ಚೆನ್ನೈ(ಸೆ.01): ಸಾರ್ವಜನಿಕ ವಲಯದ ಬ್ಯಾಂಕ್’ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. 

ಜಾಗತಿಕ ಮಟ್ಟದ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ನಿರ್ಮಿಸುವ ಉದ್ದೇಶದೊಂದಿಗೆ 10 ಬ್ಯಾಂಕ್’ಗಳನ್ನು 4 ಬ್ಯಾಂಕ್’ ಗಳಾಗಿ ವಿಲೀನಗೊಳಿಸಿಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. 

ಕೇಂದ್ರ ಸರ್ಕಾರದ ಈ ಕ್ರಮದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ಕಳೆದಕೊಳ್ಳುವ ಭಯ ಕಾಡುತ್ತಿದ್ದು, ಉದ್ಯೋಗಿಗಳು ಭಯಪಡಬೇಕಿಲ್ಲ ಎಂದು ವಿತ್ತ ಸಚಿವೆ ಭರವಸೆ ನೀಡಿದರು. 

ಇದಕ್ಕೆ ಸ್ಪಷ್ಟಿಕರಣ ನೀಡಿರುವ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್’ಗಳ ವಿಲೀನದಿಂದ ಉದ್ಯೋಗ ನಷ್ಟವಾಗುವುದಿಲ್ಲ. ಯಾವ ಉದ್ಯೋಗಿಯನ್ನೂ ಮನೆಗೆ ಕಳುಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.