ನೀತಾ ಅಂಬಾನಿ ಉದ್ಯಮಿ, ಫ್ಯಾಷನ್ ಐಕಾನ್ ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಸಂದೀಪ್ ಖೋಸ್ಲಾ ಅವರ ಅಂಗಡಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಕೈ ಹಿಡಿದಿದ್ದನ್ನು ಜನರು ಚರ್ಚಿಸುತ್ತಿದ್ದಾರೆ. ಇಶಾನ್ ಕಿಶನ್‌ಗೆ ಸಾಂತ್ವನ ಹೇಳಿದ ವಿಡಿಯೋ ಕೂಡ ವೈರಲ್ ಆಗಿದೆ.
ಮಲ್ಟಿ ಟ್ಯಾಲೆಂಟೆಡ್ ನೀತಾ ಅಂಬಾನಿ (Nita Ambani), ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಪತ್ನಿ ಎನ್ನುವ ಕಾರಣಕ್ಕೆ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ನೀತಾ ಅಂಬಾನಿ ಕೂಡ ಉದ್ಯಮ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಅವರ ಫ್ಯಾಷನ್ಸ್ ಸೆನ್ಸ್, ಅವರ ಫಿಟ್ನೆಸ್, ಡಯಟ್, ಡಾನ್ಸ್, ಕುಟುಂಬದ ಜೊತೆ ಬಾಂಧವ್ಯ ಹೀಗೆ ಎಲ್ಲ ವಿಷ್ಯದಲ್ಲೂ ನೀತಾ ಅಂಬಾನಿ ಜನರ ಗಮನ ಸೆಳೆಯುತ್ತಾರೆ. ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನೀತಾ ಅಂಬಾನಿ ತನ್ನ ಛಾಪು ಮೂಡಿಸಿದ್ದಾರೆ. ಸದ್ಯ ಐಪಿಎಲ್ (IPL) ಮ್ಯಾಚ್ ನಲ್ಲಿ ನೀತಾ ಅಂಬಾನಿ ಬ್ಯುಸಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ಪಂದ್ಯವಿದ್ದಾಗೆಲ್ಲ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ನೀತಾ ಅಂಬಾನಿ, ಆಟಗಾರರಿಗೆ ಪ್ರೋತ್ಸಾಹ ನೀಡ್ತಾರೆ.
ಐಪಿಎಲ್ ಜೊತೆ ಪ್ರೋಗ್ರಾಂ ಲಾಂಚಿಂಗ್ ಇವೆಂಟ್ ನಲ್ಲೂ ಪಾಲ್ಗೊಳ್ಳುವ ನೀತಾ ಅಂಬಾನಿ ನಿನ್ನೆ ಫ್ಯಾಷನ್ ಡಿಸೈನರ್ ಸಂದೀಪ್ ಖೋಸ್ಲಾ ಅವರ ಅಂಗಡಿ ಉದ್ಘಾಟನೆಗೆ ಹೋಗಿದ್ದರು. ಕಾರ್ಯಕ್ರಮದ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ. ನೀತಾ ಅಂಬಾನಿ, ವಿನ್ಯಾಸಕ ಸಂದೀಪ್ ಖೋಸ್ಲಾ (Sandeep Khosla) ಅವರನ್ನು ಹೊಗಳುತ್ತಿರುವ ವೀಡಿಯೊ ಕೂಡ ಪೋಸ್ಟ್ ಆಗಿದೆ. ನೀತಾ ಅಂಬಾನಿ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಹಾಗೇ ಟ್ರೋಲ್ ಕೂಡ ಆಗುತ್ತೆ. ನೀತಾ ಅಂಬಾನಿ ಹಾಗೂ ಸಂದೀಪ್ ಖೋಸ್ಲಾ ವಿಡಿಯೋ ಒಂದು ಈಗ ಟ್ರೋಲ್ ಆಗಿದೆ. ಸಂದೀಪ್ ಖೋಸ್ಲಾ ಕೈ ಹಿಡಿದಿದ್ದೇ ತಪ್ಪಾಗಿದೆ.
ಸೆಬಿಯಿಂದ ವಿಚಾರಣೆಗೊಳಗಾಗಿರುವ Gensol Engineeringನಲ್ಲಿ ಧೋನಿ, ದೀಪಿಕಾ ಷೇರು
ಸಂದೀಪ್ ಖೋಸ್ಲಾ ಜೊತೆ ವಿಡಿಯೋದಲ್ಲಿ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ. ನೀತಾ ಆರಂಭದಲ್ಲಿ ಸಂದೀಪ್ ಖೋಸ್ಲಾ ಕೈ ಹಿಡಿದಿದ್ದರು. ಕ್ಯಾಮರಾ ನೋಡ್ತಿದ್ದಂತೆ ಕೈಬಿಡಿಸಿಕೊಂಡ ಅವರು ಫೋಟೋ, ವಿಡಿಯೋಕ್ಕೆ ಫೋಸ್ ನೀಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಬಳಕೆದಾರರೊಬ್ಬರು, ನೀತಾ ಅಂಬಾನಿ ಕೈ ನೋಡಿದ್ರಾ ಅಂತ ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬಳಕೆದಾರರು ತಮ್ಮ ಅಭಿಪ್ರಾಯ ಕಮೆಂಟ್ ಮಾಡಿದ್ದಾರೆ. ಇದು ಸಾಮಾನ್ಯ ವಿಷ್ಯ, ಸ್ನೇಹಿತರ ಕೈಕುಲುಕುವುದು ಸಾಮಾನ್ಯ ಎಂದು ಒಬ್ಬರು ಬರೆದಿದ್ದಾರೆ. ನೀತಾ ಅಂಬಾನಿ ಎಲ್ಲರ ಕೈಕುಲುಕುವ ಮೂಲಕ ಮಾತನಾಡುತ್ತಾರೆ. ಸಂದೀಪ್ ಖೋಸ್ಲಾ ಅವರ ಹಳೆಯ ಪರಿಚಯಸ್ಥರು ಎಂದು ಇನ್ನೊಬ್ಬರು ಬರೆದಿದ್ದಾರೆ. ನನ್ನ ಪ್ರಕಾರ, ಇದು ಎಐ ವಿಡಯೋ. ಈ ವಿಡಿಯೋದಲ್ಲಿ ನೀತಾ ಅಂಬಾನಿ ಮುಖ ಭಿನ್ನವಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಹಾಕಿದ್ದಾರೆ. ನೀತಾ ಅಂಬಾನಿ ಪರ ಬಳಕೆದಾರರು ಬ್ಯಾಟ್ ಬೀಸಿದ್ದಾರೆ. ನೀತಾ ಮಾಡಿದ ಕೆಲಸದಲ್ಲಿ ತಪ್ಪಿಲ್ಲ. ಅವರು ಸಂದೀಪ್ ಖೋಸ್ಲಾಗೆ ನಡೆಯಲು ನೆರವಾಗಿದ್ದಾರೆ ಎಂಬ ಕಮೆಂಟ್ ಬಂದಿದೆ.
ಕೋಟ್ಯಾಂತರ ರೂ. ಮೌಲ್ಯದ ಬಿಲ್‌ಗೇಟ್ಸ್ ಆಸ್ತಿಯಲ್ಲಿ ಮಕ್ಕಳಿಗಾಗಿ
ನೀತಾ ಅಂಬಾನಿ – ಇಶಾನ್ ಕಿಶನ್ ವಿಡಿಯೋ ವೈರಲ್ : ಇದ್ರ ಜೊತೆ ನೀತಾ ಅಂಬಾನಿಯ ಇನ್ನೊಂದು ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ. ಮುಂಬೈ ಇಂಡಿಯನ್ಸ್ ತಂಡದಿಂದ ಸನ್ರೈಸರ್ಸ್ ಹೈದರಾಬಾದ್ ಪಾಲಾಗಿರುವ ಇಶಾನ್ ಕಿಶನ್ ನಿನ್ನೆನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಕಡಿಮೆ ರನ್ ಹೊಡೆದು ಸೋಲು ಕಂಡಿರುವ ಇಶಾನ್ ನಿರಾಸೆಯಲ್ಲಿದ್ದರು. ಪಂದ್ಯದ ನಂತ್ರ ಮೈದಾನದಲ್ಲಿ ನೀತಾ ಅಂಬಾನಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ನೀತಾ ಅಂಬಾನಿ, ಇಶಾನ್ ಕಿಶನ್ ಕೆನ್ನೆ ಸವರಿ ಸಾಂತ್ವಾನ ಹೇಳಿದ್ದಾರೆ. ಇದು, ಒಬ್ಬ ತಾಯಿ ತನ್ನ ನಿರಾಶೆಗೊಂಡ ಮಗನನ್ನು ಮುದ್ದಿಸುವಂತಿತ್ತು. ಇದನ್ನು ಬಳಕೆದಾರರು ತಾಯ್ತನದ ವಾತ್ಸಲ್ಯ ಎಂದು ಕರೆದಿದ್ದಾರೆ. ಆ ಕ್ಷಣ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು ಎಂಬ ಕಮೆಂಟ್ ಬಂದಿದೆ.
