ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020 ಮಂಡನೆ ಆರಂಭ| ಬಜೆಟ್ ಭಾಷಣ ಓದುತ್ತಿರುವ ನಿರ್ಮಲಾ ಸೀತಾರಾಮನ್| ವೈಯಕ್ತಿಕ ತೆರಿಗೆಯಲ್ಲಿ ಭಾರಿ ಇಳಿಕೆ ಘೋಷಣೆ| 2.5 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ತೆರಿಗೆ| 5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ| 7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ| 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ತೆರಿಗೆ ವಿನಾಯ್ತಿ ಇಲ್ಲ| ವಿತ್ತೀಯ ಕೊರತೆ ಟಾರ್ಗೆಟ್ 3.5%|  2020-21ರಲ್ಲಿ ಆರ್ಥಿಕಾಭಿವೃದ್ಧಿ ದರ (GDP) ಶೇ.10ರಷ್ಟು ಏರಿಕೆ ನಿರೀಕ್ಷೆ

Nirmala Sitharaman Announces Big Tax Relief For Tax Payers

ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ತೆರಿಗೆದಾರರಿಗೆ ಭಾರೀ ವಿನಾಯ್ತಿ ಘೋಷಿಸಿರುವ ಮೋದಿ ಸರ್ಕಾರ, ಹೊಸ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದೆ.

ವೈಯಕ್ತಿಕ ತೆರಿಗೆ ಡೀಟೇಲ್ಸ್:
2.5 ಲಕ್ಷದಿಂದ 5 ಲಕ್ಷದವರೆಗೆ- ಶೂನ್ಯ ತೆರಿಗೆ
5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ
7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ
10 ಲಕ್ಷದಿಂದ 12.5 ಲಕ್ಷ ಆದಾಯಕ್ಕೆ ಶೇ.20ರಷ್ಟು ತೆರಿಗೆ
12.5 ಲಕ್ಷದಿಂದ 15 ಲಕ್ಷ ಆದಾಯಕ್ಕೆ ಶೇ.25ರಷ್ಟು ತೆರಿಗೆ 
15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!
 
ಇನ್ನು ಶೇ.20ರಷ್ಟು ತೆರಿಗೆ ಬದಲು ಶೇ.10ರಷ್ಟು ತೆರಿಗೆ ಪದ್ದತಿ ಪರಿಚಯಿಸಲಾಗಿದ್ದು,  ತೆರಿಗೆ ಬಗ್ಗೆ ಪ್ರಸ್ತಾಪ ವೇಳೆ ಕಾಳಿದಾಸನ ಪದಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಚಿಸಿದರು.

ಖರ್ಚೆಷ್ಟು? ಆದಾಯ ಎಷ್ಟು?:
 ಇನ್ನು 2020-2021ರಲ್ಲಿ  30.42 ಲಕ್ಷ ಕೋಟಿ ರೂ. ಖರ್ಚು ಘೋಷಿಸಲಾಗಿದ್ದು, 2019-2021ರ ಆದಾಯ 22.46 ಲಕ್ಷ ಕೋಟಿ ರೂ. ಎಂದು ಮಾಹಿತಿ ನೀಡಲಾಗಿದೆ.  ಇನ್ನು ವಿತ್ತೀಯ ಕೊರತೆ ಟಾರ್ಗೆಟ್ ಶೇ. 3.5ರಷ್ಟಿದ್ದು, ಇತ್ತೀಚೆಗೆ ಹೂಡಿಕೆ ಹೆಚ್ಚಳಕ್ಕೆ ತಕ್ಕಂತೆ ಆರ್ಥಿಕಸುಧಾರಣೆ ಮಾಡಿರುವುದಾಗಿ ನಿರ್ಮಲಾ ಘೋಷಿಸಿದರು. 

ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!

2020-21ರಲ್ಲಿ ಆರ್ಥಿಕಾಭಿವೃದ್ಧಿ ದರ (GDP)ಶೇ.10ರಷ್ಟು ಏರಿಕೆ ನಿರೀಕ್ಷೆ ಇದೆ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, ಪ್ರಸ್ತುತ ಇರುವ ಶೇ.5ರಷ್ಟು ಜಿಡಿಪಿ ಬೆಳವಣಿಗೆಯನ್ನು ವೇಗವಾಗಿ ವೃದ್ಧಿಸುವ ಕುರಿತು ಭರವಸೆ ನೀಡಿದ್ದಾರೆ.

ಇಷ್ಟೇ ಅಲ್ಲದೇ ಹೊಸದಾಗಿ ಕಂಪನಿ ಶುರು ಮಡುವ ನವೋದ್ಯಮಿಗಳು ಐದು ವರ್ಷಗಳ ಕಾಲ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios