ಕೇಂದ್ರ ಬಜೆಟ್‌ನಲ್ಲಿ ಗಮನ ಸೆಳೆದ 1111111, ಶೇ. 11.11 ಸಂಖ್ಯೆಗಳು

ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳಿಗೆ 11.11 ಲಕ್ಷ ಕೋಟಿ ರು. ಬಂಡವಾಳ ವೆಚ್ಚ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದಾರೆ. ಈ ಬಂಡವಾಳ ವೆಚ್ಚ ಹೆಚ್ಚಳ ಪ್ರಮಾಣವು ಶೇ.11.1ರಷ್ಟಿದೆ.

number 1 attracted in Union Budget 2024 presented by Minister Nirmala Sitaram akb

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳಿಗೆ 11.11 ಲಕ್ಷ ಕೋಟಿ ರು. ಬಂಡವಾಳ ವೆಚ್ಚ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದಾರೆ. ಈ ಬಂಡವಾಳ ವೆಚ್ಚ ಹೆಚ್ಚಳ ಪ್ರಮಾಣವು ಶೇ.11.1ರಷ್ಟಿದೆ.

ಈ ಅಂಕಿ ಅಂಶ ನೀಡುವಾಗ ಸಚಿವೆ ನಿರ್ಮಲಾ ಪ್ರಸ್ತಾಪಿಸಿದ ಅಂಕಿ ಅಂಶಗಳು ಎಲ್ಲರ ಗಮನ ಸೆಳೆದವು. ಕಾರಣ ಬಂಡವಾಳ ವೆಚ್ಚ ಪ್ರಮಾಣ 11.11 ಲಕ್ಷ ಕೋಟಿ ರು. ಅಂದರೆ 1111111 ರು. ಎಂದಿದ್ದರೆ, ಬಂಡವಾಳ ವೆಚ್ಚ ಪ್ರಮಾಣವನ್ನು ಹೆಚ್ಚಿಸಿರುವ ಪ್ರಮಾಣ ಶೇ.11.11ರಷ್ಟಿದೆ. ಅಂದರೆ ಎಲ್ಲಾ ಅಂಕಿಗಳು ಕೇವಲ ಒಂದರ ಅಂಕಿಯಲ್ಲೇ ಇದೆ.

ಕಳೆದ ವರ್ಷ ಖಾಸಗಿ ವಲಯದ ಬಂಡವಾಳ ವೆಚ್ಚ ಪ್ರಮಾಣ ಭಾರೀ ಕುಸಿತ ಕಂಡಿದ್ದ ಕಾರಣ ಕೇಂದ್ರ ಸರ್ಕಾರ ಬಂಡವಾಳ ವೆಚ್ಚವನ್ನು ಶೇ.37.5ರಷ್ಟು ಭಾರೀ ಹೆಚ್ಚಿಸಿತ್ತು. ಆದರೆ ಈ ವರ್ಷ ಖಾಸಗಿ ವಲಯದಿಂದ ಉತ್ತಮ ಪ್ರಮಾಣದ ಬಂಡವಾಳ ವೆಚ್ಚದ ನಿರೀಕ್ಷೆ ಇರುವ ಕಾರಣ, ಸರ್ಕಾರ ತನ್ನ ಪಾಲಿನ ಏರಿಕೆಯನ್ನು ಸಾಮಾನ್ಯ ಎನ್ನಬಹುದಾದ ಶೇ.11.11ಕ್ಕೆ ಸೀಮಿತಗೊಳಿಸಿದೆ. ಅಂದರೆ ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ಮಾಡುವ ಬಂಡವಾಳ ವೆಚ್ಚದ ಪ್ರಮಾಣವು 111111 ರು.ನಷ್ಟಿರಲಿದೆ. ಇದು ಒಟ್ಟು ಜಿಡಿಪಿಯ ಶೇ.3.4ರಷ್ಟು ಎಂದು ಸರ್ಕಾರ ಮಾಹಿತಿ ನೀಡಿದೆ.

ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ವರ್ಷ  : ಬಂಡವಾಳ ವೆಚ್ಚ

2020-21: 4.39 ಲಕ್ಷ ಕೋಟಿ ರು.

2021-22 : 5.54 ಲಕ್ಷ ಕೋಟಿ ರು.

2022-23 :10.00 ಲಕ್ಷ ಕೋಟಿ ರು.

2023-24 : 11.11 ಲಕ್ಷ ಕೋಟಿ ರು.

1.54 ಲಕ್ಷ ಕೋಟಿ ರು. ಡಿವಿಡೆಂಡ್‌ ಆದಾಯ ನಿರೀಕ್ಷೆ

ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಂದ 1.54 ಲಕ್ಷ ಕೋಟಿ ಡಿವಿಡೆಂಡ್‌ ಸಂಗ್ರಹದ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಪೈಕಿ ಬ್ಯಾಂಕಿಂಗ್‌ ವಲಯದಿಂದ 1.02 ಲಕ್ಷ ಕೋಟಿ ರು. ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಂದ 52000 ಕೋಟಿ ರು. ಗುರಿ ಇದೆ.

ವಿಶೇಷವೆಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್‌ ವಲಯದಿಂದ 48000 ಕೋಟಿ ರು. ಡಿವಿಡೆಂಡ್‌ ಸಂಗ್ರಹದ ನಿರೀಕ್ಷೆ ಇಟ್ಟುಕೊಂಡಿತ್ತಾದರೂ ಅದು ಭರ್ಜರಿ 1.04 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ ಎಂದು ಗುರುವಾರ ಮಂಡಿಸಲಾದ ಬಜೆಟ್‌ನಲ್ಲಿ ಹೇಳಲಾಗಿದೆ.

ಕೇವಲ 59 ನಿಮಿಷದಲ್ಲಿ ಬಜೆಟ್‌ ಓದಿ ಮುಗಿಸಿದ ಸಚಿವೆ : ಸೂಟ್‌ಕೇಸ್‌ನಿಂದ ಟ್ಯಾಬ್ಲೆಟ್‌ವರೆಗೆ ಬದಲಾದ ಬಜೆಟ್ ಪ್ರತಿ

Latest Videos
Follow Us:
Download App:
  • android
  • ios