Asianet Suvarna News Asianet Suvarna News

Tax Devolution Amount| ರಾಜ್ಯಗಳಿಗೆ ಕೇಂದ್ರದಿಂದ ಡಬಲ್‌ ಪರಿಹಾರ!

* ನವೆಂಬರಲ್ಲಿ 95,082 ಕೋಟಿ ತೆರಿಗೆ ಹಣ

* ರಾಜ್ಯಗಳಿಗೆ ಕೇಂದ್ರದಿಂದ ಡಬಲ್‌ ಪರಿಹಾರ

* ಸಿಎಂಗಳ ಸಭೆ ಬಳಿಕ ನಿರ್ಮಲಾ ಘೋಷಣೆ

* ನವೆಂಬರಲ್ಲಿ 47,541 ಕೋಟಿ ಬಿಡುಗಡೆ ಆಗಬೇಕಿತ್ತು

* ರಾಜ್ಯಗಳ ಕೈಗೆ ಹಣ ನೀಡಿ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶ

Centre to give Rs 95082 crore to states as part of tax devolution amount pod
Author
Bangalore, First Published Nov 16, 2021, 7:46 AM IST
  • Facebook
  • Twitter
  • Whatsapp

ನವದೆಹಲಿ(ನ.16): ರಾಜ್ಯಗಳ ಕೈಗೆ ಹೆಚ್ಚು ಹಣ ಒದಗಿಸುವ ಉದ್ದೇಶದಿಂದ ನವೆಂಬರ್‌ ತಿಂಗಳಲ್ಲಿ 95,082 ಕೋಟಿ ತೆರಿಗೆ ಹಣ (Tax Devolution Amount) ಹಂಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಾಮಾನ್ಯವಾಗಿ ನ.22ಕ್ಕೆ ರಾಜ್ಯಗಳಿಗೆ 47,541 ಕೋಟಿ ತೆರಿಗೆ (tax) ಹಣ ಹಂಚಬೇಕಿತ್ತು. ಆದರೆ ರಾಜ್ಯಗಳು ಬಂಡವಾಳ ವೆಚ್ಚಕ್ಕೆ ಹೆಚ್ಚು ಹಣ ಕೇಳಿದ್ದರಿಂದ ದುಪ್ಪಟ್ಟು ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman) ತಿಳಿಸಿದ್ದಾರೆ.

ಸೋಮವಾರ ಕೋವಿಡ್‌ 2ನೇ ಅಲೆ ಬಳಿಕ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ (Chief Ministers) ಸಭೆ ನಡೆಸಿದ ಅವರು, ಬಳಿಕ ಸುದ್ದಿಗಾರರ ಜತೆ ಮಾತನಾಡಿ, ‘ರಾಜ್ಯಗಳ ಕೈಗೆ ಹೆಚ್ಚು ಹಣ ಬಂದಲ್ಲಿ ಅದನ್ನು ಮೂಲಭೂತ ಸೌಕರ‍್ಯಗಳ ನಿರ್ಮಾಣಕ್ಕೆ ವಿನಿಯೋಗಿಸಬಹುದು’ ಎಂದರು.

‘ಸದ್ಯ ಶೇ.41ರಷ್ಟುತೆರಿಗೆಯನ್ನು 14 ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು ಮುಂಗಡ ಬಿಡುಗಡೆಯಾಗಿದ್ದು, ಮಾಚ್‌ರ್‍ನಲ್ಲಿ ಬದಲಾವಣೆ ಮಾಡಲಾಗುತ್ತದೆ’ ಎಂದು ಇದೇ ವೇಳೆ ಹಣಕಾಸು ಕಾರ‍್ಯದರ್ಶಿ ಟಿ.ವಿ.ಸೋಮನಾಥನ್‌ ತಿಳಿಸಿದರು.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ 15 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಜಮ್ಮು-ಕಾಶ್ಮೀರ ಲೆ.ಗವರ್ನರ್‌ ಮತ್ತು 3 ರಾಜ್ಯಗಳ ಉಪ ಮುಖ್ಯಮಂತ್ರಿಗಳು ಈ ವರ್ಚುವಲ್‌ ಸಭೆಯಲ್ಲಿ ಭಾಗಿಯಾಗಿದ್ದರು. ಉಳಿದ ರಾಜ್ಯಗಳ ಹಣಕಾಸು ಮಂತ್ರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

 

ಭಾರತದಲ್ಲಿ ಕೊರೊನಾ ಲಾಕ್‌ಡೌನ್ (Lockdown) ನಂತರ ಡಿಜಿಟಲ್‌ ಪಾವತಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ನಗದು ರೂಪದಲ್ಲಿರುವ ಹಣವನ್ನು ಬಳಸುವ ಬದಲಾಗಿ ಜನರು ಗೂಗಲ್‌ ಪೇ (Google Pay), ಫೋನ್‌ ಪೇ (Phonepay) ಪೇಟಿಎಮ್‌ (Paytm) ನಂತಹ ಡಿಜಿಟಲ್‌ ಪೇಮೆಂಟ್‌ಗಳ  (Digital Payments) ಮೊರೆ ಹೋಗಿದ್ದಾರೆ. ಡೊಡ್ಡ ವ್ಯಾಪಾರಿಗಳಿಂದ ಹಿಡಿದು ಸಣ್ಣ ಪುಟ್ಟ ಅಂಗಡಿಗಳಲ್ಲೂ ಕೂಡ ಈಗ ಡಿಜಿಟಲ್‌ ಪೇಮೆಂಟ್‌ನದ್ದೇ ದರ್ಬಾರ್.‌ ಈ ಮಧ್ಯೆ ಡಿಜಿಟಲ್‌ ಪಾವತಿಯ ಕ್ರಾಂತಿಗೆ ನಿದರ್ಶನವೆಂಬತೆ ಎತ್ತಿನ ತಲೆ ಮೇಲೆ ಕ್ಯೂಆರ್ ಕೋಡ್‌ (QR Code) ಇರುವ ವಿಡಿಯೋವೊಂದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಟ್ವೀಟರ್‌ನಲ್ಲಿ ಶೇರ್‌ ಮಾಡಿದ್ದಾರೆ.  ಭಾರತದಲ್ಲಿ ಹಣಕಾಸು ಪಾವತಿ ವ್ಯವಸ್ಥೆಯಲ್ಲಿನ ಕ್ರಾಂತಿಯನ್ನು ಎತ್ತಿ ಹಿಡಿಯುವ ಜಾನಪದ ಕಲಾವಿದರ  ವೀಡಿಯೊವನ್ನು ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ ಟ್ವೀಟ್‌ ಮಾಡಿ ದೇಶದ  ಡಿಜಿಟಲ್‌ ಪಾವತಿ ಜಾನಪದ ಕಲಾವಿದರನ್ನು (Folk Artist) ತಲುಪುತ್ತಿದೆ ಎಂದು ಹೇಳಿದ್ದಾರೆ.

Recd a video of a Gangireddulata, where alms are given thru a QR code! India’s #digitalpayment revolution, reaching folk artists. In AP + Telangana, Gangireddulavallu dress up old oxen no longer helpful on farms, walk door to door during fests, performing with their nadaswarams pic.twitter.com/8rgAsRBP5v

— Nirmala Sitharaman (@nsitharaman) November 4, 2021

One Nation One Health ID: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ!

ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಎತ್ತಿನ ತಲೆಗೆ ಜೋಡಿಸಲಾದ PhonePe QR ಕೋಡ್ ಅನ್ನು ಸ್ಕ್ಯಾ ನ್ (Scan) ಮಾಡುತ್ತಿದ್ದಾರೆ. 30 ಸೆಕೆಂಡ್‌ಗಳ ರೆಕಾರ್ಡಿಂಗ್ ಗಂಗಿರೆದ್ದುಲತಾ/ಗಂಗಿರೆದ್ದುಲ ಸಮುದಾಯಗಳದ್ದಾಗಿದ್ದು, ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಡಿಜಿಟಲ್ ಕ್ರಾಂತಿಯು ಜಾನಪದ ಕಲಾವಿದರನ್ನೂ ತಲುಪಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಆಂಧ್ರಪ್ರದೇಶ(Andra Pradesh) ಮತ್ತು ತೆಲಂಗಾಣದಲ್ಲಿ (Telangana), ಅಲೆಮಾರಿ ಬುಡಕಟ್ಟು ಜನಾಂಗದ ಗಂಗಿರೆದ್ದುಲವಲ್ಲು (Gangireddulavallu), ಸಂಕ್ರಾಂತಿ ಹಬ್ಬದ ಸಮಯದಲ್ಲಿ ತಮ್ಮ ಸಿಂಗಾರಗೊಂಡ ಗೂಳಿಗಳೊಂದಿಗೆ ಮನೆಗಳಿಗೆ ಭೇಟಿ ನೀಡಿ ಭಿಕ್ಷೆ ಬೇಡುತ್ತ ನಾದಸ್ವರಮ್ (ಸಂಗೀತ ವಾದ್ಯ - Music) ನುಡಿಸುತ್ತಾರೆ ಮತ್ತು ನೃತ್ಯ (Dance) ಮಾಡುತ್ತಾರೆ.

Follow Us:
Download App:
  • android
  • ios