲಾಗಿದ್ದ ವಿಶೇಷ ಅವಕಾಶ ಹಿಂಪಡೆಯಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಅಮೆರಿಕದ ಈ ಘೋಷಣೆ, ತನ್ನ ತನ್ನ ಆದಾಯಕ್ಕೆ ಬಹುಪಾಲು ತೈಲೋತ್ಪನ್ನವೊಂದನ್ನೇ ನೆಚ್ಚಿಕೊಂಡಿರುವ ಇರಾನ್‌ಗೆ ಭಾರೀ ಹೊಡೆತ ನೀಡುವುದರ ಜೊತೆಗೆ, ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ ಭಾರತ ಮತ್ತು ಚೀನಾಕ್ಕೂ ಭಾರೀ ಸಂಕಷ್ಟತಂದೊಡ್ಡುವ ಸಾಧ್ಯತೆ ಇದೆ. ಇರಾನ್‌ನಿಂದ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಭಾರತ, ಇರಾನ್‌ನಿಂದ ನಿತ್ಯ 3 ಲಕ್ಷ ಬ್ಯಾರಲ್‌ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತದೆ.

ಈ ಸುದ್ದಿ ಹೊರಬೀಳುತ್ತಲೇ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆ ಉಂಟಾಗಿದ್ದು, ಮಾರುಕಟ್ಟೆಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ ಸೋಮವಾರ ಒಂದೇ ದಿನ 495.10 ಅಂಕಗಳ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ಸೆನ್ಸೆಕ್ಸ್‌ 38,645.18 ಅಂಕಗಳೊಂದಿಗೆ ತನ್ನ ವಹಿವಾಟು ಮುಗಿಸಿದೆ.

Follow Us:
Download App:
  • android
  • ios