ಜರ್ಮನಿ ಆಯ್ತು, ಈಗ ನ್ಯೂಜಿಲೆಂಡ್ ಸರದಿ;18 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಆರ್ಥಿಕ ಹಿಂಜರಿತದ ಹೊಡೆತ

ನ್ಯೂಜಿಲೆಂಡ್ ಕಳೆದ 18 ತಿಂಗಳಲ್ಲಿ ಎರಡನೇ ಬಾರಿ ಆರ್ಥಿಕ ಹಿಂಜರಿತಕ್ಕೊಳಗಾಗಿದೆ. ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ. 

New Zealand slips into second recession in 18 months as economy contracts anu

ನವದೆಹಲಿ (ಮಾ.21): ನ್ಯೂಜಿಲೆಂಡ್ ಆರ್ಥಿಕತೆ ಕಳೆದ 18 ತಿಂಗಳಲ್ಲಿ ಎರಡನೇ ಬಾರಿ ಆರ್ಥಿಕ ಹಿಂಜರಿತಕ್ಕೊಳಗಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿ ಅಂಕಿಅಂಶಗಳು 2023ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕತೆ ಸಂಕುಚಿತಗೊಂಡಿರೋದನ್ನು ದೃಢಪಡಿಸಿದ್ದಾರೆ. ನ್ಯೂಜಿಲೆಂಡ್ ಆರ್ಥಿಕತೆ ಡಿಸೆಂಬರ್ ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಶೇ.0.1ಕ್ಕೆ ಸಂಕುಚಿತಗೊಂಡಿದೆ. ಹಾಗೆಯೇ ಬಂಡವಾಳದ ಆಧಾರದಲ್ಲಿ ನೋಡಿದರೆ ಶೇ.0.7ರಷ್ಟು ಕುಸಿತ ಕಂಡಿದೆ ಎಂದು ನ್ಯೂಜಿಲೆಂಡ್ ಅಧಿಕೃತ ಸಾಂಖ್ಯಿಕ ಏಜೆನ್ಸಿ ಮಾಹಿತಿ ನೀಡಿದೆ ಎಂಬ ವಿಚಾರವನ್ನು ಸ್ಟೇಟ್ಸ್ ನ್ಯೂಜಿಲೆಂಡ್ ಗುರುವಾರ ಪ್ರಕಟಿಸಿದೆ. ಇನ್ನು ಸೆಪ್ಟೆಂಬರ್ ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ನ್ಯೂಜಿಲೆಂಡ್ ಆರ್ಥಿಕತೆ ಶೇ.0.3ರಷ್ಟು ಸಂಕುಚಿತಗೊಂಡಿದೆ. ಕಳೆದ 18 ತಿಂಗಳಲ್ಲಿ ಇದು ನ್ಯೂಜಿಲೆಂಡ್ ನ ಎರಡನೇ ಆರ್ಥಿಕ ಹಿಂಜರಿತವಾಗಿದೆ. 

ಕಳೆದ 5 ತ್ರೈಮಾಸಿಕದಲ್ಲಿ ನಾಲ್ಕರಲ್ಲಿ ನ್ಯೂಜಿಲೆಂಡ್ ಜಿಡಿಪಿ ನಕಾರಾತ್ಮಕ ಸಂಖ್ಯೆಗೆ ತಿರುಗಿದೆ. ಹಾಗೆಯೇ ಇದರ ವಾರ್ಷಿಕ ಪ್ರಗತಿ ದರ ಶೇ.0.6ಕ್ಕೆ ಸ್ಥಗಿತಗೊಂಡಿತ್ತು. ಆರ್ಥಿಕ ಕುಸಿತವನ್ನು ದೊಡ್ಡ ಮಟ್ಟದಲ್ಲಿ ನಿರೀಕ್ಷಿಸಲಾಗಿತ್ತು. ನ್ಯೂಜಿಲೆಂಡ್ ಕೇಂದ್ರ ಬ್ಯಾಂಕ್ ನಿಶ್ಚಲ ಅಂಕಿಅಂಶವನ್ನು ನಿರೀಕ್ಷಿಸಿತ್ತು. ಇನ್ನು ಬ್ಯಾಂಕ್ ಅರ್ಥಶಾಸ್ತ್ರಜ್ಞರು ಸಣ್ಣ ಮಟ್ಟದ ಸಂಕುಚಿತ ಹಾಗೂ ಭಾಗಶಃ ಪ್ರಗತಿಯನ್ನು ನಿರೀಕ್ಷಿಸಿದ್ದರು. ಇನ್ನು ಕಳೆದ ಐದು ತ್ರೈಮಾಸಿಕದಲ್ಲಿ ತಲಾ ಆದಾಯದ ಆಧಾರದಲ್ಲಿ ಗಮನಿಸಿದರೆ ಶೇ.0.8ರಷ್ಟು ಹಿನ್ನಡೆ ಕಂಡಿದೆ.

ಇನ್ನು 3 ವರ್ಷದಲ್ಲಿ ಭಾರತ ವಿಶ್ವದ ನಂ. 3 ಆರ್ಥಿಕ ಶಕ್ತಿ: ಜರ್ಮನಿ, ಜಪಾನ್‌ ಹಿಂದಿಕ್ಕಲಿದೆ ದೇಶ

ನ್ಯೂಜಿಲೆಂಡ್ ಗೆ ವಲಸೆ ಆಗಮಿಸುತ್ತಿರೋರ ಪ್ರಮಾಣದಲ್ಲಿ ದಾಖಲೆಯ ಏರಿಕೆಯಾಗಿದೆ. 2023ರಲ್ಲಿ ಈ ರಾಷ್ಟ್ರಕ್ಕೆ ವಲಸೆ ಬಂದವರ ಸಂಖ್ಯೆ 1,41,000. ಜನಸಂಖ್ಯೆ ಹೆಚ್ಚಳವಾಗದಿದ್ದರೂ ಆರ್ಥಿಕತೆ ಸ್ಥಿರವಾಗಿದೆ. ಇನ್ನು ನ್ಯೂಜಿಲೆಂಡ್ ಆರ್ಥಿಕತೆಯ ಸ್ಥಾನ ಇನ್ನೂ ಹೆಚ್ಚಿನ ವೇಗದಲ್ಲಿ ತಗ್ಗುವ ಸಾಧ್ಯತೆಯಿದೆ.  ನ್ಯೂಜಿಲೆಂಡ್ ನ ಪ್ರಸಕ್ತ ಆರ್ಥಿಕ ಪರಿಸ್ಥಿತಿಗಳು ಸರ್ಕಾರಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಹಾಗೂ ರಾಷ್ಟ್ರದ ಮುಂಬರುವ ಬಜೆಟ್  ಮೇಲೆ ಪರಿಣಾಮ ಬೀರಲಿದೆ ಎಂದು ರೆಗ್ಯುಲೇಷನ್ ಸಚಿವ ಡೇವಿಡ್ ಸೆಮೋರ್ ತಿಳಿಸಿದ್ದಾರೆ.

ಕಳೆದ ತಿಂಗಳು ಜರ್ಮನಿಗೆ ಆರ್ಥಿಕ ಹಿಂಜರಿತದ ಹೊಡೆತ
ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಈ ವರ್ಷದ ಫೆಬ್ರವರಿಯಲ್ಲಿ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸಿದೆ. ಅದಕ್ಕೂ ಹಿಂದೆ ಬ್ರಿಟನ್ ಮತ್ತು ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಯುರೋ ಪ್‌ನ ಮತ್ತೊಂದು ದೇಶ ಕೂಡ ಅದೇ ಹಾದಿ ಹಿಡಿದಿರುವಂತಿದೆ.

ಜಪಾನ್, ಬ್ರಿಟನ್ ಬಳಿಕ ಜರ್ಮನಿಗೀಗ ಆರ್ಥಿಕ ಹಿಂಜರಿತ

20238 ಕೊನೆಯ ತ್ರೈಮಾಸಿಕದಲ್ಲಿ ಶೇ.0.3ರಷ್ಟು ಕುಸಿತ ಕಂಡಿದ್ದ ಜರ್ಮನಿಯ ಜಿಡಿಪಿ, ಜನವರಿ- ಮಾರ್ಚ್ ನಡುವಣ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮತ್ತೊಮ್ಮೆ ಕುಂಠಿತವಾಗಬಹುದು ಎಂದು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಬುಂಡೇಸ್‌ ಬ್ಯಾಂಕ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿತ್ತು.  ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಕುಂಠಿತವಾದರೆ ಜರ್ಮನಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ದೂಡಲ್ಪಡುತ್ತದೆ ಎಂದು ತಿಳಿಸಿತ್ತು. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ತರುವಾಯ ಜರ್ಮನಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದರ ಜತೆಗೆ ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಇಳಿಮುಖವಾಗಿದೆ. ವಿದೇಶಗಳಿಂದ ಬೇಡಿಕೆ ಕಡಿಮೆಯಾಗಿ, ಗ್ರಾಹಕರ ವೆಚ್ಚ ತಗ್ಗಿ, ದೇಶೀಯ ಹೂಡಿಕೆ ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ರೈಲು ಹಾಗೂ ವಿಮಾನಯಾನ ವಲಯ ಸೇರಿ ದಂತೆ ವಿವಿಧ ನೌಕರರು ಮುಷ್ಕರ ನಡೆಸಿದ್ದು ಕೂಡ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ಜರ್ಮನಿಯ ಕೇಂದ್ರೀಯ ಬ್ಯಾಂಕ್ ಹೇಳಿದೆ.ವಿಶ್ವದ ಬಹುತೇಕ ಶ್ರೀಮಂತ ರಾಷ್ಟ್ರಗಳು ಹಣದುಬ್ಬರದಿಂದ ಕಂಗೆಟ್ಟು ಚೇತರಿಸಿಕೊಳ್ಳುವ ಹಾದಿಯಲ್ಲಿರುವಾಗಲೇ ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. 

Latest Videos
Follow Us:
Download App:
  • android
  • ios