ನವದೆಹಲಿ(ಫೆ.02): ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎನ್ನುವ ವಿಪಕ್ಷಗಳ ಆರೋಪದ ನಡುವೆಯೇ, 2019 ಮಾರ್ಚ್‌ನಿಂದ 2021 ಮಾರ್ಚ್‌ವರೆಗೆ 2.62 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿ ಸೃಷ್ಟಿಸುವ ಬಗ್ಗೆ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. 

2019 ಮಾರ್ಚ್‌ 1ರ ವೇಳೆಗೆ ಒಟ್ಟು ಸರ್ಕಾರಿ ನೌಕರರ ಸಂಖ್ಯೆ 32,62,908 ಇದ್ದು, 2021ರ ಇದೇ ಅವಧಿ ವೇಳೆಗೆ ಅದು 35,25,388ಕ್ಕೆ ಏರಿಲಿದೆ. ಒಟ್ಟು ಏರಿಕೆ ಪ್ರಮಾಣ 2,62,480 ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸ್‌ ಇಲಾಖೆಯಲ್ಲಿ ಅತೀ ಹೆಚ್ಚು ಅಂದರೆ 79,353 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ರಕ್ಷಣಾ ಸಚಿವಾಲಯದಲ್ಲಿ 22,046, ಸಚಿವಾಲಯ, ಪೊಲೀಸ್‌ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತು ಪಡಿಸಿ ಗೃಹ ಇಲಾಖೆಯಲ್ಲಿ 8,200, ಸಂಸ್ಕೃತಿ ಸಚಿವಾಲಯದಲ್ಲಿ 3,886, ಬಾಹ್ಯಾಕಾಶ ಇಲಾಖೆಯಲ್ಲಿ 3,903, ಕಂದಾಯ ಇಲಾಖೆಯಲ್ಲಿ 3,243, ಭೂ ವಿಜ್ಞಾನ ಇಲಾಖೆಯಲ್ಲಿ 2,581, ವಿದೇಶಾಂಗ ಇಲಾಖೆಯಲ್ಲಿ 2,167, ಪರಿಸರ, ಅರಣ್ಯ ಹಾಗೂ ಹವಮಾನ ಇಲಾಖೆಯಲ್ಲಿ 2,136 ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ 1,347, ಅಣು ಶಕ್ತಿ ಇಲಾಖೆಯಲ್ಲಿ 2,300, ಕೃಷಿ, ಸಹಕಾರ ಹಾಗೂ ರೈತರ ಕಲ್ಯಾಣ ಇಲಾಖೆಯಲ್ಲಿ 1,766, ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಲ್ಲಿ 1,600 ಹುದ್ದೆ ಮತ್ತು ಸಿಬ್ಬಂದಿ ಸಚಿವಾಲಯದಲ್ಲಿ 2,684 ಉದ್ಯೋಗಗಳು ಸೃಷ್ಟಿಯಾಗಲಿದೆ.