Asianet Suvarna News Asianet Suvarna News

LPG Cylinder:ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬಿಡಿ, ಹೊಸ ಕನೆಕ್ಷನ್ ಪಡೆಯೋದು ಕೂಡ ದುಬಾರಿ ಆಗೋಯ್ತು ಈಗ!

ಕಳೆದ ತಿಂಗಳು ಎರಡು ಬಾರಿ ಹೆಚ್ಚಳಗೊಂಡ ಗೃಹ ಬಳಕೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಂಗೆಟ್ಟಿರುವ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹೊಸ ಎಲ್ ಪಿಜಿ ಗ್ಯಾಸ್ ಸಂಪರ್ಕ ಪಡೆಯಲು ಪಾವತಿಸುವ ಭದ್ರತಾ ಠೇವಣಿ ಮೊತ್ತದಲ್ಲಿ ನಾಳೆಯಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ. 
 

New LPG gas connection Security Deposit hike how much you will have to pay now
Author
Bangalore, First Published Jun 15, 2022, 5:53 PM IST

ನವದೆಹಲಿ (ಜೂ.15): ನೀವು ಹೊಸ ಎಲ್ಪಿಜಿ ಗ್ಯಾಸ್ (LPG gas) ಸಂಪರ್ಕ (connection) ತೆಗೆದುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ರೆ, ಹೆಚ್ಚು ಹಣ ತೆರಲು ಸಿದ್ಧರಾಗಿ. ಏಕೆಂದ್ರೆ ತೈಲ ಮಾರ್ಕೆಟಿಂಗ್  ಕಂಪನಿಗಳು  (OMCs) ಹೊಸ ಸಿಲಿಂಡರ್ ಗಳ (cylinders) ಭದ್ರತಾ ಠೇವಣಿ (Security Deposit) ಮೊತ್ತವನ್ನು ಹೆಚ್ಚಿಸಿವೆ. ಈ ಹೊಸ ದರಗಳು ಜೂನ್ 16ರಿಂದಲೇ ಜಾರಿಗೆ ಬರಲಿವೆ. ಈಗಾಗಲೇ  ದುಬಾರಿ ಎಲ್ ಪಿಜಿ ಗೃಹ ಬಳಕೆ ಸಿಲಿಂಡರ್ ಬೆಲೆ ಹಾಗೂ ಪೆಟ್ರೋಲ್ (Petrol), ಡಿಸೇಲ್ (Diesel) ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಜನರಿಗೆ ಭದ್ರತಾ ಠೇವಣಿ ಹೆಚ್ಚಳ ಮತ್ತೊಂದು ಶಾಕ್ ನೀಡಿದೆ. 

ಪ್ರಸ್ತುತ ಪ್ರತಿ ಹೊಸ ಗ್ಯಾಸ್ ಕನೆಕ್ಷನ್ ಗೆ 1450ರೂ. ಭದ್ರತಾ ಠೇವಣಿ ಪಾವತಿಸಬೇಕು. ಹೊಸ ಪರಿಷ್ಕರಣೆಯಿಂದ ಗ್ಯಾಸ್ ಕನೆಕ್ಷನ್ ಪಡೆಯಲು 2200ರೂ. ಪಾವತಿಸಬೇಕಿದೆ. ಹೀಗಾಗಿ ಗ್ರಾಹಕರು ಈಗ  750ರೂ. ಹೆಚ್ಚುವರಿ ಹಣ ಪಾವತಿಸಬೇಕಿದೆ. ಇನ್ನು ಗ್ಯಾಸ್ ಕನೆಕ್ಷನ್ ಪಡೆಯುವ ಸಂದರ್ಭದಲ್ಲಿ ತಲಾ 14.2 ಕೆಜಿಯ ಎರಡು ಸಿಲಿಂಡರ್ ತೆಗೆದುಕೊಳ್ಳುವ ಗ್ರಾಹಕರು ಕನೆಕ್ಷನ್ ಶುಲ್ಕದ ಜೊತೆಗೆ 1,500ರೂ. ಹೆಚ್ಚುವರಿ ಹಣ ಪಾವತಿಸಬೇಕಿದೆ. ಅಂದ್ರೆ ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಾಗ ಎರಡು ಸಿಲಿಂಡರ್ ತೆಗೆದುಕೊಳ್ಳುವ ಗ್ರಾಹಕರು ಒಟ್ಟು  4,400ರೂ. ಭದ್ರತಾ ಠೇವಣಿ ಪಾವತಿಸಬೇಕಾಗಿದೆ. 

Post Office Schemes:ತೆರಿಗೆ ಉಳಿತಾಯಕ್ಕೆ, ಉತ್ತಮ ರಿಟರ್ನ್ಸ್ ಗೆ ಬ್ಯಾಂಕ್ ಎಫ್ ಡಿಗಿಂತ ಅಂಚೆ ಕಚೇರಿಯ ಈ 5 ಯೋಜನೆಗಳು ಬೆಸ್ಟ್!

ದುಬಾರಿಯಾದ ಗ್ಯಾಸ್ ರೆಗ್ಯುಲೇಟರ್ 
ಗ್ಯಾಸ್ ಕನೆಕ್ಷನ್ ಭದ್ರತಾ ಠೇವಣಿ ಮೊತ್ತದ ಜೊತೆಗೆ ಈಗ ಗ್ಯಾಸ್ ರೆಗ್ಯುಲೇಟರ್ (Gas Regulator) ಬೆಲೆಯಲ್ಲಿ ಕೂಡ ಹೆಚ್ಚಳವಾಗಿದೆ. ಎಲ್ ಪಿಜಿ ಗ್ಯಾಸ್ ರೆಗ್ಯುಲೇಟರ್ ಖರೀದಿಸಲು ಗ್ರಾಹಕರು ಈಗ ಮೊದಲಿಗಿಂತ ಹೆಚ್ಚು ಹಣ ಪಾವತಿಸಬೇಕಿದೆ. ಈ ಹಿಂದೆ ರೆಗ್ಯುಲೇಟರ್ ಬೆಲೆ 150ರೂ. ಆಗಿತ್ತು. ಈಗ ಗ್ರಾಹಕರು 250ರೂ. ಪಾವತಿಸಬೇಕಿದೆ. ಅಂದ್ರೆ 100ರೂ. ಏರಿಕೆಯಾಗಿದೆ. 

5ಕೆಜಿ ಸಿಲಿಂಡರ್ ಭದ್ರತಾ ಠೇವಣಿ ಹೆಚ್ಚಳ
5ಕೆಜಿ ಸಿಲಿಂಡರ್ ಮೇಲಿನ ಭದ್ರತಾ ಹಣವನ್ನು (Security Deposit) ಕೂಡ ಕಂಪನಿಗಳು ಹೆಚ್ಚಿಸಿವೆ. ಈ ಹಿಂದೆ 800ರೂ. ಇದ್ದ ಪ್ರತಿ 5ಕೆಜಿ ಸಿಲಿಂಡರ್ ಬೆಲೆಯನ್ನು ಈಗ 1150ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಹೊಸ ಗ್ಯಾಸ್ ಕನೆಕ್ಷನ್ ಪಡೆಯುವ ಸಂದರ್ಭದಲ್ಲಿ ಪಾಸ್ ಪುಸ್ತಕಕ್ಕೆ  (Passbook) ಕೂಡ ಗ್ರಾಹಕರು 25ರೂ. ಪಾವತಿಸಬೇಕಿದೆ. ಹಾಗೆಯೇ ಪೈಪ್ ಗೆ 150ರೂ. ಪಾವತಿಸಬೇಕು. ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆಯುವವರಿಗೆ ಈ ಬೆಲೆ ಪರಿಷ್ಕರಣೆ ಅನ್ವಯಿಸೋದಿಲ್ಲ ಎಂದು ತೈಲ ಕಂಪನಿಗಳು ತಿಳಿಸಿವೆ.

SBI Hikes Interest:ಸಾಲದ ಬಡ್ಡಿದರ ಏರಿಸಿದ ಎಸ್ ಬಿಐ; ಸಾಲಗಾರರಿಗೆ ಮತ್ತೆ ಇಎಂಐ ಹೆಚ್ಚಳದ ಬಿಸಿ

ಕಳೆದ ತಿಂಗಳು ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ (domestic LPG cylinder) ಬೆಲೆಯಲ್ಲಿ ಎರಡು ಬಾರಿ ಏರಿಕೆ ಮಾಡಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 1,002 ರೂ.ಇದೆ. ದೇಶಾದ್ಯಂತ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಸಾವಿರದ ಗಡಿ ದಾಟಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಬಡ ವರ್ಗದ ಜನರಿಗೆ ಎಲ್ ಪಿಜಿ (LPG) ಸಬ್ಸಿಡಿಯನ್ನು (Subsidy) ಘೋಷಿಸಿದೆ.  ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan Mantri Ujjwala Yojana) 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್  (12 ಸಿಲಿಂಡರ್ ತನಕ) ಮೇಲೆ 200ರೂ. ಸಬ್ಸಿಡಿ (Subsidy) ಘೋಷಿಸಲಾಗಿದೆ. ಇದ್ರಿಂದ ಗೃಹ ಬಳಕೆ ಸಿಲಿಂಡರ್ ಕಡಿಮೆ ದರದಲ್ಲಿ ಬಡ ವರ್ಗದವರಿಗೆ ಲಭ್ಯವಾಗಲಿದೆ.

Follow Us:
Download App:
  • android
  • ios