ಬಿಎಸ್‌ವೈ ಬಜೆಟ್‌ನಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಪ್ರಸ್ತಾಪವೇ ಇಲ್ಲ!

 ನೆರೆ, ಬರದಿಂದ 30 ಸಾವಿರ ಕೋಟಿ ನಷ್ಟ. ಕೇಂದ್ರದಿಂದ ಬರಬೇಕಿರುವ GST ಬಾಕಿ  ಇರುವ 6500 ಕೋಟಿ ರೂ.ಗೆ ಖೋತಾ, ತೆರಿಗೆ ರೂಪದಲ್ಲಿ ಕೇಂದ್ರದಿಂದ 10 ಸಾವಿರ ಕೋಟಿಗೆ ಕೊಕ್,  ರಾಜ್ಯದ ತೆರಿಗೆ ಸಂಗ್ರಹದಲ್ಲಿ 7 ಸಾವಿರ ಕೋಟಿ ಇಳಿಕೆ. ಈ ಸವಾಲುಗಳ ಮಧ್ಯೆ ಸಿಎಂ ಯಡಿಯೂರಪ್ಪ ಸಮಾಧಾನಕರ ಬಜೆಟ್ ಮಂಡಿಸಿದರು. ಆದ್ರೆ ಈ ಬಿಎಸ್‌ವೈ ಬಜೆಟ್‌ನಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಪ್ರಸ್ತಾಪವೇ ಇಲ್ಲ ಮಾಡಿಲ್ಲ.

No funds for Bramhmin Lingayat and Vokkaligas in Karnataka Budget 2020

ಬೆಂಗಳೂರು, (ಮಾ.05):  ಸಿಎಂ ಬಿಎಸ್ ಯಡಿಯೂರಪ್ಪ ಅವರು  1 ಗಂಟೆ 40 ನಿಮಿಷದಲ್ಲಿ  2 ಲಕ್ಷ 37 ಸಾವಿರ 893 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದರು. ಆದ್ರೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಡಿಸಿದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮಠ-ಮಂದಿರ, ಮೇಲ್ವರ್ಗ ಸಮುದಾಯವನ್ನ ಪ್ರಸ್ತಾಪವೇ ಮಾಡದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಠ-ಮಂದಿರಗಳಿಗೆ ಅನುದಾನ ಕೊಡುವಲ್ಲಿ ಯಡಿಯೂರಪ್ಪ ಎತ್ತಿದ ಕೈ. ಆದ್ರೆ, ಬಾರಿಯ ಬಜೆಟ್‌ನಲ್ಲಿ ಮಠಗಳ ಹೆಸರನ್ನೇ ಎತ್ತದೆ ಅಚ್ಚರಿ ಮೂಡಿಸಿದ್ದಾರೆ.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ? 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಅಲೆಮಾರಿ, ಹಿಂದುಳಿದ ಜಾತಿ, ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೈಸ್ತ ಸಮುದಾಯಗಳಿಗೆ ಅನುದಾನ ಮೀಸಲಿಟ್ಟಿದ್ದಾರೆ. ಆದ್ರೆ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಯಾವುದೇ ಅನುದಾನವೇ ನೀಡಿಲ್ಲ. ಇದು ಎಲ್ಲರ ಹುಬ್ಬೇರಿಸಿದೆ.

ಕರ್ನಾಟಕ ಬಜೆಟ್ 2020 : ಪ್ರತೀ ಇಲಾಖೆಗೆ ಸಿಕ್ಕ ಅನುದಾನದ ಸಂಪೂರ್ಣ ಮಾಹಿತಿ

ಅಷ್ಟೇ ಅಲ್ಲದೇ ಬಿಜೆಪಿ ಪರವಾಗಿರುವ ಮೇಲ್ವರ್ಗದ ಸಮುದಾಯಗಳನ್ನ ಕಡೆಗಣಿಸಿದ್ದು, ಹಿಂದೂಳಿದ ವರ್ಗಕ್ಕೆ ಅನುದಾನ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಿಂದೂಳಿದ ವರ್ಗಗಳ ಮತಗಳನ್ನ ಸೆಳೆಯಲು ಯಡಿಯೂರಪ್ಪನವರು ಮುಂದಾದ್ರಾ ಎನ್ನುವ ಪ್ರಶ್ನೆಗಳು ಸಹ ಉದ್ಭವಿಸಿವೆ.

ಯಾವ ಸಮುದಾಯಕ್ಕೆ ಎಷ್ಟು?
* ವಿಶ್ವಕರ್ಮ ಅಭಿವೃದ್ಧಿ - 25 ಕೋಟಿ
* ಆರ್ಯ ವೈಶ್ಯ ಅಭಿವೃದ್ಧಿ - 15 ಕೋಟಿ
* ಕ್ರೈಸ್ತ ಸಮುದಾಯ - 200 ಕೋಟಿ
* ಗೊಲ್ಲ ಸಮುದಾಯ - 10 ಕೋಟಿ
* ಅಂಬಿಗರ ಚೌಡಯ್ಯ - 50 ಕೋಟಿ 
* ಆರ್ಯವೈಶ್ಯ - 10 ಕೋಟಿ ರೂ. 
* ಕುಂಬಾರ ಸಮುದಾಯ - 20 ಕೋಟಿ
* ಲಂಬಾಣಿ ಅಕಾಡೆಮಿ - 50 ಲಕ್ಷ
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ನೀಡಲಾಗಿದೆ. 
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಒಟ್ಟು 26,930 ಕೋಟಿ ರೂ ಮೀಸಲಿಡಲಾಗಿದ್ದು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios