Asianet Suvarna News Asianet Suvarna News

ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕ್​ ಖಾಸ​ಗೀ​ಕ​ರ​ಣ!

* ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣ

* ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕು​ ಖಾಸ​ಗೀ​ಕ​ರ​ಣ

* ಇಂಡಿ​ಯನ್‌ ಓವ​ರ್‌​ಸೀಸ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಸಗಿ ತೆಕ್ಕೆ​ಗೆ

NITI Aayog recommends privatisation of Central Bank Indian Overseas Bank pod
Author
Bangalore, First Published Jun 8, 2021, 10:06 AM IST

ನವ​ದೆ​ಹ​ಲಿ(ಜೂ.08): ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣದ ಅಂಗ​ವಾಗಿ ಕೇಂದ್ರ ಸರ್ಕಾರ ಪ್ರಸಕ್ತ ಹಣ​ಕಾಸು ವರ್ಷ​ದಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಿ​ಯನ್‌ ಓವ​ರ್‌​ಸೀಸ್‌ ಬ್ಯಾಂಕು​ಗ​ಳನ್ನು ಶೀಘ್ರ​ದಲ್ಲೇ ಖಾಸ​ಗೀ​ಕ​ರ​ಣ​ಗೊ​ಳಿ​ಸಲು ಮುಂದಾ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ.

ಬಂಡ​ವಾಳ ಹಿಂಪ​ಡೆ​ಯು​ವಿ​ಕೆಗೆ ಸಂಬಂಧಿ​ಸಿ​ದ ಕಾರ್ಯ​ದ​ರ್ಶಿ​ಗಳ ಸಮಿ​ತಿ ಈ ಹಣ​ಕಾಸು ವರ್ಷ​ದಲ್ಲಿ ಖಾಸ​ಗೀ​ಕ​ರ​ಣ​ಗೊ​ಳ್ಳ​ಬೇ​ಕಿ​ರುವ ಎರಡು ಬ್ಯಾಂಕು​ಗಳ ಹೆಸ​ರನ್ನು ಇತ್ತೀ​ಚೆಗೆ ಕೇಂದ್ರ ಸರ್ಕಾ​ರ​ಕ್ಕೆ ಶಿಫಾ​ರಸು ಮಾಡಿದೆ. ಈ ಪ್ರಸ್ತಾ​ವ​ನೆ​ಯನ್ನು ಹೂಡಿಕೆ ಹಾಗೂ ಸಾರ್ವ​ಜ​ನಿಕ ಆಸ್ತಿ ನಿರ್ವ​ಹಣಾ ಇಲಾಖೆ ಮತ್ತು ಹಣ​ಕಾಸು ಸೇವೆ​ಗಳ ಇಲಾಖೆ ಪರಿ​ಶೀ​ಲನೆ ನಡೆ​ಸ​ಲಿದ್ದು, ಬ್ಯಾಂಕು​ಗಳ ಖಾಸ​ಗೀ​ಕ​ರ​ಣಕ್ಕೆ ಅಗ​ತ್ಯ​ವಿ​ರುವ ಕಾನೂ​ನಾ​ತ್ಮ​ಕ ಬದ​ಲಾ​ವ​ಣೆಯ ಕುರಿ​ತಂತೆ ಚರ್ಚೆ ನಡೆ​ಸ​ಲಿ​ದೆ. ಸಂಪುಟ ಕಾರ್ಯ​ದರ್ಶಿ ನೇತೃ​ತ್ವದ ಸಮಿತಿ ಬ್ಯಾಂಕು​ಗಳ ಹೆಸ​ರನ್ನು ಅಂತಿ​ಮ​ಗೊ​ಳಿ​ಸಿ​ದ ಬಳಿಕ ಸಂಪುಟ ಸಭೆಯ ಅನು​ಮೋ​ದ​ನೆಗೆ ಕಳು​ಹಿ​ಸಿ​ಕೊ​ಡ​ಲಾ​ಗು​ತ್ತದೆ. ಆದಾ​ಯನ್ನು ಹೆಚ್ಚಿಸುವ ನಿಟ್ಟಿ​ನಿಂದ ಕೇಂದ್ರ ಸರ್ಕಾರ 4 ಮಧ್ಯಮ ಗಾತ್ರದ ಬ್ಯಾಂಕು​ಗ​ಳನ್ನು ಖಾಸ​ಗೀ​ಕ​ರ​ಣ ಮಾಡಲು ಉದ್ದೇ​ಶಿ​ಸಿ​ದೆ ಎಂದು ವರ​ದಿ​ಗಳು ತಿಳಿ​ಸಿವೆ.

ಕೇಂದ್ರ ಹಣ​ಕಾಸು ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ಅವರು 2021-22ರ ಬಜೆ​ಟ್‌​ನಲ್ಲಿ ಸಾರ್ವ​ಜ​ನಿಕ ವಲ​ಯದ ಎರಡು ಬ್ಯಾಂಕು​ಗಳು ಮತ್ತು ಒಂದು ವಿಮಾ ಕಂಪ​ನಿ​ಯನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸ​ಲಾ​ಗು​ವುದು ಎಂದು ಪ್ರಕ​ಟಿ​ಸಿ​ದ್ದ​ರು.

Follow Us:
Download App:
  • android
  • ios