Asianet Suvarna News Asianet Suvarna News

ಬಿಟ್ ಕಾಯಿನ್ ನಿಷೇಧಕ್ಕೆ ಸಮಿತಿ ರಚಿಸಿಲ್ಲ ಎಂದ ಆರ್‌ಬಿಐ

ಬಿಟ್ ಕಾಯಿನ್ ಮೇಲೆ ನಿಗಾವಹಿಸಲು ಆಂತರಿಕ ಸಮಿತಿ ಇಲ್ಲ

ಆರ್‌‌ಐಟಿ ಅರ್ಜಿಗೆ ಆರ್‌ಬಿಐ ಸ್ಪಷ್ಟ ಉತ್ತರ

ಹಣಕಾಸು ಸಚಿವಾಲಯದ ಸಮಿತಿಯಲ್ಲಿ ಆರ್‌ಬಿಐ ಪ್ರತಿನಿಧಿಗಳು

ಕ್ರಿಫ್ಟಾ ಕರೆನ್ಸಿ ನಿಷೇಧದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
 

No research backing RBI's move to ban cryptocurrencies

ನವದೆಹಲಿ(ಜೂ.13): ಬಿಟ್ ಕಾಯಿನ್ ಮೇಲೆ ನಿಗಾ ವಹಿಸಲು ಯಾವುದೇ ರೀತಿಯ ಆಂತರಿಕ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಕಳೆದ ಏಪ್ರಿಲ್ ನಲ್ಲೇ ಆರ್‌ಬಿಐ ಬಿಟ್ ಕಾಯಿನ್ ಮೇಲೆ ನಿಷೇಧ ಹೇರಿದ್ದು, ಬಿಟ್‌‌ ಕಾಯಿನ್‌ ವಿನಿಮಯದಿಂದ ಹಿಂದೆ ಸರಿಯುವುದು ಕಡ್ಡಾಯ ಎಂದು ಬ್ಯಾಂಕ್‌ಗಳು, ಇ-ವಾಲೆಟ್‌ಗಳಿಗೆ ಸೂಚನೆ ನೀಡಿತ್ತು. 

ಆದರೆ ಸ್ಟಾರ್ಟ್ ಅಪ್ ಸಲಹೆಗಾರ ವರುಣ್‌ ಸೇಥಿ ಎಂಬುವವರು ಸಲ್ಲಿಸಿದ್ದ ಆರ್‌‌ಐಟಿ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ, ಬಿಟ್‌‌ ಕಾಯಿನ್‌ ವ್ಯವಹಾರದ ಕುರಿತು ನಿಗಾವಹಿಸಲು ಯಾವುದೇ ರೀತಿಯ ಆಂತರಿಕ ಸಮಿತಿ ರಚನೆ ಮಾಡಿಲ್ಲ ಎಂದು ಹೇಳಿದೆ.

ಆದರೆ ಭಾರತದಲ್ಲಿ ಬಿಟ್‌‌ ಕಾಯಿನ್‌ ವ್ಬಯವಹಾರದ ಬಗೆಗಿನ ಅಧ್ಯಯನದ ಬಗ್ಗೆ ಹಣಕಾಸು ಸಚಿವಾಲಯದಡಿ ರಚಿಸಲಾಗಿರುವ ಎರಡು ಪ್ರತ್ಯೇಕ ಸಮಿತಿಗಳಲ್ಲಿ ಆರ್‌ಬಿಐ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹವಾಗಿದೆ. 

ಕ್ರಿಫ್ಟಾ ಕರೆನ್ಸಿ ಬಳಕೆ ಹಾಗೂ ವ್ಯವಹಾರಗಳ ನಿಷೇಧದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯುತ್ತಿದ್ದು, ಜುಲೈ 20ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. 2018ರ ಬಜೆಟ್‌ ವೇಳೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಿಟ್‌ ಕಾಯಿನ್‌ ವ್ಯವಹಾರ ಕಾನೂನು ಬದ್ಧವಲ್ಲ. ಅಂತಹ ವ್ಯವಹಾರಕ್ಕೆ ಭಾರತದಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದು ಘೋಷಿಸಿದ್ದರು.

Follow Us:
Download App:
  • android
  • ios