ನಿಮ್ಮ ಬಳಿ ಡಿಜಿಟಲ್ ಗೋಲ್ಡ್ ಇದೆಯಾ? ಹಾಗಾದ್ರೆ ಲೀಸ್ ಗೆ ನೀಡಿ ಹಣ ಗಳಿಸಬಹುದು!

ಡಿಜಿಟಲ್ ಗೋಲ್ಡ್ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಈ ಡಿಜಿಟಲ್ ಗೋಲ್ಡ್ ಲೀಸ್ ಗೆ ನೀಡಿ ಹಣ ಗಳಿಸುವ ಬಗ್ಗೆ ನಿಮ್ಗೆ ಗೊತ್ತಾ? ಇಂಥದೊಂದು ಅವಕಾಶ ಈಗ ಲಭ್ಯವಾಗಿದೆ. ನಿಮ್ಮ ಬಳಿ ಡಿಜಿಟಲ್ ಗೋಲ್ಡ್ ಇದ್ರೆ ಆನ್ ಲೈನ್ ಡಿಜಿಟಲ್ ಗೋಲ್ಡ್ ಪ್ಲ್ಯಾಟ್ ಫಾರ್ಮ್ ಸೇಫ್ ಗೋಲ್ಡ್ 'ಗೇನ್ಸ್' ಮೂಲಕ ಲೀಸ್ ಗೆ ನೀಡಬಹುದು. 


 

Now you can earn rent on your digital gold but should you go for it

Business Desk: ಡಿಜಿಟಲ್ ಗೋಲ್ಡ್ ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿದೆ. ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡುವ ಬದಲು ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಕಾರಣ ಡಿಜಿಟಲ್ ಗೋಲ್ಡ್ ಆನ್ಲೈನ್ ಉತ್ಪನ್ನವಾಗಿದ್ದು, ಚಿನ್ನವನ್ನು ನೀವು ಖರೀದಿಸಿ ಬ್ಯಾಂಕ್ ಲಾಕರ್ ಅಥವಾ ಇನ್ಯಾವುದೋ ಸುರಕ್ಷಿತ ಜಾಗದಲ್ಲಿಡಬೇಕಾದ ಅಗತ್ಯವಿಲ್ಲ.  ನೀವು ಆನ್ಲೈನ್ನಲ್ಲಿ ಎಷ್ಟು ಚಿನ್ನ ಖರೀದಿ ಮಾಡುತ್ತಿರೋ ಅಷ್ಟೇ ತೂಕದ ಚಿನ್ನವನ್ನು ಮಾರಾಟ ಮಾಡುತ್ತಿರೋ ಸಂಸ್ಥೆ ನಿಮ್ಮ ಹೆಸರಿನಲ್ಲಿ ಖರೀದಿಸಿ ಸುರಕ್ಷಿತವಾಗಿಡುತ್ತದೆ. ಸದ್ಯ ಆನ್ ಲೈನ್ ಡಿಜಿಟಲ್ ಗೋಲ್ಡ್ ಪ್ಲ್ಯಾಟ್ ಫಾರ್ಮ್ ಸೇಫ್ ಗೋಲ್ಡ್ 'ಗೇನ್ಸ್' ಎಂಬ ಸೇವೆ ಪ್ರಾರಂಭಿಸಿದೆ. ಇದರ ಮೂಲಕ ಗ್ರಾಹಕರು ತಮ್ಮ ಡಿಜಿಟಲ್ ಚಿನ್ನವನ್ನು ಗುತ್ತಿಗೆ ಅಥವಾ ಲೀಸ್ ಗೆ ನೀಡಿ ಒಂದಿಷ್ಟು ಹಣ ಸಂಪಾದಿಸಬಹುದು. ಸಣ್ಣ ಜ್ಯುವೆಲ್ಲರ್ಸ್ ಗೆ ಗ್ರಾಹಕರು ಚಿನ್ನವನ್ನು ಲೀಸ್ ಗೆ ನೀಡಬಹುದು. ಯಾವ ಜ್ಯವೆಲ್ಲರ್ಸ್ ಗೆ ಎಷ್ಟು ಅವಧಿಗೆ ಲೀಸ್ ಗೆ ನೀಡಬೇಕು ಎಂಬುದನ್ನು ಕೂಡ ಗ್ರಾಹಕರೇ ತೀರ್ಮಾನಿಸಬಹುದು.  ಡಿಜಿಟಲ್ ಗೋಲ್ಡ್ ಲೀಸ್ ಗೆ ನೀಡೋದ್ರಿಂದ ಎದುರಾಗುವ ಅಪಾಯಗಳೇನು? ಅದನ್ನು ಎದುರಿಸೋದು ಹೇಗೆ? ಇಲ್ಲಿದೆ ಮಾಹಿತಿ.

ಡಿಜಿಟಲ್ ಗೋಲ್ಡ್ ಲೀಸ್ ಅಂದ್ರೇನು?
ಸೇಫ್ ಗೋಲ್ಡ್ ಪ್ರಕಾರ ಗೇನ್ಸ್ ಗ್ರಾಹಕರಿಗೆ ಜ್ಯವೆಲ್ಲರ್ಸ್ ಹಾಗೂ ಲೀಸ್ ಅವಧಿ ಆಯ್ಕೆ ಮಾಡಲು ನೆರವು ನೀಡುತ್ತದೆ. ಜ್ಯುವೆಲ್ಲರ್ಸ್ ಡಿಜಿಟಲ್ ಗೋಲ್ಡ್ ಗೆ ನೀಡುವ ರಿಟರ್ನ್ಸ್ ಗ್ರಾಹಕರು ಆಯ್ಕೆ ಮಾಡಿರುವ ಅವಧಿಯನ್ನು ಆಧರಿಸಿರುತ್ತದೆ. ಸೇಫ್ ಗೋಲ್ಡ್ ವೆಬ್ ಸೈಟ್ ನಲ್ಲಿ ವಿವರಿಸಿರುವ ಎಂಎಸ್ ಎಂಇ ಜ್ಯವೆಲ್ಲರ್ಸ್ ಗಳ ನಂಬಿಕಾರ್ಹತೆ ಹಾಗೂ ಕೆವೈಸಿ ಮಾಹಿತಿಗಳನ್ನು ಪರಿಶೀಲಿಸಲಾಗಿರುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ  0.5ಗ್ರಾಂ ಹಾಗೂ ಗರಿಷ್ಠ 20 ಗ್ರಾಮ್ ಗಳ ಡಿಜಿಟಲ್ ಗೋಲ್ಡ್ ಅನ್ನು ಈ ಯೋಜನೆಯಡಿ ಲೀಸ್ ಗೆ ನೀಡಬಹುದು. 30ರಿಂದ  364 ದಿನಗಳ ಕಾಲ ಲೀಸ್ ಗೆ ನೀಡಬಹುದು. 

ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್‌

'ಬಹುತೇಕ ಲೀಸ್ ಅವಧಿ 90 ಹಾಗೂ 180 ದಿನಗಳ ನಡುವಿನ ಅವಧಿಯದ್ದಾಗಿದೆ. ಇದಕ್ಕೆ ಗ್ರಾಹಕ ವಾರ್ಷಿಕ ಶೇ.3-6ರಷ್ಟು ರಿಟರ್ನ್ ನಿರೀಕ್ಷಿಸಬಹುದು. ಇದಕ್ಕೆ ಸಿಗುವ ಗಳಿಕೆಯನ್ನು ದಿನದ ಆಧಾರದಲ್ಲಿ ಲೆಕ್ಕ ಹಾಕಬಹುದು ಹಾಗೂ ಗ್ರಾಹಕರ ಡಿಜಿಟಲ್ ಗೋಲ್ಡ್ ಖಾತೆಗೆ ಮಾಸಿಕ ಆಧಾರದಲ್ಲಿ ಜಮೆ ಮಾಡಬಹುದು. ಲೀಸ್ ನಿಂದ ಬರುವ ಗಳಿಕೆ ಕೂಡ ಚಿನ್ನದ ರೂಪದಲ್ಲೇ ಇರುತ್ತದೆ. ಹೀಗಾಗಿ ಒಮ್ಮೆಗೆ ಲೀಸ್ ಅವಧಿ ಮುಗಿದ ಬಳಿಕ  ಮೂಲ ಡಿಜಿಟಲ್ ಗೋಲ್ಡ್ ಜೊತೆಗೆ ಗಳಿಕೆಯನ್ನು ಕೂಡ ಚಿನ್ನದ ರೂಪದಲ್ಲಿ ಗ್ರಾಹಕರ ಖಾತೆಗೆ ಜಮೆ ಮಾಡಲಾಗುತ್ತದೆ' ಎಂದು ಸೇಫ್ ಗೋಲ್ಡ್ ಸಂಸ್ಥಾಪಕ ಹಾಗೂ ಎಂಡಿ ಗೌರವ್ ಮಥೂರ್ ತಿಳಿಸಿದ್ದಾರೆ.

ಡಾಲರ್ ಎದುರು 83.08 ರೂಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ!

ಏನೆಲ್ಲ ರಿಸ್ಕ್ ಗಳಿವೆ?
ಸೇಫ್ ಗೋಲ್ಡ್ ವೆಬ್ ಸೈಟ್ ನಲ್ಲಿ ಡಿಜಿಟಲ್ ಗೋಲ್ಡ್ ಲೀಸ್ ಮಾಡೋದ್ರಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ವಿವರಿಸಲಾಗಿದೆ.
ನಿಯಂತ್ರಣವಿಲ್ಲ: ಸೇಫ್ ಗೋಲ್ಡ್ ಪ್ರಕಾರ ಡಿಜಿಟಲ್ ಗೋಲ್ಡ್ ಲೀಸ್ ಪ್ರಕ್ರಿಯೆ ಅನಿಯಂತ್ರಿತವಾಗಿದೆ. ಅಂದರೆ ಯಾವುದೇ ನಷ್ಟ ಅಥವಾ ವಂಚನೆಯ ಸಂದರ್ಭದಲ್ಲಿ ಗ್ರಾಹಕ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಯಾವುದೇ ನಿಯಂತ್ರಣ ಪ್ರಾಧಿಕಾರಗಳಿಂದ ಪರಿಹಾರ ಅಥವಾ ನೆರವು ಕೋರಲು ಸಾಧ್ಯವಾಗೋದಿಲ್ಲ. 
ಲಿಕ್ವಿಡಿಟಿ ರಿಸ್ಕ್ : ಒಮ್ಮೆ ಚಿನ್ನವನ್ನು ಜ್ಯುವೆಲ್ಲರ್ ಗೆ ಲೀಸ್ ಗೆ ನೀಡಿದ ಬಳಿಕ ಲೀಸ್ ಅವಧಿ ಮುಗಿಯುವ ತನಕ ಅದನ್ನು ಮಾರಾಟ ಮಾಡುವಂತಿಲ್ಲ.  ಡಿಜಿಟಲ್ ಗೋಲ್ಡ್ ಆ ಅವಧಿಗೆ ಲಾಕ್ ಆಗಿರುತ್ತದೆ. ಹಾಗೆಯೇ ಗ್ರಹಾಕ ಲೀಸ್ ಅವಧಿ ಮುಗಿಯುವ ಮುನ್ನ ಅದನ್ನು ರದ್ದು ಮಾಡುವಂತಿಲ್ಲ ಕೂಡ. ಆದರೆ, ಜ್ಯುವೆಲ್ಲರ್ ಮಾತ್ರ ಅವಧಿಗೂ ಮುನ್ನ ಲೀಸ್ ಕ್ಯಾನ್ಸಲ್ ಮಾಡಲು ಅವಕಾಶವಿದೆ. ಒಂದು ವೇಳೆ ಜ್ಯುವೆಲ್ಲರ್ ಹೀಗೆ ಮಾಡಿದ್ರೆ ಆ ದಿನದ ತನಕದ ಗಳಿಕೆಯನ್ನು ಗ್ರಾಹಕರ ಡಿಜಿಟಲ್ ಗೋಲ್ಡ್ ಖಾತೆಗೆ ಜಮಾ ಮಾಡಬಹುದು. 

Latest Videos
Follow Us:
Download App:
  • android
  • ios