ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!
ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020 ಮಂಡನೆ ಆರಂಭ| ಬಜೆಟ್ ಭಾಷಣ ಓದುತ್ತಿರುವ ನಿರ್ಮಲಾ ಸೀತಾರಾಮನ್| ಕೃಷಿ, ಆರೋಗ್ಯ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ವಿತ್ತ ಸಚಿವೆ| ಉನ್ನತ ಶಿಕ್ಷಣ ಉತ್ತೇಜಿಸಲು ಶಿಕ್ಷಣ ಕ್ಷೇತ್ರಕ್ಕೆ ವಿದೇಶಿ ಹೂಡಿಕೆ|150 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಕಾರ್ಯಕ್ರಮಗಳು| ಇಂಜಿನಿಯರಿಂಗ್ ಸೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನೆರವು| ಹೊಸ ಯುನಿವರ್ಸಿಟಿಗಳ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ|
ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.
ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!
ಶಿಕ್ಷಣ ಹಾಗೂ ಕೌಶಲ್ಯತೆ ವಿಭಾಗಕ್ಕೆ ಹೆಚ್ಚಿನ ಅನುದಾನ ನೀಡಿರುವ ನಿರ್ಮಲಾ, ಉನ್ನತ ಶಿಕ್ಷಣ ಉತ್ತೇಜಿಸಲು ಶಿಕ್ಷಣ ಕ್ಷೇತ್ರಕ್ಕೆ ವಿದೇಶಿ ಹೂಡಿಕೆಯನ್ನು ಆಹ್ವಾನಿಸಿದ್ದಾರೆ. ದೇಶದಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ನೆರವು ಅಗತ್ಯ ಎಂದಿರುವ ನಿರ್ಮಲಾ, 150 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಇಂಜಿನಿಯರಿಂಗ್ ಸೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವುದಾಗಿ ಘೋಷಿಸಿರುವ ನಿರ್ಮಲಾ, 2021ರ ಮಾರ್ಚ್ ಒಳಗೆ ಅಪ್ರೆಂಟಿಸ್, ಇಂಟರ್ನ್ ಶಿಪ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಕ್ಷಯ ರೋಗ ಸೋಲತ್ತೆ, ಇಂಡಿಯಾ ಗೆಲ್ಲುತ್ತೆ: ಕೊಟ್ರೆ ಇಂತಾ ಅನುದಾನ ಕೊಡಬೇಕಲ್ವಾ ಮತ್ತೆ!
ಬಡ ಮಕ್ಕಳಿಗೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ, ಡಿಗ್ರಿ ಲೆವೆಲ್ ಆನ್‌ಲೈನ್ ಶಿಕ್ಷಣ ವ್ಯವಸ್ಥೆಗೆ ಯೋಜನೆ ಜಾರಿಗೊಳಿಸಲಾಗಿದೆ. ಉನ್ನತ ಶಿಕ್ಷಣ ಬಡವರ ಕೈಗೆಟುವಂತೆ ಮಾಡುವ ಗುರಿ ಹೊಂದಲಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಅದರಂತೆ ಪ್ರಮುಖ ಜಿಲ್ಲೆಗಳಲ್ಲಿ ಹೊಸ ಯೂನಿವರ್ಸಿಟಿಗಳ ಸ್ಥಾಪನೆ, ನ್ಯಾಷನಲ್ ಪೊಲೀಸ್ ಯೂನಿವರ್ಸಿಟಿ ಸ್ಥಾಪನೆ ಹಾಗೂ ನ್ಯಾಷನಲ್ ಫೋರೆನ್ಸಿಕ್ ಯೂನಿರ್ವಸಿಟಿ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 99,300 ಕೋಟಿ ರೂ. ಅನುದಾನ ಘೋಷಿಸಲಾಗಿದೆ.