Asianet Suvarna News Asianet Suvarna News

500 ರೂ ನೋಟು ಹಿಂತೆಗೆತ, 1000 ರೂ ನೋಟು ಮರು ಚಲಾವಣೆ ಕುರಿತು ಆರ್‌ಬಿಐ ಸ್ಪಷ್ಟನೆ!

2,000 ರೂಪಾಯಿ ನೋಟು ಹಿಂತೆಗೆದ ಬಳಿಕ ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವೆಡೆ 500 ರೂಪಾಯಿ ನೋಟು ಕೂಡ ಹಿಂತೆಗೆದುಕೊಳ್ಳಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಆರ್‌ಬಿಐ ಗವರ್ನರ್ ಸ್ಪಷ್ಟನೆ ನೀಡಿದ್ದಾರೆ.
 

No plan to withdraw rs 500 note Or re introduce rs 1000 note says RBI Governor shaktikanta das ckm
Author
First Published Jun 8, 2023, 1:47 PM IST

ನವದೆಹಲಿ(ಜೂ.08) ನೋಟು ಅಮಾನ್ಯೀಕರಣ ಬಳಿಕ ಆರ್‌ಬಿಐ 2,000 ರೂಪಾಯಿ ಮುಖಬೆಲೆ, 500 ರೂಪಾಯಿ, 200 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ತಂದಿತ್ತು. ಈ ಪೈಕಿ 2,000 ರೂಪಾಯಿ ನೋಟುಗಳನ್ನು ಆರ್‌ಬಿಐ ಹಿಂತೆಗೆದುಕೊಂಡಿದೆ. ಈ ನಿರ್ಧಾರ ಘೋಷಣೆಯಾದ ಬೆನ್ನಲ್ಲೇ 500 ರೂಪಾಯಿ ನೋಟುಗಳನ್ನು ಆರ್‌ಬಿಐ ಹಿಂತೆಗೆದುಕೊಳ್ಳಲಿದೆ. ಜೊತೆಗೆ ಹೊಸದಾಗಿ 1,000 ರೂಪಾಯಿ ನೋಟುಗಳು ಚಲಾವಣೆಗೆ ತರಲಾಗುತ್ತದೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣ ಸೇರಿದಂತೆ ಹಲೆವೆಡೆ ಕೇಳಿಬಂದಿತ್ತು. ಇದು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿತ್ತು. ಇದೀಗ ಈ ಊಹ ಪೋಹ ಕುರಿತು ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಸ್ಪಷ್ಟನೆ ನೀಡಿದ್ದಾರೆ. 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಿಲ್ಲ. ಜೊತಗೆ 1,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಚಲಾವಣೆಗೆ ತರುವುದಿಲ್ಲ ಎಂದು ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ.

500 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ಆರ್‌ಬಿಐ ಬಳಿ ಇಲ್ಲ. ಈ ಕುರಿತು ಜನರು ಗೊಂದಲಕ್ಕೀಡಾಗುವುದು ಬೇಡ. ಇನ್ನು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರುವುದಿಲ್ಲ.  ಈ ವಿಚಾವಾಗಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ. 

ಸಾಲಗಾರರಿಗೆ ಗುಡ್‌ ನ್ಯೂಸ್‌: ಹಣದುಬ್ಬರ ಇಳಿಕೆ ಹಿನ್ನೆಲೆ ರೆಪೋ ದರ ಏರಿಸದ RBI

2000 ರೂಪಾಯಿ ನೋಟು ಹಿಂತೆಗೆತ ನಿರ್ಧಾರ ಘೋಷಿಸಿದ ಬಳಿಕ ಅರ್ಧದಷ್ಟು ನೋಟುಗಳು ಮರಳಿ ಬಂದಿದೆ. 1.80 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ವಾಪಸ್ ಬಂದಿದೆ. ಇದೇ ವೇಳೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಲು ಕೊನೆಯ ದಿನಾಂಕದ ವರೆಗೆ ಕಾಯಬೇಡಿ. ಸೆಪ್ಟೆಂಬರ್ ತಿಂಗಳವರೆಗೆ 2,000 ರೂಪಾಯಿ ನೋಟು ಬದಲಾಯಿಸಲು ಅವಕಾಶವಿದೆ. ಹೀಗಾಗಿ ಈಗಲೇ ಬದಲಾಯಿಸಿಕೊಳ್ಳಿ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಯುದ್ಧ, ವಿಪತ್ತಿನ ವೇಳೆ ಬಳಕೆಗೆಂದೇ ಆರ್‌ಬಿಐ ಹೊಸ ಪಾವತಿ ವ್ಯವಸ್ಥೆ ಅಭಿವೃದ್ಧಿ!

ಚಲಾವಣೆಯಿಂದಕ್ಕೆ ಹಿಂದಕ್ಕೆ ಪಡೆಯಲಾದ 2000 ರು. ಮುಖಬೆಲೆಯ ನೋಟುಗಳ ಬದಲಾವಣೆ ಮತ್ತು ಜಮೆ ಪ್ರಕ್ರಿಯೆ, ಯಾವುದೇ ಅಡ್ಡಿ- ಆತಂಕವಿಲ್ಲದೇ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘2000 ರುಪಾಯಿ ನೋಟು ಬದಲಾವಣೆ ಮತ್ತು ಜಮೆಗೆ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ 4 ತಿಂಗಳ ಕಾಲಾವಕಾಶ ನೀಡಲಾಗಿದೆ. ಬದಲಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಎಲ್ಲೂ ಹೆಚ್ಚಿನ ಜನಸಂದಣಿ ಇಲ್ಲ. ನಾವು ಎಲ್ಲೆಡೆಯ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದೇವೆ. ಹೀಗಾಗಿ ಇಡೀ ಪ್ರಕ್ರಿಯೆಗೆ ಯಾವುದೇ ಅಡ್ಡಿ- ಆತಂಕ ಎದುರಾಗಲಿದೆ ಎಂದು ಅನ್ನಿಸುತ್ತಿಲ್ಲ. ಎಲ್ಲಾ ಪ್ರಕ್ರಿಯೆಗಳು ಸಾಮಾನ್ಯ ಸ್ವರೂಪದಲ್ಲೇ ನಡೆದುಕೊಂಡು ಹೋಗುತ್ತಿದೆ. ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದರು.

Follow Us:
Download App:
  • android
  • ios