Asianet Suvarna News Asianet Suvarna News

ಏ.1ರಿಂದ NPS ನಿಯಮದಲ್ಲಿ ಬದಲಾವಣೆ; ವಿತ್ ಡ್ರಾ ಮಾಡಲು ದಾಖಲೆಗಳನ್ನುಅಪ್ಲೋಡ್ ಮಾಡೋದು ಅಗತ್ಯ

ಎನ್ ಪಿಎಸ್ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಏ.1ರಿಂದ ಬದಲಾವಣೆಯಾಗಲಿದೆ. ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ ಮಾಡಲು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಹಾಗೆಯೇ  ಈ ಹಿಂದಿನಂತೆ ಈಗ ವರ್ಷಾಶನ ಪಡೆಯಲು ಪ್ರತ್ಯೇಕ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಗ್ರಾಹಕರು ಸಲ್ಲಿಸುವ ನಿರ್ಗಮನ ಅರ್ಜಿಯನ್ನೇ ವರ್ಷಾಶನ ಪ್ರಸ್ತಾವನೆ ನಮೂನೆ ಎಂದು ಪರಿಗಣಿಸಲಾಗುತ್ತದೆ. 

NPS rule change from April 1 2023 You will have to mandatorily upload these documents for withdrawal from NPS anu
Author
First Published Mar 30, 2023, 7:52 PM IST

ನವದೆಹಲಿ (ಮಾ.31): ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್ ಪಿಎಸ್) ನಿರ್ಗಮಿಸಿದ ಬಳಿಕ ವರ್ಷಾಶನ ಪಾವತಿಗಳನ್ನು ತ್ವರಿತ ಹಾಗೂ ಸರಳಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಎನ್ ಪಿಎಸ್ ನಿಯಮಗಳಲ್ಲಿ ಬದಲಾವಣೆ ತಂದಿದೆ. ಇದರ ಅನ್ವಯ ಎನ್ ಪಿಎಸ್ ಖಾತೆದಾರರು ವಿತ್ ಡ್ರಾ ಮಾಡಲು ನಿರ್ದಿಷ್ಟ ದಾಖಲೆಗಳನ್ನು 2023ರ ಏಪ್ರಿಲ್ 1ರಿಂದ ಅಪ್ ಲೋಡ್ ಮಾಡೋದು ಕಡ್ಡಾಯ. ಎನ್ ಪಿಎಸ್ ಖಾತೆದಾರರು ವರ್ಷಾಶನ ಖರೀದಿ ಮಾಡುವ ಪ್ರಕ್ರಿಯೆಯನ್ನು ಪಿಎಫ್ ಆರ್ ಡಿಎಯು ಐಆರ್ ಡಿಎಐ ಸಹಭಾಗಿತ್ವದಲ್ಲಿ ನಡೆಸುತ್ತದೆ. ಎನ್ ಪಿಎಸ್ ಯೋಜನೆಯಿಂದ ನಿರ್ಗಮಿಸುವ ಸಂದರ್ಭದಲ್ಲಿ ಗ್ರಾಹಕರು ನೋಡಲ್ ಅಧಿಕಾರಿಗಳಿಗೆ ಅಥವಾ ಪಿಒಪಿಎಸ್ ಗಳಿಗೆ ನೀಡುವ ಎನ್ ಪಿಎಸ್ ವಿತ್ ಡ್ರಾ ಅರ್ಜಿಯನ್ನು ಪರಿಗಣಿಸಿ ವರ್ಷಾಶನ ಸೇವಾ ಪೂರೈಕೆದಾರರು (ಎಎಸ್ ಪಿಎಸ್) ವರ್ಷಾಶನವನ್ನು ನೀಡುತ್ತಾರೆ.  ಈ ಹಿಂದಿನಂತೆ ಈಗ ವರ್ಷಾಶನ ಪಡೆಯಲು ಪ್ರತ್ಯೇಕ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಕಳೆದ ವರ್ಷ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ಎನ್ ಪಿಎಸ್ ಗ್ರಾಹಕರು ಸಲ್ಲಿಸುವ ನಿರ್ಗಮನ ಅರ್ಜಿಯನ್ನೇ ವರ್ಷಾಶನ ಪ್ರಸ್ತಾವನೆ ನಮೂನೆ ಎಂದು ಪರಿಗಣಿಸಲಾಗುತ್ತದೆ. 

2023ರ ಫೆ.22ರಂದು ಪಿಂಚಣಿ ನಿಯಂತ್ರಕರು ಹೊರಡಿಸಿರುವ ಸುತ್ತೋಲೆ ಅನ್ವಯ ಚಂದಾದಾರರಿಗೆ ವರ್ಷಾಶನ ಸಮಯಕ್ಕೆ ಸರಿಯಾಗಿ ಪಾವತಿಯಾಗುವಂತೆ ಮಾಡಲು 2023ರ ಏ.1ರಿಂದ ದಾಖಲೆಗಳನ್ನು ಅಪ್ಲೋಡ್ ಮಾಡೋದು ಕಡ್ಡಾಯ. ಆಯಾ ಕೇಂದ್ರೀಯ ದಾಖಲೆಗಳ ನಿರ್ವಹಣೆ ಏಜೆನ್ಸಿ (CRA) ಬಳಕೆದಾರರ ಇಂಟರ್ ಫೇಸ್ ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಹಾಗೂ ಕಾರ್ಪೋರೇಟರ್ ಗಳನ್ನು ಪಿಂಚಣಿ ನಿಯಂತ್ರಕರು ಕೇಳಿದ್ದಾರೆ. 

ಏ.1ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಬದಲಾವಣೆ; ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಪ್ರಾರಂಭ

ಯಾವೆಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡ್ಬೇಕು?
*ಎನ್ ಪಿಎಸ್ ನಿರ್ಗಮನ/ ಹಿಂತೆಗೆದುಕೊಳ್ಳುವ ನಮೂನೆ
*ನಿರ್ಗಮನ ಅರ್ಜಿಯಲ್ಲಿ ನಮೂದಿಸಿರುವ ಗುರುತು ದೃಢೀಕರಣ ಹಾಗೂ ವಿಳಾಸ
*ಬ್ಯಾಂಕ್ ಖಾತೆ ಪ್ರಮಾಣಪತ್ರ
*ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (PRAN) ಕಾರ್ಡ್

ಪ್ರಸ್ತುತ ಎನ್ ಪಿಎಸ್ (NPS) ಖಾತೆಯಲ್ಲಿರುವ ಹಣ ವಿತ್ ಡ್ರಾ ಮಾಡಲು ನಿವೃತ್ತಿ ಬಳಿಕ ಒಂದು ತಿಂಗಳು ಹಿಡಿಯುತ್ತದೆ. ಇನ್ನು ವರ್ಷಾಶನ ಹಾಗೂ ಪಿಂಚಣಿ (Pension) ಪಡೆಯುವ ಇಡೀ ಪ್ರಕ್ರಿಯೆಗೆ ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ಆದರೆ, ಹೊಸ ಪ್ರಕ್ರಿಯೆ ಬಳಿಕ ವಿತ್ ಡ್ರಾ ಹಾಗೂ ವರ್ಷಾಶನ ಎರಡೂ ಪ್ರಕ್ರಿಯೆಗಳು ತ್ವರಿತವಾಗಿ ಆಗಲಿವೆ. 

ಎನ್ ಪಿಎಸ್ ನಿರ್ಗಮನ ನಿಯಮ ಏನು ಹೇಳುತ್ತೆ?
ಪ್ರಸಕ್ತ ಎನ್ ಪಿಎಸ್ ಗ್ರಾಹಕರು ವರ್ಷಾಶನ ಯೋಜನೆ ಖರೀದಿಗೆ ಮುಕ್ತಾಯದ ಸಮಯದಲ್ಲಿ ಒಟ್ಟು ಸಂಗ್ರಹವಾದ ಕಾರ್ಪಸ್ ನಿಂದ ಕನಿಷ್ಠ ಶೇ.40ರಷ್ಟನ್ನು ಬಳಸಬೇಕು. ಇನ್ನು ಎನ್ ಪಿಎಸ್ ಕಾರ್ಪಸ್ ಉಳಿದ ಶೇ.60ರಷ್ಟನ್ನು ದೊಡ್ಡ ಮೊತ್ತದ ರೂಪದಲ್ಲಿ ಹಿಂಪಡೆಯಲು ಅವಕಾಶವಿದೆ. ಒಟ್ಟು ನಿಧಿ 5ಲಕ್ಷ ರೂ.ಗಿಂತ ಕಡಿಮೆ ಅಥವಾ ಸಮನಾಗಿದ್ದರೆ ಗ್ರಾಹಕರು ಮೆಚ್ಯೂರಿಟಿ ಸಮಯದಲ್ಲಿ ಸಂಪೂರ್ಣ ಮೊತ್ತವನ್ನು ಹಿಂಪಡೆಯುವ ಆಯ್ಕೆ ಹೊಂದಿರುತ್ತಾರೆ. 

ಮಾ.31ಕ್ಕೆ ಕೊನೆಗೊಳ್ಳಲಿವೆ ಈ ನಾಲ್ಕು ಬ್ಯಾಂಕ್ ಗಳ ವಿಶೇಷ FD ಯೋಜನೆಗಳು

ಜ.1ರಿಂದ ಭಾಗಶಃ ಹಿಂತೆಗೆತ ನಿಯಮ ಬದಲು
ಎನ್ ಪಿಎಸ್ ಹೂಡಿಕೆಯಲ್ಲಿ ಭಾಗಶಃ ಮೊತ್ತವನ್ನು ಹಿಂಪಡೆಯುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದ್ದು, ಈ ನಿಯಮವು 2023ರ ಜನವರಿ 1ರಿಂದಲೇ ಜಾರಿಗೆ ಬಂದಿದೆ. ಈ ನಿಯಮವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರ/ರಾಜ್ಯ ಸ್ವಯತ್ತ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯಿಸಲಿದೆ. ಈ  ನಿಯಮದ ಅನ್ವಯ ಉದ್ಯೋಗಿಗಳು ಭಾಗಶಃ ವಿತ್ ಡ್ರಾ ಮಾಡಲು ಅಗತ್ಯವಾದ ದಾಖಲೆಗಳನ್ನು ನೋಡಲ್ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಚಂದಾದಾರರು ಎನ್ ಪಿಎಸ್ ನಿಂದ ಭಾಗಶಃ ವಿತ್ ಡ್ರಾ ಮಾಡಲು ಸ್ವ ಘೋಷಣೆ ನೀಡಿದ್ರೆ ಸಾಕು ಎಂಬ ನಿಯಮವನ್ನು ಪಿಎಫ್ ಆರ್ ಡಿಎ 2021ರ ಜನವರಿ 14ರಂದು ಪರಿಚಯಿಸಿತ್ತು. ಕೋವಿಡ್ ಕಾರಣದಿಂದ ಲಾಕ್ ಡೌನ್ ಮತ್ತಿತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪಿಎಫ್ ಆರ್ ಡಿಎ ಈ ನಿಯಮದಲ್ಲಿ ಬದಲಾವಣೆ ಮಾಡಿತ್ತು. 
 

Follow Us:
Download App:
  • android
  • ios