ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸಲು ಆರಂಭಿಸಿದ್ದಾರೆ. ಬಜೆಟ್ ಭಾಷಣ ಆರಂಭಿಸುತ್ತಿದ್ದಂತೇ ಮಾಜಿ ಹಣಕಾಸು ಸಚಿವ, ದಿವಂಗತ ಅರುಣ್ ಜೇಟ್ಲಿ ಅವರನ್ನು ನೆನೆದ ನಿರ್ಮಲಾ, ಜೇಟ್ಲಿ ಸದೃಢ ಆರ್ಥಿಕ ಹರಿಕಾರ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

"

 

ರಾಜಕೀಯ ಸ್ಥಿರತೆಗಾಗಿ ಮೋದಿ ಸರ್ಕಾರಕ್ಕೆ ಎರಡನೇ ಬಾರಿ ಜನಾದೇಶ ಲಭಿಸಿದ್ದು ಅದರಂತೆ ಎಲ್ಲ ವರ್ಗಕ್ಕೂ ಭರವಸೆ ನೀಡುವ ಬಜೆಟ್ ಮಂಡಿಸಲಿರುವುದಾಗಿ ನಿರ್ಮಲಾ ಹೇಳಿದರು.

ಜಿಎಸ್‌ಟಿ ಜಾರಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದ್ದು, ಕಳೆದ ಐದು ವರ್ಷದಲ್ಲಿ ಬ್ಯಾಂಕಿಂಗ್ ವ್ಯುವಸ್ತೆಯನ್ನು ಸ್ವಚ್ಛಗೊಳಿಸಲಾಗಿದೆ ಎಂದು ನಿರ್ಮಲಾ ಈ ವೇಳೆ ಹೇಳಿದರು.

ಕೇಂದ್ರ ಬಜೆಟ್ 2020: ನಿರೀಕ್ಷೆಗಳ ಭಾರ, ಏನಿರಲಿದೆ ನಿರ್ಮಲಾ ಬಜೆಟ್ ಸಾರ?

ನಮ್ಮದು ವಿಶ್ವದಲ್ಲೇ ಐದನೇ ಅತೀದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶವಾಗಿದ್ದು, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ ಎಂದು ವಿತ್ತ ಸಚಿವೆ ನುಡಿದರು.

ಇನ್ನು ಬಜೆಟ್ ಬಾಷಣವನ್ನು ಸೀತಾರಾಮನ್ ಕಾಶ್ಮೀರಿ ಭಾಷೆಯಲ್ಲಿ ಆರಂಭಿಸಿದ್ದು, ವಿತ್ತ ಸಚಿವೆಯ ಕಾಶ್ಮೀರಿ ಭಾಷೆ ಕೇಳಿ ಲೋಕಸಭೆ ದಂಗಾಯಿತು. ಈ ದೇಶದ ಶಕ್ತಿ ಹಾಗೂ ಅದರ ಸೌಂದರ್ಯದ ಕುರಿತು ಕಾಶ್ಮೀರಿ ಭಾಷೆಯಲ್ಲಿ ನಿರ್ಮಲಾ ಉಲ್ಲೇಖಿಸಿದರು.