ಜಪಾನ್, ಬ್ರಿಟನ್ ಬಳಿಕ ಜರ್ಮನಿಗೀಗ ಆರ್ಥಿಕ ಹಿಂಜರಿತ
ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸ ತೊಡಗಿದೆ. ಕಳೆದ ವಾರವಷ್ಟೇ ಬ್ರಿಟನ್ ಮತ್ತು ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಯುರೋ ಪ್‌ನ ಮತ್ತೊಂದು ದೇಶ ಕೂಡ ಅದೇ ಹಾದಿ ಹಿಡಿದಿರುವಂತಿದೆ.
ಏಕೆ ಆರ್ಥಿಕ ಹಿಂಜರಿತ?
• ಕಳೆದ ವಾರವಷ್ಟೇ ಜಪಾನ್ ದೇಶವನ್ನು ಹಿಂದಿಕ್ಕಿ ಜಗತ್ತಿನ 3ನೇ ಆರ್ಥಿಕತೆಯಾಗಿ ಹೊರಹೊಮ್ಮಿದ್ದ ಜರ್ಮನಿ
• ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಋಣಾತ್ಮಕ ಪ್ರಗತಿ: ಕೇಂದ್ರ ಬ್ಯಾಂಕ್
• ಯುದ್ಧದ ಕಾರಣ ತೀವ್ರ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆಯೇರಿಕೆ
• ಕೈಗಾರಿಕಾ ಉತ್ಪಾದನೆ ಇಳಿಮುಖ, ವಿದೇಶಗಳಿಗೆ ರಫ್ತು ಕೂಡ ಇಳಿಕೆ
• ದೇಶದಲ್ಲಿ ಜನರು ಖರ್ಚು ಮಾಡುವ ಪ್ರಮಾಣ, ಬಂಡವಾಳ ಹೂಡಿಕೆ ಕುಸಿತ
• ರೈಲ್ವೆ, ವಿಮಾನ ಸೇರಿ ಹಲವು ಕ್ಷೇತ್ರಗಳ ಸಿಬ್ಬಂದಿ ಧರಣಿಯಿಂದ ಬಿಕ್ಕಟ್ಟು
ಬರ್ಲಿನ್: ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸ ತೊಡಗಿದೆ. ಕಳೆದ ವಾರವಷ್ಟೇ ಬ್ರಿಟನ್ ಮತ್ತು ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಯುರೋ ಪ್‌ನ ಮತ್ತೊಂದು ದೇಶ ಕೂಡ ಅದೇ ಹಾದಿ ಹಿಡಿದಿರುವಂತಿದೆ.
20238 ಕೊನೆಯ ತ್ರೈಮಾಸಿಕದಲ್ಲಿ ಶೇ.0.3ರಷ್ಟು ಕುಸಿತ ಕಂಡಿದ್ದ ಜರ್ಮನಿಯ ಜಿಡಿಪಿ, ಜನವರಿ- ಮಾರ್ಚ್ ನಡುವಣ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮತ್ತೊಮ್ಮೆ ಕುಂಠಿತವಾಗಬಹುದು ಎಂದು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಬುಂಡೇಸ್ ಬ್ಯಾಂಕ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಕುಂಠಿತವಾದರೆ ಜರ್ಮನಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ದೂಡಲ್ಪಡುತ್ತದೆ ಎಂದು ತಿಳಿಸಿದೆ.
ಆದಾಯಕ್ಕಿಂತಲೂ ಪಾಕಿಸ್ತಾನದ ಸಾಲವೇ ಹೆಚ್ಚು..!
ಗಮನಾರ್ಹ ಎಂದರೆ, ಕಳೆದ ವಾರವಷ್ಟೇ ಜಪಾನ್ ಅನ್ನು ಹಿಂದಿಕ್ಕಿ ಜರ್ಮನಿ ವಿಶ್ವದ 3ನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿತ್ತು. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ತರುವಾಯ ಜರ್ಮನಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದರ ಜತೆಗೆ ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಇಳಿಮುಖವಾಗಿದೆ. ವಿದೇಶಗಳಿಂದ ಬೇಡಿಕೆ ಕಡಿಮೆಯಾಗಿ, ಗ್ರಾಹಕರ ವೆಚ್ಚ ತಗ್ಗಿ, ದೇಶೀಯ ಹೂಡಿಕೆ ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ರೈಲು ಹಾಗೂ ವಿಮಾನಯಾನ ವಲಯ ಸೇರಿ ದಂತೆ ವಿವಿಧ ನೌಕರರು ಮುಷ್ಕರ ನಡೆಸಿದ್ದು ಕೂಡ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ಜರ್ಮನಿಯ ಕೇಂದ್ರೀಯ ಬ್ಯಾಂಕ್ ಹೇಳಿದೆ.
ಭಾರತದ ಟಾಟಾ ಕಂಪನಿ ಪಾಕಿಸ್ತಾನಕ್ಕಿಂತಲೂ ಶ್ರೀಮಂತ