Asianet Suvarna News Asianet Suvarna News

Foreign Exchange Reserves:ಅತೀಹೆಚ್ಚು ಫೋರೆಕ್ಸ್ ಸಂಗ್ರಹ ಹೊಂದಿರೋ ಜಗತ್ತಿನ ನಾಲ್ಕನೇ ರಾಷ್ಟ್ರ ನಮ್ಮದು: ಸಚಿವ ಚೌಧರಿ

ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಈ ವರ್ಷ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಈಗ ಭಾರತ ಜಗತ್ತಿನ ನಾಲ್ಕನೇ ಅತೀಹೆಚ್ಚು ವಿದೇಶಿ ವಿನಿಮಯ ಸಂಗ್ರಹ ಹೊಂದಿರೋ ರಾಷ್ಟ್ರ ಎಂಬ ಮಾಹಿತಿಯನ್ನು  ವಿತ್ತ ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ನೀಡಿದ್ದಾರೆ.

India has 4th largest foreign exchange reserves in world says MOS Finance anu
Author
Bangalore, First Published Dec 6, 2021, 6:49 PM IST

ನವದೆಹಲಿ (ಡಿ.6): ಭಾರತವು ಪ್ರಸಕ್ತ ಜಗತ್ತಿನ ನಾಲ್ಕನೇ ಅತಿದೊಡ್ಡ ವಿದೇಶಿ ವಿನಿಮಯ ಸಂಗ್ರಹ  (Forex)ಹೊಂದಿರೋ  ರಾಷ್ಟ್ರವಾಗಿದೆ  ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ. ಭಾರತದ ವಿದೇಶಿ ವಿನಿಮಯ ಸಂಗ್ರಹ 2021ರ ನವೆಂಬರ್ 19ಕ್ಕೆ ಅನ್ವಯವಾಗುವಂತೆ 640.4 ಬಿಲಿಯನ್ ಡಾಲರ್ ಇದೆ ಎಂದರು.

ವಿದೇಶಿ ಹೂಡಿಕೆದಾರರ (Foreign Investors) ಮೇಲೆ ನಿಗಾವಿಡಲು ಪಿ-ನೋಟ್ಸ್ (P-notes) ಅಥವಾ offshore derivative instruments (ODIs) ಹೊಂದಿರೋರ ಗುರುತು ಪತ್ತೆಯನ್ನು ಹಣ ಅಕ್ರಮ ಸಾಗಾಟ (ದಾಖಲೆಗಳ ನಿರ್ವಹಣೆ) ಕಾಯ್ದೆ ತಡೆ ನಿಯಮಗಳು 2005ರ ನಿಯಮ 9 ಅನ್ವಯ ಮಾಡಲಾಗುತ್ತಿದೆ. ಈ ಬಗ್ಗೆ ಸೆಬಿಗೆ (sebi) ಪ್ರತಿ ತಿಂಗಳು ODI ವಿತರಿಸೋ ವಿದೇಶಿ ಬಂಡವಾಳ ಹೂಡಿಕೆದಾರರು (FPIs) ಮಾಹಿತಿ ನೀಡುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸೋ ಸಮಯದಲ್ಲಿ ಮಾಹಿತಿ ನೀಡಿದರು.

ಏ.1ರಿಂದ ಟೋಬಿ ಕ್ಸು ನೂತನ ಮುಖ್ಯ ಹಣಕಾಸು ಅಧಿಕಾರಿ

ODIs ವಿತರಿಸೋ ವಿದೇಶಿ ಬಂಡವಾಳ ಹೂಡಿಕೆದಾರರು (FPIs) ODIs ಗ್ರಾಹಕರ ಕೆವೈಸಿ ಮಾಹಿತಿಯನ್ನು ನಿರ್ವಹಣೆ ಮಾಡಬೇಕು. ಸೆಬಿ ಈ ಬಗ್ಗೆ ಮಾಹಿತಿ ಕೇಳಿದ ತಕ್ಷಣ  ಒದಗಿಸಬೇಕು ಎಂದು ಸಚಿವರು ಹೇಳಿದರು.
ಕಳೆದ ಏಳು ಹಣಕಾಸು ವರ್ಷಗಳಲ್ಲಿ (2014-15ರಿಂದ 2020-21ರ ತನಕ) ಪೆಟ್ರೋಲ್ ಉತ್ಪನ್ನಗಳ ಮೇಲೆ ವಿಧಿಸಿದ ತೆರಿಗೆ ಸೇರಿದಂತೆ  ಒಟ್ಟು ಸಂಗ್ರಹವಾಗಿರೋ ಕೇಂದ್ರ ಅಬಕಾರಿ ಸುಂಕದ ಮೊತ್ತ 16.7ಲಕ್ಷ ಕೋಟಿ ರೂ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸೋ ಸಂದರ್ಭದಲ್ಲಿ ಸಚಿವರು ಮಾಹಿತಿ ನೀಡಿದರು. 2013-14ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ ಗೆ 9.2ರೂ. ಇತ್ತು. ಇನ್ನು ಡೀಸೆಲ್ ಮೇಲೆ ಲೀಟರ್ ಗೆ 3.46ರೂ. ಆಗಿತ್ತು. ಆದ್ರೆ ಪ್ರಸ್ತುತ ಪೆಟ್ರೋಲ್ ಮೇಲೆ ಕೇಂದ್ರ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 27.9ರೂ. ಹಾಗೂ ಡೀಸೆಲ್ ಲೀಟರ್ ಗೆ 21.08ರೂ. ಆಗಿದೆ ಎಂದರು. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಬಂದ ಹಣವನ್ನು ಮೂಲಸೌಕರ್ಯ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದರು. 

ವಾರೆನ್ ಬಫೆಟ್ ಗೆ ಬಿಟ್ ಕಾಯಿನ್ ಅಂದ್ರೆ ಅಲರ್ಜಿ, ಯಾಕ್ ಗೊತ್ತಾ?

ಏನಿದು ವಿದೇಶಿ ವಿನಿಮಯ ಸಂಗ್ರಹ?
ಪ್ರತಿ ರಾಷ್ಟ್ರಕ್ಕೂ ವಿದೇಶಿ ವಿನಿಮಯ ಸಂಗ್ರಹ ಅಗತ್ಯ. ನಗದು ಅಥವಾ ಇತರ ಆಸ್ತಿಗಳ ರೂಪದಲ್ಲಿ ಒಂದು ರಾಷ್ಟ್ರದ ಕೇಂದ್ರ ಬ್ಯಾಂಕ್ (Central bank) ಬಳಿಯಿರೋ ಸಂಪತ್ತನ್ನೇ ವಿದೇಶಿ ವಿನಿಮಯ ಸಂಗ್ರಹ ಎನ್ನಬಹುದು. ಇದ್ರಲ್ಲಿ ಬೇರೆ ಬೇರೆ ರಾಷ್ಟ್ರಗಳ ಕರೆನ್ಸಿ, ಚಿನ್ನವನ್ನು ಒಳಗೊಂಡಿರುತ್ತದೆ.  ಭಾರತದ ವಿಷಯಕ್ಕೆ ಬಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve ank of India) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿರುತ್ತದೆ. ಯಾವುದೇ ಒಂದು ರಾಷ್ಟ್ರಕ್ಕೆ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ವಿದೇಶಿ ವಿನಿಮಯ ಸಂಗ್ರಹ ಮೊದಲ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆ ರಾಷ್ಟ್ರದ ಕರೆನ್ಸಿಯ ಅಂತಾರಾಷ್ಟ್ರೀಯ ಮೌಲ್ಯದ ಮೇಲೆ ಪರಿಣಾಮ ಬೀರೋ ಜೊತೆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರಭಾವ ಬೀರುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟಿನ ಮೇಲೂ ಇದು ಪರಿಣಾಮ ಬೀರುತ್ತದೆ. ಭಾರತದ ವಿದೇಶಿ ವಿನಿಮಯ ಸಂಗ್ರಹ ಜೂನ್ ನಲ್ಲಿ 608ಶತಕೋಟಿ ಡಾಲರ್ಗೆ ಏರಿಕೆ ಕಂಡಿತ್ತು. ಚೀನಾ, ಜಪಾನ್ ಸ್ವಿಜರ್ಲೆಂಡ್ ಬಳಿಕ ಅತೀ ಹೆಚ್ಚು ವಿದೇಶಿ ವಿನಿಮಯ ಸಂಗ್ರಹ ಹೊಂದಿರೋ ರಾಷ್ಟ್ರ ಭಾರತವಾಗಿದೆ. ಭಾರತ 600 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ವಿದೇಶಿ ವಿನಿಮಯ ಸಂಗ್ರಹ ಹೊಂದಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ ಈ ಮೊತ್ತ  ಕಡಿಮೇನೆ. ಭಾರತದ ಆಮದು ಮತ್ತು ಸಾಲದ ಪ್ರಮಾಣಕ್ಕೆ ಹೋಲಿಸಿದ್ರೆ ವಿದೇಶಿ ವಿನಿಮಯ ಸಂಗ್ರಹದ ಮೊತ್ತ ಕಡಿಮೆ ಎಂದು ಹೇಳಲಾಗುತ್ತಿದೆ. 
 

Follow Us:
Download App:
  • android
  • ios