ನವದೆಹಲಿ(ಫೆ.12): ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್  ಬೆಲೆಯಲ್ಲಿ ಹೆಚ್ಚಳವಾಗಿದ್ದು, ಗ್ರಾಹಕನ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಂತಾಗಿದೆ.

ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮಹಾನಗರಗಳಲ್ಲಿ ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ.

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಗಳತ್ತ ಗಮನ ಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ: 
14.2 ಕೆ.ಜಿ. ತೂಕದ LPG ಬೆಲೆ 858.50 ರೂ. (144.50 ರೂ. ಹೆಚ್ಚಳ) 

ಪ.ಬಂಗಾಳ ರಾಜಧಾನಿ ಕೊಲ್ಕತ್ತಾ:
14.2 ಕೆ.ಜಿ. ತೂಕದ LPG ಬೆಲೆ 896 ರೂ. (149 ರೂ. ಹೆಚ್ಚಳ)

ವಾಣಿಜ್ಯ ರಾಜಧಾನಿ ಮುಂಬೈ:
14.2 ಕೆ.ಜಿ. ತೂಕದ LPG ಬೆಲೆ 829.50 (145 ರೂ. ಹೆಚ್ಚಳ)

ತಮಿಳುನಾಡು ರಾಜಧಾನಿ ಚೆನ್ನೈ: 
14.2 ಕೆ.ಜಿ. ತೂಕದ LPG ಬೆಲೆ 881 ರೂ. (147 ರೂ. ಹೆಚ್ಚಳ) 

ರಾಜ್ಯ ರಾಜಧಾನಿ ಬೆಂಗಳೂರು: 
14.2 ಕೆ.ಜಿ. ತೂಕದ LPG ಬೆಲೆ 850 ರೂ. 

ಇಡೀ ವರ್ಷಕ್ಕಾಗುವಷ್ಟು ಶಾಕ್ ಒಂದೇ ದಿನದಲ್ಲಿ: ಹ್ಯಾಪಿ(?) ನ್ಯೂ ಇಯರ್ ಎಂದ ಮೋದಿ ಸರ್ಕಾರ!

ಹೊಸ ವರ್ಷದ ಆರಂಭದಲ್ಲೇ 19 ರೂ. ಏರಿಕೆ ಕಂಡಿದ್ದ ಸಿಲಿಂಡರ್ ಬೆಲೆ ಇದೀಗ 100 ರೂ.ಗಿಂತಲೂ ಅಧಿಕ ಏರಿಕೆಯಾಗಿರುವುದು ಗ್ರಾಹಕನ ಅಸಮಾಧಾನಕ್ಕೆ ಕಾರಣವಾಗಿದೆ.