Asianet Suvarna News Asianet Suvarna News

ಮೋದಿ ಇಲ್ಲೇ ಅವ್ರೆ ಎಂದ ಇಂಗ್ಲೆಂಡ್: ಕಳ್ಸಿಬಿಡಿ ಎಂದ ಸಿಬಿಐ!

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ! ನೀರವ್ ಇಂಗ್ಲೆಂಡ್ ನಲ್ಲಿರುವುದನ್ನು ಖಚಿತಪಡಿಸಿದ ಅಧಿಕಾರಿಗಳು! ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಮನವಿ! ಭಾರತೀಯ ವಿದೇಶಾಂಗ ಇಲಾಖೆ ಸಂಪರ್ಕಿಸಿದ ಸಿಬಿಐ! ನೀರವ್ ವಶಕ್ಕೆ ಪಡೆಯಲು ಸಿಬಿಐ ಮುಂದು 
 

Nirav Modi is in UK, CBI moves for extradition
Author
Bengaluru, First Published Aug 20, 2018, 7:14 PM IST

ನವದೆಹಲಿ(ಆ.20): ಪಿಎನ್‌ಬಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಮೊದಲ ಯಶಸ್ಸು ಸಿಕ್ಕಂತೆ ಗೋಚರಿಸುತ್ತಿದೆ. ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿ ಇಂಗ್ಲೆಂಡ್‌ನಲ್ಲಿರುವುದನ್ನು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಸಂಬಂಧ ಸಿಬಿಐ ಅಧಿಕಾರಿಗಳು ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇಂಗ್ಲೆಂಡ್ ಗೆ ಮನವಿ ಮಾಡಿದ್ದಾರೆ. 

ಇಂಗ್ಲೆಂಡ್‌ ಅಧಿಕಾರಿಗಳಿಂದ ನೀರವ್‌ ಮೋದಿ ಇರುವಿಕೆಯ ಸಂಬಂಧ ಮಾಹಿತಿ ಬಂದ ತಕ್ಷಣ, ಸಿಬಿಐ ಅಧಿಕಾರಿಗಳು ಭಾರತೀಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ, ನೀರವ್‌ ಮೋದಿ ಹಸ್ತಾಂತರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. 

ನೀರವ್‌ ಮೋದಿ ವಿರುದ್ಧ ಈಗಾಗಲೇ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿರುವುದರಿಂದ ಅವರನ್ನು ತಕ್ಷಣ ವಶಕ್ಕೆ ಪಡೆದುಕೊಳ್ಳುವಂತೆ ಇಂಗ್ಲೆಂಡ್‌ ಸರಕಾರಕ್ಕೆ ಮನವಿ ಮಾಡಲಾಗಿದೆ. 

Follow Us:
Download App:
  • android
  • ios