ನಮ್ಮಲ್ಲಿ ಅನೇಕರು ಶ್ರೀಮಂತರಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ನಿಜವಾದ ಶ್ರೀಮಂತರು ಶ್ರೀಮಂತಿಕೆಯನ್ನು ಪ್ರದರ್ಶಿಸುವುದಿಲ್ಲ. 

ನಮ್ಮಲನೇಕರು ಶ್ರೀಮಂತರಲ್ಲದಿದ್ದರೂ ಶ್ರೀಮಂತರಂತೆ ತೋರಿಸಿಕೊಳ್ಳುವುದರಲ್ಲೇ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ನಿಜವಾದ ಶ್ರೀಮಂತರು ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವುದೇ ಇಲ್ಲ, ತೋರಿಸಿಕೊಳ್ಳುವುದಕ್ಕಿಂತ ನಿಜವಾಗಿಯೂ ಶ್ರೀಮಂತರಾಗುವತ್ತ ಅವರ ಗಮನ ಕೇಂದ್ರಿಕರಿಸಲ್ಪಟ್ಟಿರುತ್ತದೆ. ಅಂಕಿ ಅಂಶಗಳ ಪ್ರಕಾರ ವಿಶೇಷವಾಗಿ ಭಾರತದಲ್ಲಿ ಶೇಕಡಾ 80 ರಷ್ಟು ಮಂದಿ ಕಾರನ್ನು ಸಾಲ ಮಾಡಿಯೇ ಕೊಳ್ಳುತ್ತಾರೆ. ಉಳಿದ 20 ಶೇಕಡಾ ಜನ ಮಾತ್ರ ಪೂರ್ತಿ ಹಣ ನೀಡಿ ಕಾರನ್ನು ಕೊಳ್ಳುತ್ತಾರೆ. ಉಳಿದವರು ಜೀವನ ಪೂರ್ತಿ ಇಎಂಐ ಕಟ್ಟುತ್ತಾ ಕೂರುತ್ತಾರೆ. ಆದರೆ ನಿಜವಾಗಿಯೂ ಶ್ರೀಮಂತರಾಗಿರುವರು ಕಾರು ಕೊಳ್ಳೋದೇ ಇಲ್ಲ..! ಇಲ್ಲೊಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ಸಿಇಒ, ಆದರೆ ಅವರ ಬಳಿ ರೊಲೆಕ್ಸ್ ವಾಚ್ ಇರಲ್ಲ, ಗುಸ್ಸಿ ಬೆಲ್ಟ್ ಇರಲ್ಲ, ಯಾವುದೇ ಸ್ಟೈಲಿಶ್ ಡ್ರೆಸ್ ಧರಿಸಲ್ಲ, ಆದರೂ ಅವರು ಜಗತ್ತಿನ ಅತೀ ಹೆಚ್ಚು ಸಂಬಳ ಪಡೆಯುವ ಸಿಇಒ .

ಹೌದು ಗೂಗಲ್ ಹಾಗೂ ಅಲ್ಪಬಿಟ್‌ನ ಸಿಇಒ ಆಗಿರುವ ಸುಂದರ್‌ ಪಿಚೈ ಲೈಫ್‌ಸ್ಟೈಲ್‌ ಅನೇಕರಿಗೆ ಮಾದರಿಯಾಗಿದೆ. ವೆಚ್ಚ ಮಾಡಲು ಬೇಕಾದಷ್ಟು ದುಡ್ಡಿದ್ದರೂ ಶೋಕಿ ಜೀವನ ಅವರದಲ್ಲ ಬೃಹತ್ ಗಳಿಕೆಯ ಹೊರತಾಗಿಯೂ ಸರಳತೆಗೆ ಹೆಸರಾಗಿರುವ ಅವರ ನಿವ್ವಳ ಮೌಲ್ಯ ₹12,000 ಕೋಟಿ ($1.5 ಬಿಲಿಯನ್) ಮತ್ತು ₹1,800 ಕೋಟಿ ($225 ಮಿಲಿಯನ್) ಗಿಂತ ಹೆಚ್ಚಿನ ವಾರ್ಷಿಕ ವೇತನವನ್ನು ಹೊಂದಿದ್ದುವಿಶ್ವದ ಅತ್ಯಂತ ಶಕ್ತಿಶಾಲಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಗೂಗಲನ್ನು ಮುನ್ನಡೆಸುತ್ತಿದ್ದಾರೆ. 

ಚೆನ್ನೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸುಂದರ್ ಪಿಚೈ ಗೂಗಲ್‌ನ ಮುಖ್ಯಸ್ಥರಾಗುವವರೆಗೆ ಬೆಳೆದ ರೀತಿಯೇ ಒಂದು ಸ್ಪೂರ್ತಿದಾಯಕ ಕತೆಯಾಗಿದೆ. ಅವರು ಸ್ಟೈಲಿಗಿಂತ ಹೆಚ್ಚಾಗಿ ಜೀವನಾಧಾರದ ಮೇಲೆ ನಂಬಿಕೆ ಇಟ್ಟಿದ್ದರು. ಅವರು ಯಶಸ್ಸು ಹಾಗೂ ತಮ್ಮ ಸಂಪತ್ತನ್ನು ಪ್ರದರ್ಶಿಸುವುದರ ಬದಲಾಗಿ ತಮ್ಮದೇ ಆದ ಪ್ರಭಾವವನ್ನು ಸೃಷ್ಟಿಸುವುದು ಅವರ ಗುರಿಯಾಗಿತ್ತು. ಯಶಸ್ಸು ಎಂದರೆ ಶ್ರೀಮಂತಿಕೆಯನ್ನು ತೋರಿಸುವುದಲ್ಲ, ತಮ್ಮದೇ ಆದ ಪ್ರಭಾವವನ್ನು ಸೃಷ್ಟಿಸುವುದು ಎಂಬುದನ್ನು ಪಿಚೈ ಸಾಬೀತುಪಡಿಸಿದ್ದಾರೆ. 

ಐಐಟಿ ಖರಗ್‌ಪುರದ ಪದವೀಧರರಾಗಿರುವ ಸುಂದರ್ ಪಿಚೈ ಅಮೆರಿಕಾದ ಪೆನ್ಸಿಲ್ವೆನಿಯಾ ವಿವಿಯ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. 2004ರಲ್ಲಿ ಗೂಗಲ್ ಸೇರಿದ ಪಿಚೈ ಗೂಗಲ್‌ನ ಮಹತ್ವದ ಪ್ರಾಜೆಕ್ಟ್‌ಗಳಾದ ಗೂಗಲ್ ಕ್ರೋಮ್, ಗೂಗಲ್ ಡ್ರೈವ್, ಅಂಡ್ರಾಯಿಡ್ ಮುಂತಾದವುಗಳ ಮುಂದಾಳತ್ವ ವಹಿಸಿದ್ದರು. ನಂತರ 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡರು 2019ರಲ್ಲಿ ಅಲ್ಪಾಬಿಟ್‌ನ ಸಿಇಒ ಕೂಡ ಆದರು. ಏಕೆಂದರೆ ಅವರ ಗುರಿ ಶ್ರೀಮಂತರಾಗುವುದಾಗಿತ್ತು ಹೊರತು ಶ್ರೀಮಂತರಂತೆ ತೋರಿಸಿಕೊಳ್ಳುವುದು ಆಗಿರಲಿಲ್ಲ.

View post on Instagram