ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ

ಅದಾನಿ ಗ್ರೂಪ್‌ನ ಷೇರುಗಳು ಸತತ 3 ದಿನಗಳ ಕಾಲ ಏರಿಕೆ ಕಂಡಿದೆ. ಈ ಹಿನ್ನೆಲೆ ಎರಡು ದಿನಗಳಲ್ಲಿ ಹೂಡಿಕೆದಾರರೊಬ್ಬರು ಸುಮಾರು 3000 ಕೋಟಿ ರೂ. ಗಳಿಸಿದ್ದಾರೆ.

nri investor earns more than 3000 crore in 2 days as adani group stocks rally ash

ಹೊಸದೆಹಲಿ (ಮಾರ್ಚ್‌ 5, 2023): ಪಾತಾಳಕ್ಕಿಳಿದಿದ್ದ ಅದಾನಿ ಸಮೂಹದ ಷೇರುಗಳು ಈ ವಾರ ಮತ್ತೆ ಚೇತರಿಸಿಕೊಂಡಿದೆ. ಅದರಲ್ಲೂ, ಶುಭ ಶುಕ್ರವಾರ ಎನ್ನುವಂತೆ ಅದಾನಿ ಸಮೂದ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗುತ್ತಿದ್ದು, ಅದಾನಿ ಆಸ್ತಿಯೂ ಮತ್ತೆ ಜಿಗಿತ ಕಾಣುತ್ತಿದೆ. ಎರಡೇ ಗಂಟೆಗಳಲ್ಲಿ ಸುಮಾರು 5 ಬಿಲಿಯನ್‌ ಡಾಲರ್‌ನಷ್ಟು ಆಸ್ತಿ ಹೆಚ್ಚಾಗಿತ್ತು. ಇನ್ನು, ಇದರ ಲಾಭ ಕಂಪನಿಗೆ ಮಾತ್ರವಲ್ಲ ಹೂಡಿಕೆದಾರರು ಸಹ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. 

ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ ನೋಡಿ.. ಅದಾನಿ ಗ್ರೂಪ್‌ನ (Adani Group) ಷೇರುಗಳು ಸತತ 3 ದಿನಗಳ ಕಾಲ ಏರಿಕೆ ಕಂಡಿದೆ. ಈ ಹಿನ್ನೆಲೆ ಎರಡು ದಿನಗಳಲ್ಲಿ ಹೂಡಿಕೆದಾರರೊಬ್ಬರು (Investor) ಸುಮಾರು 3000 ಕೋಟಿ ರೂ. ಗಳಿಸಿದ್ದಾರೆ. ಅಮೆರಿಕದ (United States of America) ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರೀಸರ್ಚ್‌ನ (Hindenburg Research) ಖಂಡನೀಯ ವರದಿಯು ಅದಾನಿ ಗ್ರೂಪ್ ಷೇರುಗಳಲ್ಲಿ ಭಾರಿ ಇಳಿಕೆ ಉಂಟುಮಾಡಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ಇದನ್ನು ಓದಿ: ಮರಳಿ ಹಳಿಗೆ ಅದಾನಿ ಗ್ರೂಪ್‌: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್‌ ಜಿಗಿದ ಗೌತಮ್‌ ಅದಾನಿ ಆಸ್ತಿ

ಯುಎಸ್ (US) ಮೂಲದ ರಾಜೀವ್ ಜೈನ್ ಅವರು GQG ಪಾಲುದಾರರ ಸಂಸ್ಥಾಪಕರಾಗಿದ್ದಾರೆ ಮತ್ತು ಪ್ರಸ್ತುತ ಎಲ್ಲಾ GQG ತಂತ್ರಗಳಿಗೆ ಅದರ ಅಧ್ಯಕ್ಷರಾಗಿ ಮತ್ತು ಪೋರ್ಟ್‌ಫೋಲಿಯೋ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎನ್‌ಆರ್‌ಐ ಹೂಡಿಕೆದಾರರು ಈಗ ಎರಡು ದಿನಗಳಲ್ಲಿ 20% ಕ್ಕಿಂತ ಹೆಚ್ಚು ಆದಾಯವನ್ನು ಗಳಿಸಿದ್ದಾರೆ. ಇವರು ಗುರುವಾರದಿಂದ ₹ 3,102 ಕೋಟಿ ಲಾಭ ಗಳಿಸಿದ್ದು, ಪ್ರಸ್ತುತ ಅವರ ಹೂಡಿಕೆಯ ಮೌಲ್ಯ ₹18,548 ಕೋಟಿ ಎಂದು ಹೇಳಲಾಗಿದೆ.

ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ), ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL), ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ (ATL) ಮತ್ತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ನಲ್ಲಿನ ಷೇರುಗಳನ್ನು ದ್ವಿತೀಯ ಮಾರುಕಟ್ಟೆ ಬ್ಲಾಕ್ ಮೂಲಕ ಮಾರಾಟ ಮಾಡಲಾಗಿದೆ ಎಂದು ಅದಾನಿ ಗ್ರೂಪ್‌ನ ಅಧಿಕೃತ ಹೇಳಿಕೆ ದೃಢಪಡಿಸಿದೆ.

ಇದನ್ನೂ ಓದಿ: ಸಂಕಷ್ಟದಲ್ಲೂ ಲಖನೌ ಏರ್‌ಪೋರ್ಟ್‌ ನವೀಕರಣಕ್ಕೆ 5 ಸಾವಿರ ಕೋಟಿ ಹೂಡಿಕೆ ಮಾಡಲಿರೋ ಅದಾನಿ ಸಮೂಹ..! 

"ಹೂಡಿಕೆಯು GQG ಅನ್ನು ನಿರ್ಣಾಯಕ ಭಾರತೀಯ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಹೂಡಿಕೆದಾರರನ್ನಾಗಿ ಮಾಡಿದೆ" ಎಂದೂ ಗ್ರೂಪ್ ಹೇಳಿದೆ. ಗೌತಮ್ ಅದಾನಿಯವರ ಪ್ರಮುಖ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಕಳೆದ ಐದು ದಿನಗಳಲ್ಲಿ ಸುಮಾರು 17% ನಷ್ಟು ಏರಿಕೆಯಾಗಿದ್ದು, ಈ ಬೃಹತ್ ಒಪ್ಪಂದವು ಹೂಡಿಕೆದಾರರ ನಂಬಿಕೆಯನ್ನು ಹೆಚ್ಚಿಸಿದೆ.

ಅದಾನಿ ಪೋರ್ಟ್ಸ್‌ನ ಷೇರುಗಳು 9.81% ರಷ್ಟು ಏರಿಕೆ ಕಂಡರೆ, ಅಂಬುಜಾ ಸಿಮೆಂಟ್ಸ್ 5.70% ಮತ್ತು ACC 5.11% ರಷ್ಟು ಏರಿತು. ಹಾಗೆ, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟೋಟಲ್ ಗ್ಯಾಸ್ ಎಲ್ಲವೂ ಶೇ.5ರಷ್ಟು ಲಾಭ ಗಳಿಸಿವೆ.

 ಇದನ್ನೂ ಓದಿ: ತಿಂಗಳಲ್ಲಿ ಅದಾನಿ ಕಂಪನಿಗೆ 12 ಲಕ್ಷ ಕೋಟಿ ನಷ್ಟ; ಮಾಲೀಕ ಗೌತಮ್‌ ಅದಾನಿ ಆಸ್ತಿ 6.5 ಲಕ್ಷ ಕೋಟಿ ಇಳಿಕೆ

ಈ ಮಧ್ಯೆ, ಶುಕ್ರವಾರದ ಮುಕ್ತಾಯದ ಬೆಲೆಯಂತೆ ಅದಾನಿ ಸಮೂಹದ ಷೇರುಗಳಲ್ಲಿನ ಎಲ್ಐಸಿ ಷೇರುಗಳ ಮೌಲ್ಯ ಸಹ ಸುಮಾರು ₹9,000 ಕೋಟಿಗಳಷ್ಟು ಏರಿಕೆಯಾಗಿದೆ. ಅಮೆರಿಕದ QGQ ಕಂಪನಿ ಅದಾನಿ ಗ್ರೂಪ್‌ನ 4 ಕಂಪನಿಗಳ 17 ಕೋಟಿಗೂ ಹೆಚ್ಚು ಷೇರುಗಳನ್ನು ಖರೀದಿಸಿದ್ದು, ಇದಕ್ಕಾಗಿ ಸಂಸ್ಥೆಯು 15449 ಕೋಟಿ ರೂ. ಹೂಡಿಕೆ ಮಾಡಿತ್ತು. ಬಳಿಕ ಅದಾನಿಗೆ ಜಾಕ್‌ಪಾಟ್‌ ಹೊಡೆದಂತಾಗಿದೆ. ಈ ಸುದ್ದಿಯ ನಂತರ, ಮಾರುಕಟ್ಟೆ ತೆರೆದ 30 ನಿಮಿಷಗಳಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಕ್ಯಾಪ್ ಸುಮಾರು 53 ಸಾವಿರ ಕೋಟಿ ರೂ. ಯಷ್ಟು ಹೆಚ್ಚಾಗಿತ್ತು. 

ಇದನ್ನೂ ಓದಿ: ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ

Latest Videos
Follow Us:
Download App:
  • android
  • ios