Asianet Suvarna News Asianet Suvarna News

ಗ್ರಾಹಕರು, ಪೇಂಟರ್ಸ್, ಸಿಬ್ಬಂದಿ ಸುರಕ್ಷತೆಗಾಗಿ ನಿಪ್ಪಾನ್ ಕ್ರಮ

ಇನ್ನು ವಿಶ್ವ ಸಹಜ ಸ್ಥಿತಿಗೆ ಮರಳುವುದು ಅಷ್ಟು ಸುಲಭವಲ್ಲ. ಇನ್ನಷ್ಟು ದಿನ ಹೀಗೆ ಮನೆಯೊಳಗೆ ಬಂಧಿಯಾಗುವುದು ಕಷ್ಟ. ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡ, ನಿಪ್ಪಾನ್ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆ ಮೂಲಕ ಹೊಸ ನಾರ್ಮಲ್‌ಗೆ ಅಣಿಯಾಗಲು ಸಿದ್ಧವಾಗಿದೆ. ಸಿಬ್ಬಂದಿಗೆ, ಪೇಂಟರ್ಸ್‌ಗೆ ನೀಡಿರುವ ಮಾರ್ಗಸೂಚಿ ಏನು?

Nippon Paint takes precautions to controlg COVID19 spread
Author
Bengaluru, First Published May 11, 2020, 1:54 PM IST

ನಿಪ್ಪಾನ್ ಪೈಂಟ್‌ ಸುರಕ್ಷತಾ ಶಿಷ್ಟಾಚಾರ, ಕೋವಿಡ್ 19 ಎದುರಿಸಲು ಸಕಲ ಸಿದ್ಧತೆ..
- ನಿಪ್ಪಾನ್ ಪೈಂಟ್ ಡಿಪೋಗಳಲ್ಲಿ ಸ್ಯಾನಿಟೈಜೇಷನ್‌ನೊಂದಿಗೆ ಕಾರ್ಯಾರಂಭ. ಎಲ್ಲ ಪಾಲುದಾರರ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ. 
- ಉತ್ಪನ್ನ ಪೂರೈಸುವವರ ದೃಷ್ಟಿಯಿಂದ ಸ್ಯಾನಿಟೈಜೇಷನ್ ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಕಂಪನಿಯಿಂದ ಸೂಕ್ತ ಮಾರ್ಗಸೂಚಿ ಬಿಡುಗಡೆ. 

ಚೆನ್ನೈ (ಮೇ 11):  ಏಷ್ಯಾದ ಅತೀ ದೊಡ್ಡ ಪೈಂಟ್ ಉತ್ಪಾದಕ ಕಂಪನಿಯಾದ ನಿಪ್ಪಾನ್ ಪೇಂಟ್ (ಭಾರತ) (ಅಲಂಕಾರ ವಿಭಾಗ), ಭಾರತದೆಲ್ಲೆಡೆ ಇರೋ ಡಿಪೋಗಳಲ್ಲಿ ಈಗಾಗಲೇ ಸ್ಯಾನಿಟೈಜೇಷನ್ ಪ್ರಕ್ರಿಯೆ ಆರಂಭಿಸಿದ್ದು, ಸಿಬ್ಬಂದಿ ಹಾಗೂ ಪಾಲುದಾರರ ಆರೋಗ್ಯ ಸುರಕ್ಷತೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೊಸ ಕ್ರಮಗಳಿಂದ ಕೋವಿಡ್-19 ಹರಡದಂತೆ ಜಾಗೃತ ಪ್ರಕ್ರಿಯೆಯನ್ನು ಆರಂಭಿಸಿದೆ. ಇದರಿಂದ ಈ ಪೇಂಟಿನೊಂದಿಗೆ ವ್ಯವಹರಿಸುವ ಸಿಬ್ಬಂದಿಯಾಗಲಿ, ಗ್ರಾಹಕರಿಗರಿಗಾಗಲಿ ಯಾವುದೇ ಅಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. 'ನಿಮ್ಮ ಹಿತದೃಷ್ಟಿಯಿಂದ ಸ್ಯೌನಿಟೈಜ್ ಮಾಡಲಾಗಿದೆ... '  ಎಂಬ ಸ್ಟಿಕ್ಕರ್‌ನೊಂದಿಗೆ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ. 

ಉತ್ಪಾದಸಲ್ಪಟ್ಟ ಉತ್ಪನ್ನಗಳನ್ನು ಕಳುಹಿಸುವ ಮುನ್ನವೇ ಸೂಕ್ತವಾಗಿ ಡಿಸ್‌ಇನ್ಫೆಕ್ಟ್ ಮಾಡಲು ಅಗತ್ಯ ರಾಸಾಯನಿಕಗಳ ಸ್ಪ್ರೇ ಮಾಡಲಾಗುತ್ತದೆ. ಇದರೊಟ್ಟಿಗೆ ವ್ಯವಹರಿಸುವ ಪ್ರತಿಯೊಬ್ಬ ವ್ಯಕ್ತಿಗೂ ಯಾವುದೇ ಅಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಭಾರತದಲ್ಲಿ ಕೋವಿಡ್-19 ಹಬ್ಬದಂತೆ ಅಗತ್ಯ ಜಾಗೃತ ಕ್ರಮಗಳನ್ನು ಕಂಪನಿ ಅನುಸರಿಸುತ್ತಿದೆ. 

ಈ ನಿಟ್ಟಿನಲ್ಲಿ ಕಂಪನೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ ನಿಪ್ಪಾನ್ ಪೇಂಟ್ (ಭಾರತ) (ಅಲಂಕಾರಿಕ ವಿಭಾಗ) ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಎಸ್. ಮಹೇಶ್ ಆನಂದ್, 'ಭಾರತದಲ್ಲಿ ಲಾಕ್‌ಡೌನ್ ತೆರವುಗೊಳಿಸದ ನಂತರ ವ್ಯವಸ್ಥಿತವಾಗಿ ವ್ಯವಹಾರ ನಡೆಸಲು ಅನುವಾಗುವಂತೆ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಲಾಗುತ್ತಿದೆ. ಭಾರತೀಯರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಸಚಿವಾಲಯ ಕೈಗೊಳ್ಳುತ್ತಿರುವ ಕ್ರಮಗಳಂತೆ ಕಂಪನಿಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.  ಇದರಿಂದ ಉತ್ಪಾದನಾ ಘಟಕದಲ್ಲಿ, ಉತ್ಪನ್ನದ ಸಾಗಣೆ ವೇಳೆ ಹಾಗೂ ಶೋ ರೂಂ, ಗೋಡೌನ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯುವಲ್ಲಿ ಹಾಗೂ ಈ ಸವಾಲಿನ ಸಮಯವನ್ನು ಎದುರಿಸಲು ಸಹಕಾರಿಯಾಗಬಲ್ಲದು ಎಂಬ ವಿಶ್ವಾಸವಿದೆ' ಎಂದು ಭರವಸೆ ನೀಡಿದ್ದಾರೆ,
 


ನಿಪ್ಪಾನ್ ಪೇಂಟ್ ಬಗ್ಗೆ...
ವಿಶ್ವದಲ್ಲಿಯೇ ದೊಡ್ಡ ಮಟ್ಟದ ಪೇಂಟ್ ಉತ್ಫಾದನಾ ಕಂಪನಿಗಳಲ್ಲಿ ಒಂದಾದ ನಿಪ್ಪಾನ್ 140 ವರ್ಷಗಳ ಹಿಂದೆ ಮೊದಲು ಜಪಾನ್‌‌ನಲ್ಲಿ ಆರಂಭವಾಗಿದ್ದು, ಇದೀಗ ಏಷ್ಯಾದಲ್ಲಿಯೇ ನಂ.1 ಪೇಂಟ್ ಉತ್ಫಾದನಾ ಕಂಪನಿಯಾಗಿ ಹೊರ ಹೊಮ್ಮಿದೆ. ಅಲಂಕಾರಿಕ ಉದ್ದೇಶಕ್ಕಾಗಿ, ಉದ್ಯಮ ಹಾಗೂ ಆಟೋಮೋಬೈಲ್ ಕ್ಷೇತ್ರಗಳ ಬಳಕೆಗಾಗಿ ಅತ್ಯತ್ತಮ ಗುಣಮಟ್ಟದ ಪೇಂಟ್ ಉತ್ಪಾದಿಸುವಲ್ಲಿ ನಿಪ್ಪಾನ್ ಹೆಸರುವಾಸಿಯಾಗಿದೆ. ಪೈಂಟ್ ತಂತ್ರಜ್ಞಾನ, ಹೊಸ ಹೊಸ ಅನ್ವೇಷಣೆ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ನಿಪ್ಪಾನ್ ಸದಾ ಮುಂದಿದ್ದು, ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸುತ್ತಲೇ ಬಂದಿದೆ. ಪರಿಸರ ರಕ್ಷಣೆಯೊಂದಿಗೆ, ಗ್ರಾಹಕರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಪ್ಪಾನ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗ್ರಾಹಕರು ಹಾಗೂ ಸಮಾಜಕ್ಕೆ ಅನುಕೂಲವಾಗುವಂತೆ ಹತ್ತು ಹಲವು ಕ್ರಮಗಳನ್ನು ಕೈಗೊಂಡ ನಿಪ್ಪಾನ್ ಸೈ ಎನಿಸಿಕೊಂಡಿದೆ. ಜಪಾನ್, ಸಿಂಗಾಪುರ, ಮಲೇಷ್ಯಾ, ದಕ್ಷಿಣ ಕೊರಿಯಾ, ಚೀನಾ, ಭಾರತ, ಪಾಕಿಸ್ತಾನ, ಬ್ರಿಟನ್, ಜರ್ಮನಿ, ಗ್ರೀಸ್, ರಷ್ಯಾ ಸೇರಿ ವಿಶ್ವದ 31 ದೇಶಗಳಲ್ಲಿ ನಿಪ್ಪಾನ್ ತನ್ನ ಅಸ್ತಿತ್ವವನ್ನು ಹೊಂದಿದೆ. 

Nippon Paint takes precautions to controlg COVID19 spread


Nippon Paint takes precautions to controlg COVID19 spread

Follow Us:
Download App:
  • android
  • ios