ಒಂದು ಕಾಲದಲ್ಲಿ ಕೈಯಲ್ಲಿ ದುಡ್ಡಿದ್ದವನೇ ಕಿಂಗ್. ಬಳಿಕ ಯುಪಿಐ ಆ್ಯಪ್ ಬಂದ ಮೇಲೆ ಡಿಜಿಟಲ್ ವಹಿವಾಟು ಹೆಚ್ಚಾಯಿತು. ಹಲವರು ಸಂಪೂರ್ಣ ಯುಪಿಐ ಅವಲಂಬಿಸಿದ್ದಾರೆ. ಇದೀಗ ಯುಪಿಐ ನಂಬಿದವನಿಗೆ ಪದೇ ಪದೇ ಈ ಆ್ಯಪ್ ಕೈಕೊಡುತ್ತಿದೆ. ಇದೀಗ ಕೈಯಲ್ಲಿ ಕಾಸಿದ್ದವನೇ ಬಾಸ್ ಆಗಿದ್ದಾನೆ.
ನವದೆಹಲಿ(ಏ.12) ಪಾವತಿ, ಬಿಲ್ ಪೇ ಏನೇ ಇದ್ದರೂ ಯುಪಿಐ ಆ್ಯಪ್ ವಹಿವಾಟು ಹೆಚ್ಚು. ಡಿಜಿಟಲ್ ಇಂಡಿಯಾದಲ್ಲಿ ಡಿಜಿಟಲ್ ಪಾವತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಬ್ಯಾಂಕ್‌ನತ್ತ ಮುಖ ಮಾಡುವವರ ಸಂಖ್ಯೆ, ಇಂಟರ್ನೆಟ್ ಬ್ಯಾಂಕಿಂಗ್ ಬಳಸುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲೂ ಯುಪಿಐ ಮೂಲಕ ಯಾವುದೇ ಅಡೆ ತಡೆ ಇಲ್ಲದೆ, ಗೊಂದಲವಲ್ಲದೆ ನಡೆಯುತ್ತಿದೆ. ಆದರೆ ಎಐ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಇದೀಗ ಕೈಯಲ್ಲಿ ಕಾಸಿದ್ದವನೇ ಬಾಸ್ ಆಗಿದ್ದಾನೆ. ಕಾರಣ ಇದೀಗ ಪದೇ ಪದೇ ಯುಪಿಐ ಆ್ಯಪ್ಸ್ ಸರ್ವರ್ ಡೌನ್ ಆಗುತ್ತಿದೆ. ಯುಪಿಐ ಪಾವತಿ, ಹಣ ವರ್ಗಾವಣೆ ಸೇರಿದಂತೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದೇ ಹಲವರು ಪರದಾಡಿದ್ದಾರೆ.
ಡೌನ್‌ಡಿಟೆಕ್ಟರ್ ವರದಿ
ಡೌನ್‌ಡಿಟೆಕ್ಟರ್ ಪ್ರಕಾರ ಭಾರತದಲ್ಲಿ ಈಗಾಗಲೇ 2,200ಕ್ಕೂ ಹೆಚ್ಚು ಮಂದಿ ಯುಪಿಐ ಆ್ಯಪ್ ವಹಿವಾಟು ಡೌನ್ ಆಗಿದೆ ಎಂದು ದೂರಿದ್ದಾನೆ. ಹಲವರು ಪಾವತಿ ಮಾಡಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆ್ಯಪ್ ಕಾರ್ಯನಿರ್ವಹಿಸದೆ ಗ್ರಾಹಕರ ತಲೆನೋವಾಗಿ ಪರಿಣಮಿಸಿದೆ. ಡೌನ್‌ಡಿಟೆಕ್ಟರ್ ವರದಿ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ, ಹೆಚ್‌ಡಿಎಫ್‌ಸಿ, ಗೂಗಲ್ ಪೇ ಸೇರಿದಂತೆ ಇತರ ಕೆಲ ಬ್ಯಾಂಕಿಂಗ್ ಕ್ಷೇತ್ರ ಕೂಡ ಡೌನ್ ಆಗಿ ಸಮಸ್ಯೆ ಎದುರಿಸಿದೆ.
ಏಪ್ರಿಲ್ 1ರಿಂದ ಬದಲಾವಣೆ; ಹಣ ಉಳಿಸಿಕೊಳ್ಳಲು ಪ್ರತಿ ಭಾರತೀಯ ತಿಳಿಯಬೇಕಾಗಿರೋ 6 ವಿಷಯಗಳಿವು!
ಎನ್‌ಪಿಸಿಐ ಸ್ಪಷ್ಟನೆ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಇಂಡಿಯಾ (NPCI) ಈ ತಾಂತ್ರಿಕ ಸಮಸ್ಯೆ ಕುರಿತು ಸ್ಪಷ್ಟನೆ ನೀಡಿದೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದೇ ವೇಳೆ ಎದುರಾಗಿರುವ ಅಡಚಣೆಕೆ ವಿಷಾದ ವ್ಯಕ್ತಪಡಿಸಿದೆ. ತಾಂತ್ರಿಕ ದೋಷದಿಂದ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸುವಲ್ಲಿ NPCI ಕಾರ್ಯನಿರತವಾಗಿದೆ ಎಂದು NPCI ಹೇಳಿದೆ.
ಮೂರನೇ ವಾರದಲ್ಲಿ ಮೂರು ಬಾರಿ ಯುಪಿಐ ಆ್ಯಪ್ ಡೌನ್
ಕಳೆದ ಮೂರು ವಾರದಲ್ಲಿ ಮೂರು ಬಾರಿ ಯುಪಿಐ ಪಾವತಿ ಆ್ಯಪ್ಸ್ ಡೌನ್ ಆಗಿದೆ. ಬಳಕೆದಾರರು ಪದೇ ಪದೇ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುಪಿಐ ಪದೆ ಪದೇ ಸರ್ವರ್ ಡೌನ್, ತಾಂತ್ರಿಕ ಸಮಸ್ಯೆ ಗುರಿಯಾಗುತ್ತಿದೆ. ಮಾರ್ಚ್ 26ರಂದು, ಎಪ್ರಿಲ್ 2 ಹಾಗೂ ಇದೀಗ ಎಪ್ರಿಲ್ 12ರಂದು ಯುಪಿಐ ಪಾವತಿಯಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದೆ.
ಕಾಸು ಇದ್ದವನೇ ಬಾಸು
ಇಂದು ಯುಪಿಐ ಪಾವತಿಯಲ್ಲಿ ಸಮಸ್ಯೆ ಎದುರಿಸಿದ ಬಳಕೆದಾರರು ಹಿಡಿಶಾಪ ಹಾಕುತ್ತಿದ್ದಾರೆ. ಓರ್ವ ಬಳಕೆದಾರ ಪೆಟ್ರೋಲ್ ಬಂಕ್‌ಗೆ ತೆರಳಿ ವಾಹನಕ್ಕೆ ಇಂಧನ ತುಂಬಿಸಿಕೊಂಡಿದ್ದಾನೆ. ಯುಪಿಐ ಪಾವತಿ ಮೂಲಕ ಪಾವತಿ ಸಾಧ್ಯವಾಗಿಲ್ಲ. ಏನೇ ಮಾಡಿದರೂ ಪಾವತಿ ಆಗಿಲ್ಲ. ಹೀಗಾಗಿ ವಾಹನ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ, ಹತ್ತಿರದ ಎಟಿಎಂಗೆ ನಡೆದುಕೊಂಡು ಹೋಗಿ ಹಣ ಡ್ರಾ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಕುರಿತು ಗ್ರಾಹಕ ಆಕ್ರೋಶ ಹೊರಹಾಕಿದ್ದ.ಮತ್ತೆ ನಗದು ಇದ್ದವನೇ ಕಿಂಗ್ ಎಂದಿದ್ದಾನೆ. ಇನ್ನು ಯುಪಿಐ ಪಾವತಿ ಜೊತೆಗೆ ಕೈಯಲ್ಲಿ ಕಾಸು ಇಟ್ಟುಕೊಳ್ಳಬೇಕು. ಹೀಗಿದ್ದರೆ ಕೈಯಲ್ಲಿ ಕಾಸು ಮಾತ್ರ ಇಟ್ಟುಕೊಂಡು, ಯುಪಿಐ ಡಿಲೀಟ್ ಮಾಡಿದರೆ ಹೇಗೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಒಂದಷ್ಟು ಮಂದಿ ಯುಪಿಐ ಪಾವತಿಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ನೀವು ನಗದು ಹಣ ಕೈಯಲ್ಲಿ ಹಿಡಿದು ತಿರುಗಾಡಿ ಎಂದು ಹಲವರು ಮಾರ್ಮಿಕವಾಗಿ ಕಮೆಂಟ್ಸ್ ಮಾಡಿದ್ದಾರೆ. ಹಲವರು ಯುಪಿಐ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪದೇ ಪದೇ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೇಶಾದ್ಯಂತ UPI ಸೇವೆ ವ್ಯತ್ಯಯ; ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಯಾವುದೂ ವರ್ಕ್ ಆಗ್ತಿಲ್ಲ!
