Asianet Suvarna News Asianet Suvarna News

Nykaa IPO: ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಕಂಪನಿ ಲಾಭ ಶೇ.96ರಷ್ಟುಕುಸಿತ!

*ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ Nykaa 
*ಕಳೆದ ವಾರವಷ್ಟೇ ತನ್ನ ಕಂಪನಿ ಮೌಲ್ಯ ದುಪ್ಪಟ್ಟು
*ಕಳೆದ ತ್ರೈಮಾಸಿಕದಲ್ಲಿ  ಲಾಭ   ಶೇ.96ರಷ್ಟುಕುಸಿತ 
* ಸೌಂದರ್ಯವರ್ಧಕ ಸಾಧನಗಳ ತಯಾರಿಕಾ ಕಂಪನಿ ನಾಯಿಕಾ

Nykaa profit falls 96 percent  days after blockbuster India IPO nothing changed said Falguni Nayar mnj
Author
Bengaluru, First Published Nov 16, 2021, 10:36 AM IST

ನವದೆಹಲಿ (ನ.16) : ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ (Share Market) ಧೂಳೆಬ್ಬಿಸಿದ್ದ ಸೌಂದರ್ಯವರ್ಧಕ (Beauty Products) ಸಾಧನಗಳ ತಯಾರಿಕಾ ಕಂಪನಿಯಾದ ‘ನಾಯಿಕಾ (Nykaa)’ ಲಾಭ ಕಳೆದ ತ್ರೈಮಾಸಿಕದಲ್ಲಿ ಶೇ.96ರಷ್ಟುಕುಸಿತ ಕಂಡಿದೆ. ಇದರ ಪರಿಣಾಮ, ನಾಯಿಕಾ ಷೇರು ಸೋಮವಾರ ಕುಸಿತ ಕಂಡಿವೆ. ನಾಯಿಕಾ ಕಂಪನಿ ಸೆಪ್ಟೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದ ಅವಧಿಯಲ್ಲಿ ಕೇವಲ 1.2 ಕೋಟಿ ರು. ಆದಾಯ (Income) ಗಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 27 ಕೋಟಿ ರು. ಆದಾಯ ಸಂಪಾದಿಸಿತ್ತು. ಹೀಗಾಗಿ ಲಾಭ ಶೇ.96ರಷ್ಟು ಕುಸಿತವಾಗಿದೆ.

ಇದರ ಪರಿಣಾಮ, ಕಂಪನಿಯ ಷೇರು ಮೌಲ್ಯದಲ್ಲಿ ಶೇ.5.2ರಷ್ಟುಇಳಿಕೆಯಾಗಿದೆ. ಮುಂಬೈ (Mumbai) ಮೂಲದ ಕಂಪನಿ ಕಳೆದ ವಾರವಷ್ಟೇ ತನ್ನ ಕಂಪನಿ ಮೌಲ್ಯವನ್ನು ದುಪ್ಪಟ್ಟಾಗಿಸಿಕೊಂಡಿತ್ತು. ಅದಾದ ನಂತರ ಇದು ಮೊದಲ ಕುಸಿತವಾಗಿದೆ. ನಾಯಿಕಾ ಹೊಸ ತಲೆಮಾರಿನ ಭಾರತೀಯ ಸ್ಟಾರ್ಟಪ್‌ (Indian Startup) ಆಗಿದ್ದು ಸುಮಾರು 2500 ಬ್ರಾಂಡ್‌ಗಳ ಕಾಸ್ಮೆಟಿಕ್‌ಗಳನ್ನು ಮಾರಾಟ ಮಾಡುತ್ತದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಕಂಪನಿಯ ಲಾಭ ಶೇ.47ರಷ್ಟುಏರಿಕೆ ಕಂಡಿತ್ತು.

ಕಳೆದ ವಾರವಷ್ಟೇ ತನ್ನ ಕಂಪನಿ ಮೌಲ್ಯ ದುಪ್ಪಟ್ಟು!

ನಿವ್ವಳ ಆದಾಯವು (Net profit) ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ 270 ಮಿಲಿಯನ್ ರೂಪಾಯಿಗಳಿಂದ 12 ಮಿಲಿಯನ್ ರೂಪಾಯಿಗಳಿಗೆ ($161,000) ಇಳಿಕೆ ಕಂಡಿದೆ. ರವಿವಾರ ಶೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ 7.3% ರಷ್ಟು ಕುಸಿದ ನಂತರ ಮುಂಬೈನಲ್ಲಿ ಬೆಳಿಗ್ಗೆ 10:07 ಕ್ಕೆ ಷೇರುಗಳು 5.2% ನಷ್ಟು 2,236.5 ರೂಪಾಯಿಗಳಿಗೆ ಇಳಿದಿವೆ.

Tax Devolution Amount| ರಾಜ್ಯಗಳಿಗೆ ಕೇಂದ್ರದಿಂದ ಡಬಲ್‌ ಪರಿಹಾರ!

ಮುಂಬೈ ಮೂಲದ ಸಂಸ್ಥೆಯ ಷೇರುಗಳು ಕಳೆದ ವಾರ ಶೇರು ಮಾಟುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟ ನಂತರ ಮತ್ತು ಮೌಲ್ಯದಲ್ಲಿ ದ್ವಿಗುಣಗೊಂಡಿದ್ದವು. ತದನಂತರದ ಮೊದಲ ಫಲಿತಾಂಶಗಳನ್ನು ಇದಾಗಿದೆ. ಶೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ನಂತರ ಸುಮಾರು ಅರ್ಧದಷ್ಟು ಕಂಪನಿ ಶೇರು ಹೊಂದಿರುವ ಫಲ್ಗುಣಿ ನಾಯರ್ (Falguni Nayar) ಅವರ ಸಂಪತ್ತು ಸುಮಾರು $7 ಬಿಲಿಯನ್ ಮೌಲ್ಯಕ್ಕೇರಿತು ಹಾಗೂ  ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್ (Billionaire) ಎಂಬ ಹೆಗ್ಗಳಿಕೆಗೆ ಪಾತ್ರಾರದರು. Nykaa ಹೊಸ ತಲೆಮಾರಿನ ಭಾರತೀಯ ಸ್ಟಾರ್ಟ್‌ಅಪ್‌ಗಳ ಭಾಗವಾಗಿದೆ, ಇದು  ಮೇಕಪ್ ರಿಮೂವರ್‌ (Makeup remover) ವೆಲ್ವೆಟಿ ಕೋಲ್ ಇಂಡಿಯನ್ ಐಲೈನರ್ ( velvety kohl Indian eyeliner) ಮತ್ತು ಮೆಹೆಂದಿ ಎಂಬ ದೇಹದ ಟ್ಯಾಟೂ ಆರ್ಟ್‌ನ ಗಳಂತಹ   2,500 ಕ್ಕೂ ಹೆಚ್ಚು ಸೌಂದರ್ಯವರ್ಧಕ  ಬ್ರಾಂಡ್‌ಗಳನ್ನು ಹೊಂದಿದೆ.

Bank Account; ಕರ್ನಾಟಕ ಬ್ಯಾಂಕ್‌ನಿಂದ 4.15 ಲಕ್ಷ ಖಾತೆ ತೆರೆವ ಅಭಿಯಾನ

ಈ ಬಗ್ಗೆ ಮಾತನಾಡಿರುವ ನಾಯಿಕಾ ಸಿಇಓ ಫಲ್ಗುಣಿ ನಾಯರ್ ನಮಗೆ, ಹೆಚ್ಚು ಏನೂ ಬದಲಾಗಿಲ್ಲ. ಕಳೆದ ವರ್ಷದ ಮೊದಲಾರ್ಧವು (first half) ಕೂಡ ನಮ್ಮ ಉದ್ಯಮಕ್ಕೆ  ಪ್ರತಿಕೂಲವಾದ ತ್ರೈಮಾಸಿಕವಾಗಿತ್ತು ಮತ್ತು ಅದು ಯಾವಾಗಲೂ ಹಾಗೆಯೇ ಇದೆ. ವಾಸ್ತವವಾಗಿ, ಕಳೆದ ವರ್ಷ ಮಾರ್ಚ್ 21 ರ ಬಗ್ಗೆ  ನಾನು ಮಾತನಾಡುತ್ತಿದ್ದೇನೆ. ಕೋವಿಡ್ (Covid) ಪ್ರಭಾವದ ಕಾರಣ, ಮೊದಲ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದ್ದೇವು ಮತ್ತು ಮೊದಲಾರ್ಧಲ್ಲಿ ಕೂಡ  ನಷ್ಟವಾಗಿದೆ ಆದರೆ ವರ್ಷ್ಯಾಂತ್ಯಕ್ಕೆ ಕಂಪನಿ ಲಾಭ (Profit) ಗಳಿಸಿತ್ತು. ಕಳೆದ ವರ್ಷ ನಮ್ಮ ಮೊದಲಾರ್ಧದ ನಷ್ಟಗಳು ರೂ 25 ಕೋಟಿ ಮತ್ತು ಕಳೆದ ವರ್ಷ ಎರಡನೇ ತ್ರೈಮಾಸಿಕ ಕೇವಲ ರೂ 4.7 ಕೋಟಿ ಲಾಭ ಗಳಿಸಿದೆ. ಇವು ಕೇವಲ ಸಣ್ಣ ಸಂಖ್ಯೆಗಳು ಎಂದು ಹೇಳಿದ್ದಾರೆ.

Follow Us:
Download App:
  • android
  • ios