Asianet Suvarna News Asianet Suvarna News

ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ

ಬ್ಲೂ ಟಿಕ್‌ ಖಾತೆದಾರರಿಗೆ ಮಾಸಿಕ 650 ರು. ಶುಲ್ಕ ವಿಧಿಸುವ ಟ್ವೀಟರ್‌ ಸಂಸ್ಥೆ ಪ್ರಸ್ತಾಪವನ್ನು, ಭಾರತದ ಮೊದಲ ಬ್ಲೂಟಿಕ್‌ ಖಾತೆದಾರೆ ಎಂಬ ದಾಖಲೆ ಹೊಂದಿರುವ ನೈನಾ ರೇಧು ವಿರೋಧಿಸಿದ್ದಾರೆ.

I dont give money for Blue tick said Indian first bluetick User naina Redhu said akb
Author
First Published Nov 9, 2022, 10:55 AM IST

ಜೈಸಲ್ಮೇರ್‌: ಬ್ಲೂ ಟಿಕ್‌ ಖಾತೆದಾರರಿಗೆ ಮಾಸಿಕ 650 ರು. ಶುಲ್ಕ ವಿಧಿಸುವ ಟ್ವೀಟರ್‌ ಸಂಸ್ಥೆ ಪ್ರಸ್ತಾಪವನ್ನು, ಭಾರತದ ಮೊದಲ ಬ್ಲೂಟಿಕ್‌ ಖಾತೆದಾರೆ ಎಂಬ ದಾಖಲೆ ಹೊಂದಿರುವ ನೈನಾ ರೇಧು ವಿರೋಧಿಸಿದ್ದಾರೆ. ನಾನು 16 ವರ್ಷದಿಂದ ಹಣ ಪಾವತಿಸದೆ ಟ್ವೀಟರ್‌ ಬಳಸಿದ್ದೇನೆ. ಈಗಲೂ ಹಣ ಪಾವತಿಸುವುದಿಲ್ಲ ಎಂದು ನೈನಾ ಹೇಳಿದ್ದಾರೆ. 2006ರಲ್ಲಿ ಟ್ವೀಟರ್‌ನಿಂದ ಬ್ಲೂ ಟಿಕ್‌ ಪಡೆದಿದ್ದ ನೈನಾ ರಾಜಸ್ಥಾನದ ಹೊಟೇಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 22000 ಹಿಂಬಾಲಕರಿದ್ದಾರೆ.

ಟ್ವಿಟ್ಟರ್ 2006ರಲ್ಲಿ ಮೊದಲು ಶುರುವಾದಾಗ, ನೈನಾ ರೆಧು (Naina Redhu) ಅವರು ಟ್ವಿಟ್ಟರ್ ಖಾತೆಯನ್ನು ತೆರೆದು ಭಾರತದ ಮೊದಲ ಟ್ವಿಟ್ಟರ್ ಬಳಕೆದಾರರು (Twitter User) ಎನಿಸಿಕೊಂಡಿದ್ದಾರೆ. ಟ್ವಿಟ್ಟರ್ ಆರಂಭದಲ್ಲಿ ಇದ್ದ ರೀತಿ ಹಾಗೂ ಮುಂದೆ ಅದು ಸಾಮಾಜಿಕ ಜಾಲತಾಣದ (Social Media) ಪ್ರಭಾವಶಾಲಿ ಆಪ್ ಆಗಿ ಬೆಳೆದ ರೀತಿಯನ್ನು ನೈನಾ ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ಉದ್ಯಮಿ ಎಲನ್ ಮಸ್ಕ್ ಇದನ್ನು ಖರೀದಿಸಿದ್ದು, ಇದರ ನಂತರದ ಬದಲಾವಣೆಗಳು ಟ್ವಿಟ್ಟರ್ ಮೇಲೆ ಪ್ರಭಾವ ಬೀರುತ್ತಿವೆ ಎಂದು ನೈನಾ ಹೇಳಿದ್ದಾರೆ.

Twitter ಖಾತೆ ಅಮಾನತಿಗೆ ಎಲಾನ್‌ ಮಸ್ಕ್‌ರನ್ನು ವಿಚಾರಣೆಗೆ ಕರೆಸಿ ಎಂದು ಅರ್ಜಿ: ಕೋರ್ಟ್‌ನಿಂದ 25 ಸಾವಿರ ರೂ. ದಂಡ

Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್‌ ವೈರಲ್‌

Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

Follow Us:
Download App:
  • android
  • ios