ಭಾರತದಲ್ಲಿ ಇದೀಗ ಯುಪಿಐ ಮೂಲಕವೇ ಅತೀ ಹೆಚ್ಚು ವಹಿವಾಟು ನಡೆಯುತ್ತಿದೆ. ಆದರೆ ಇತ್ತೀಚೆಗೆ 2000 ರೂಪಾಯಿಗಿಂತ ಅಧಿಕ ವಹಿವಾಟಿಗಗೆ ಜಿಎಸ್‌ಟಿ ಪಾವತಿಸಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ನವದೆಹಲಿ(ಏ.19) ಯುಪಿಐ ಇದೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ, ಆತ್ಮೀಯರ ಜೊತೆಗಿನ ಹಣವ್ಯವಹಾರದಿಂದ ಹಿಡಿದು ಉದ್ಯಮಿಗಳವರೆಗೆ, ಬಿಲ್ ಪಾವತಿ, ಖರೀದಿ ಪಾವತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಯುಪಿಐ ವಹಿವಾಟು ಹೆಚ್ಚಾಗುತ್ತಿದೆ. ಭಾರತದ ಡಿಜಿಟಲ್ ಕರೆನ್ಸಿ ಉಪಯೋಗಿಸುತ್ತಿರುವ ರಾಷ್ಟ್ರಗ ಪೈಕಿ ಮುಂಚೂಣಿಯಲ್ಲಿದೆ. ಆಧರೆ ಇತ್ತೀಚೆಗೆ ಯುಪಿಐ ಮೇಲೆ ಜಿಎಸ್‌ಟಿ, ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಗೊಂದಲ ಹೆಚ್ಚಾಗುತ್ತಿದ್ದಂತೆ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.2000 ರೂಪಾಯಿಗಿಂತ ಮೇಲ್ಪಟ್ಟ ವಹಿವಾಟಿಗೆ ಯಾವುದೇ ಜಿಎಸ್‌ಟಿ ಶುಲ್ಕ ವಿಧಿಸುತ್ತಿಲ್ಲ. ಈ ಕುರಿತು ಹರಿದಾಡುತ್ತಿರುವ ಮಾಹಿತಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಜಿಎಸ್‌ಟಿ ಸೇರಿ ಯಾವುದೇ ಶುಲ್ಕ ಇಲ್ಲ
ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿಲ್ಲ. ಈ ಕುರಿತು ಯಾವುದೇ ಪ್ರಸ್ತಾವನೆಗಳು, ಆಲೋಚನೆಗಳು ಸರ್ಕಾರದ ಮುಂದಿಲ್ಲ. ಕೇಂದ್ರ ಸರ್ಕಾರ ಭಾರತದಲ್ಲಿ ಯುಪಿಐ ವಹಿವಾಟು ಹೆಚ್ಚಿಸಲು ಉತ್ತೇಜನ ನೀಡುತ್ತಿದೆ. ಡಿಜಿಟಲ್ ಕರೆನ್ಸಿ, ಡಿಜಿಟಲ್ ವಹಿವಾಟು ಸೇರಿದಂತೆ ಡಿಜಿಟಲ್ ಇಂಡಿಯಾಗೆ ವಿಶೇಷ ಗಮನ ನೀಡುತ್ತಿದೆ. ಹೀಗಾಗಿ ಈ ಕುರಿತು ಗೊಂದಲಕ್ಕೀಡಾಗುವ, ಆತಂಕ ಪಡುವ ಅವಶ್ಯಕತೆ ಇಲ್ಲ. ಯುಪಿಐ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲ ಹೇಳಿದೆ. ಹಣಕಾಸು ಸಚಿವಾಲಯ ಹಾಗೂ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (CBIC) ಇಂತಹ ಯಾವುದೇ ಪ್ರಸ್ತಾಪ ಪರಿಗಣಿಸುತ್ತಿಲ್ಲ ಎಂದಿದೆ.
ಯುಪಿಐ ಸೇವೆ ಇನ್ನು ಉಚಿತವಲ್ಲ, 2000 ರೂ ಮೇಲ್ಪಟ್ಟ ಟ್ರಾನ್ಸಾಕ್ಷನ್‌ಗೆ MDR ಶುಲ್ಕ ಪ್ರಸ್ತಾವನೆ
ಬಳಕೆದಾರರ ಆತಂಕ ದೂರ
UPI ಬಳಕೆದಾರರಲ್ಲಿ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ವ್ಯವಾಹರರ ನಡೆಸುತ್ತಿರುವರಲ್ಲಿ ಶುಲ್ಕ ಪಾವತಿ ಮಾಹಿತಿ ಆತಂಕ ಸೃಷ್ಟಿಸಿತ್ತು. ಸರ್ಕಾರವು ಹೆಚ್ಚಿನ ಮೌಲ್ಯದ UPI ಪಾವತಿಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲು ಯೋಜಿಸುತ್ತಿದೆ ಎಂದು ಈ ಮಾಹಿತಿಗಳಲ್ಲಿ ಹೇಳಲಾಗಿತ್ತು. ಇದರಿಂದ ಹಲವರು ನಗದು ವ್ಯವಹಾರಕ್ಕೆ ಮರಳಲು ನಿರ್ಧರಿಸಿದ್ದರು. ಇದೀಗ ಕೇಂದ್ರ ಸರ್ಕಾರದ ಸ್ಪಷ್ಟನೆಯಿಂದ ಹಲವರು ನಿರಾಳರಾಗಿದ್ದಾರೆ.
UPI ವಹಿವಾಟುಗಳ ಮೇಲೆ, ವಿಶೇಷವಾಗಿ ವ್ಯಕ್ತಿಗಳು ಮತ್ತು ವ್ಯಾಪಾರಿಗಳ ನಡುವೆ ಯಾವುದೇ MDR ಶುಲ್ಕ ವಿಧಿಸುತ್ತಿಲ್ಲ. ಇದರಿಂದ GST ಅನ್ವಯಿಸುವುದಿಲ್ಲ. ಭಾರತದ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಗುರಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.
ಮಾರ್ಚ್ 2025 ರಲ್ಲಿ UPI ವಹಿವಾಟುಗಳು 24.77 ಲಕ್ಷ ಕೋಟಿ ರೂಪಾಯಿಗಳಷ್ಟು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಹಿಂದಿನ ತಿಂಗಳಿಗಿಂತ 12.7% ಹೆಚ್ಚಳವಾಗಿದೆ.
ಮಾರ್ಚ್ 2024 ಕ್ಕೆ ಹೋಲಿಸಿದರೆ, ವಹಿವಾಟಿನ ಮೌಲ್ಯವು 25% ರಷ್ಟು ಹೆಚ್ಚಾಗಿದೆ ಮತ್ತು ವಹಿವಾಟಿನ ಪ್ರಮಾಣವು 36% ರಷ್ಟು ಏರಿಕೆಯಾಗಿದೆ.
ACI ವರ್ಲ್ಡ್‌ವೈಡ್ ವರದಿ 2024, 2023 ರಲ್ಲಿ ಎಲ್ಲಾ ಜಾಗತಿಕ ನೈಜ-ಸಮಯದ ವಹಿವಾಟುಗಳಲ್ಲಿ ಭಾರತವು 49% ರಷ್ಟಿದೆ ಎಂದು ಎತ್ತಿ ತೋರಿಸಿದೆ, UPI ಅನ್ನು ವಿಶ್ವದ ಅತ್ಯಂತ ಮುಂದುವರಿದ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿ ಇರಿಸಿದೆ.
ಕೈಯಲ್ಲಿ ಕಾಸಿದ್ದವನೇ ಕಿಂಗ್; ಕೈಕೊಟ್ಟ ಜಿಪೇ, ಪೇಟಿಎಂ, ಫೋನ್‌ಪೇ ಸೇರಿ ಯುಪಿಐ ಆ್ಯಪ್ಸ್
