Asianet Suvarna News Asianet Suvarna News

ವಜಾ ಆದ ಕೆಲವರಿಗೆ ಟ್ವೀಟರ್‌ನಿಂದ ಮರು ನೇಮಕಕ್ಕೆ ಕರೆ!

ಕಂಪನಿಯ 7500 ನೌಕರರ ಪೈಕಿ ಸುಮಾರು 3700 ಜನರನ್ನು ಕೆಲಸದಿಂದ ತೆಗೆದುಹಾಕಿದ್ದ ಟ್ವೀಟರ್‌ ಸಂಸ್ಥೆ, ಇದೀಗ ಈ ಪೈಕಿ ಕೆಲವರಿಗೆ ಮರು ನೇಮಕದ ಆಫರ್‌ ನೀಡಿದೆ.

twitter called some fired employees and offers reappointment akb
Author
First Published Nov 8, 2022, 10:30 AM IST

ನ್ಯೂಯಾರ್ಕ್: ಕಂಪನಿಯ 7500 ನೌಕರರ ಪೈಕಿ ಸುಮಾರು 3700 ಜನರನ್ನು ಕೆಲಸದಿಂದ ತೆಗೆದುಹಾಕಿದ್ದ ಟ್ವೀಟರ್‌ ಸಂಸ್ಥೆ, ಇದೀಗ ಈ ಪೈಕಿ ಕೆಲವರಿಗೆ ಮರು ನೇಮಕದ ಆಫರ್‌ ನೀಡಿದೆ. ಅಚಾತುರ್ಯವಾಗಿ ವಜಾಗೊಂಡವರು ಮತ್ತು ಕಂಪನಿಗೆ ಹೊಸ ರೂಪ ನೀಡಲು ಅತ್ಯಗತ್ಯ ಎಂದು ಕಂಡುಬಂದ ಕೆಲವರಿಗೆ ಕಂಪನಿಯಿಂದ ಮತ್ತೆ ಮರು ನೇಮಕದ ಆದೇಶ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕಂಪನಿ ತಮ್ಮ ಒಡೆತನಕ್ಕೆ ಬಂದ ಬಳಿಕ ಅದಕ್ಕೆ ಹೊಸ ರೂಪ ನೀಡಲು ನಾನಾ ಕಸರತ್ತು ನಡೆಸುತ್ತಿರುವ ಉದ್ಯಮಿ ಎಲಾನ್‌ ಮಸ್ಕ್ (Elon Musk) ನ.7ರಿಂದಲೇ ಬ್ಲೂ ಟಿಕ್‌ (Blue Tick) ಬಳಕೆದಾರರಿಗೆ ಮಾಸಿಕ 8 ಡಾಲರ್‌ (ಅಂದಾಜು 650ರು.) ಶುಲ್ಕ ವಿಧಿಸುವ ಯೋಜನೆ ಜಾರಿಗೆ ಮುಂದಾಗಿದ್ದರು. ಆದರೆ ಅಮೆರಿಕದಲ್ಲಿ (America) ನಡೆಯುತ್ತಿರುವ ಮಧ್ಯಂತರ ಚುನಾವಣೆ ವೇಳೆ ಹೊಸ ಬದಲಾವಣೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಯೋಜನೆ ಜಾರಿಯನ್ನು ಸ್ವಲ್ಪ ಮುಂದೂಡಲಾಗಿದೆ. ಮಸ್ಕ್ 3.5 ಲಕ್ಷ ಕೋಟಿ ರು.ಗೆ ಟ್ವೀಟರ್‌(Twitter) ಅನ್ನು ಖರೀದಿ ಮಾಡಿದ್ದು, ಕಂಪನಿ ನಿತ್ಯ 35 ಕೋಟಿ ರು. ನಷ್ಟ ಅನುಭವಿಸುತ್ತಿದೆ. ಹೀಗಾಗಿ ಕಂಪನಿಯನ್ನು ಮರಳಿ ಲಾಭದ ಹಾದಿಗೆ ತರಲು, ಕಂಪನಿಯ ಆದಾಯ ಹೆಚ್ಚಿಸಲು ನಾನಾ ಉಪಾಯಗಳನ್ನು ಹುಡುಕುತ್ತಿದ್ದಾರೆ.

Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಭಾರತದಲ್ಲಿ ಟ್ವಿಟ್ಟರ್‌ನ ಶೇ.90 ಸಿಬ್ಬಂದಿ ವಜಾ

ಶೇ..50 ರಷ್ಟು ಸಿಬ್ಬಂದಿ ವಜಾ ಮಾಡುವ ಟ್ವಿಟ್ಟರ್ ಸಂಸ್ಥೆಯ ನಿರ್ಧಾರವೂ ಭಾರತದಲ್ಲಿನ ಕಂಪನಿಯ ಮೂಲದ ಉದ್ಯೋಗಿಗಳ ಪಾಲಿಗೆ ಮಾರಕವಾಗಿದೆ. ಬೆಂಗಳೂರು (Bangalore), ಮುಂಬೈ (Mumbai) ಹಾಗೂ ದೆಹಲಿ (Delhi)ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಟ್ವಿಟ್ಟರ್‌ನ 200ರ ಆಸುಪಾಸಿನಷ್ಟು ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಹುದ್ದೆ ಕಡಿತ ಪ್ರಮಾಣವೂ ಜಾಗತಿಕ ಸರಾಸರಿಗಿಂತ (global average) ಭಾರತದಲ್ಲಿ ಬಹುತೇಕ ಡಬಲ್ ಇರುವುದು ಕಳವಳಕ್ಕೆ ಕಾರಣವಾಗಿದೆ. ಭಾರತದಲ್ಲಿ 2.36 ಕೋಟಿಗೂ ಹೆಚ್ಚು ಟ್ವಿಟ್ಟರ್ ಬಳಕೆದಾರರಿದ್ದು, ವಿಶ್ವದ ಸಕ್ರಿಯ ಬಳಕೆದಾರರ ಪೈಕಿ ಭಾರತೀಯ ಬಳಕೆದಾರರು ಮುಂಚೂಣಿಯಲ್ಲಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ 8.4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಜೊತೆಗೆ ಭಾರತ ಟ್ವಿಟ್ಟರ್ ಪಾಲಿಗೆ ಬೆಳವಣಿಗೆ ಸಾಧ್ಯತೆ ಹೊಂದಿರುವ ದೇಶಗಳ ಪೈಕಿ ಒಂದು. ಹೀಗಿರುವಾಗ ಕಂಪನಿ ತನ್ನ ಶೇ.90 ರಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ಏನು ಮಾಡಲು ಮುಂದಾಗಿದೆ ಎಂಬ ಕುತೂಹಲ ಮೂಡಿದೆ. 

Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್‌ ವೈರಲ್‌

Follow Us:
Download App:
  • android
  • ios