ನಗರದ ಅಂದ ಚೆಂದ ಹೆಚ್ಚಿಸಿದ್ದ ಐತಿಹಾಸಿಕ ಬಿಲ್ಡಿಂಗ್ ಮಾರಾಟ| ನಗರವೊಂದರ ಪ್ರತಿನಿಧಿಯಾಗಿ ಮೆರೆದಾಡಿದ್ದ ಬಿಲ್ಡಿಂಗ್| ಮಾರಾಟವಗಲಿದೆ ನ್ಯೂಯಾರ್ಕ್ ನ ಐತಿಹಾಸಿಕ ಕ್ರಿಸ್ಲರ್ ಬಿಲ್ಡಿಂಗ್| ಕೇವಲ 150 ಮಿಲಿಯನ್ ಅಮೆರಿಕನ್ ಡಾಲರ್ ಗೆ ಮಾರಾಟ| 1930ರಲ್ಲಿ ನಿರ್ಮಿಸಲಾಗಿದ್ದ 319 ಮೀಟರ್ ಎತ್ತರದ ಕ್ರಿಸ್ಲರ್ ಬಿಲ್ಡಿಂಗ್|
ನ್ಯೂಯಾರ್ಕ್(ಮಾ.10): ಕೆಲವು ಕಟ್ಟಡಗಳು ಹಾಗೆನೆ. ತಂತಾನೆ ನಗರವೊಂದರ ಪ್ರತಿನಿಧಿಯಾಗಿ ಬಿಡುತ್ತವೆ. ಪ್ರಮುಖ ನಗರಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿಯೂ ಈ ಕಟ್ಟಡಗಳು ಹೆಸರುವಾಸಿಯಾಗಿ ಬಿಡುತ್ತವೆ.
ಅದರಂತೆ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕ್ರಿಸ್ಲರ್ ಬಿಲ್ಡಿಂಗ್ ಕೂಡ ಆ ನಗರದ ಖ್ಯಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು.
ನ್ಯೂಯಾರ್ಕ್ ಸಿಟಿ ಬಿಲ್ಡಿಂಗ್ ಎಂದೇ ಹೆಸರು ಗಳಿಸಿದ್ದ ಕ್ರಿಸ್ಲರ್ ಬಿಲ್ಡಿಂಗ್ ಇದೀಗ ಮಾರಾಟವಾಗುತ್ತಿದೆ. ಈ ಬಿಲ್ಡಿಂಗ್ ಕೇವಲ 150 ಮಿಲಿಯನ್ ಅಮೆರಿಕನ್ ಡಾಲರ್ ಗೆ ಮಾರಾಟವಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
2018ರಲ್ಲಿ ಕ್ರಿಸ್ಲರ್ ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್ ಬೆಲೆಯೇ ಸುಮಾರು 32 ಮಿಲಿಯನ್ ಅಮೆರಿಕನ್ ಡಾಲರ್ ಎಂದು ನಿರ್ಧರಿಸಲಾಗಿತ್ತು. ಇದು 2028ರಲ್ಲಿ 41 ಮಿಲಿಯನ್ ಅಮೆರಿನ್ ಡಾಲರ್ ತಲುಪಲಿತ್ತು.
ಕ್ರಿಸ್ಲರ್ ಬಿಲ್ಡಿಂಗ್ ಇತಿಹಾಸ:
319 ಮೀಟರ್ ಎತ್ತರದ ಕ್ರಿಸ್ಲರ್ ಬಿಲ್ಡಿಂಗ್ ನ್ನು 1930ರಲ್ಲಿ ನಿರ್ಮಿಸಲಾಗಿತ್ತು. ವಾಲ್ಟರ್ ಕ್ರಿಸ್ಲರ್ ಒಡೆತನದ ಈ ಬಿಲ್ಡಿಂಗ್ ಆ ಕಾಲದ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂದು ಖ್ಯಾತಿ ಗಳಿಸಿತ್ತು. ಅದರೆ ಕೇವಲ 11 ತಿಂಗಳ ಬಳಿಕ ಮ್ಯಾನ್ ಹ್ಯಾಟನ್ ನಲ್ಲಿ ನಿಮಿರ್ಮಿಸಲಾದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಈ ದಾಖಲೆಯನ್ನು ಅಳಿಸಿ ಹಾಕಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 10, 2019, 12:28 PM IST