ನೀವು ರೆಗ್ಯೂಲರ್ ರೈಲು ಪ್ರಯಾಣಿಕರಾ?: ಸೆ.1 ರಿಂದ ಈ ಸೌಲಭ್ಯ ಬಂದ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 12:43 PM IST
No Free Travel Insurance For Train Passengers From September 1
Highlights

ಉಚಿತ ವಿಮೆಗೆ ರೈಲ್ವೆ ಇಲಾಖೆ ಬ್ರೇಕ್! ಸೆ.೧ ರಿಂದ ಉಚಿತ ವಿಮೆ ಸೌಲಭ್ಯ ಇಲ್ಲ! ಆದೇಶ ಹೊರಡಿಸಿದ ರೈಲ್ವೆ ಇಲಾಖೆ! ಉಚಿತ ವಿಮೆ ಪ್ರಯಾಣಿಕರ ಐಚ್ಛಿಕ ವಿಷಯ 

ಮುಂಬೈ(ಆ.12): ಭಾರತೀಯ ರೈಲ್ವೆ ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು ಘೋಷಿಸಿದೆ.

ಸೆಪ್ಟೆಂಬರ್‌ 1ರಿಂದ ಪ್ರಯಾಣಕ್ಕೆ ಉಚಿತ ವಿಮೆ ಸ್ಥಗಿತಗೊಳಿಸಲಾಗುವುದು ಎಂದು ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  ಉಚಿತ ವಿಮೆಯು ಐಚ್ಛಿಕ ಆಗಿರಲಿದೆ ಎಂದು ಇಲಖೆ ಸ್ಪಷ್ಟಪಡಿಸಿದೆ. 

ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಟಿಕೆಟ್‌ ಬುಕ್‌ ಮಾಡುವ ಸಂದರ್ಭ ಉಚಿತ ಪ್ರಯಾಣ ವಿಮೆಯನ್ನು ಪಡೆದುಕೊಳ್ಳಬಹುದು ಅಥವಾ ಪಡೆಯದಿರಲು ಆಯ್ಕೆ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರೈಲು ಪ್ರಯಾಣದ ವೇಳೆ ಪ್ರಯಾಣಿಕ ಮೃತಪಟ್ಟರೆ 10 ಲಕ್ಷ ರೂ. ಗರಿಷ್ಠ ಪರಿಹಾರ ಹಾಗೂ ಅಪಘಾತದಿಂದ ವಿಕಲ ಚೇತನರಾದರೆ 7.5 ಲಕ್ಷ ರೂ, ಗಾಯವಾದರೆ 2 ಲಕ್ಷ ರೂ. ವಿಮೆ ಪರಿಹಾರ ಸಿಗುತ್ತದೆ. 

loader