Post Office Schemes:ತೆರಿಗೆ ಉಳಿತಾಯಕ್ಕೆ, ಉತ್ತಮ ರಿಟರ್ನ್ಸ್ ಗೆ ಬ್ಯಾಂಕ್ ಎಫ್ ಡಿಗಿಂತ ಅಂಚೆ ಕಚೇರಿಯ ಈ 5 ಯೋಜನೆಗಳು ಬೆಸ್ಟ್!

ಹೂಡಿಕೆ ಉತ್ತಮ ರಿಟರ್ನ್ಸ್ ತಂದು ಕೊಡುವ ಜೊತೆಗೆ ತೆರಿಗೆಯನ್ನೂ ಉಳಿಸಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಹೀಗೆ ಒಂದು ಹೂಡಿಕೆ, ಎರಡು ಲಾಭಕ್ಕೆ ಬ್ಯಾಂಕಿನ ಸ್ಥಿರ ಠೇವಣಿಗಿಂತಲೂ ಉತ್ತಮ ಹೂಡಿಕೆಯೆಂದ್ರೆ ಅದು ಅಂಚೆ ಕಚೇರಿ ಉಳಿತಾಯ ಯೋಜನೆಗಳು. ಹಾಗಾದ್ರೆ ತೆರಿಗೆ ಉಳಿಸೋ ಜೊತೆ ಉತ್ತಮ ರಿಟರ್ನ್ಸ್ ನೀಡುವ ಅಂಚೆ ಕಚೇರಿಯ ಟಾಪ್ 5 ಯೋಜನೆಗಳು ಯಾವುವು? 

Better than bank Fixed Deposits Here are 5 Post Office schemes with higher returns tax benefits

Business Desk: ಹೂಡಿಕೆ ಮಾಡುವ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರು ಹಾಗೂ ಹಿರಿಯ ನಾಗರಿಕರು ಮೊದಲು ಗಮನಿಸೋದು ಸುರಕ್ಷತೆಯನ್ನು. ಹೌದು, ಹೆಚ್ಚು ಸುರಕ್ಷಿತ, ನಿರ್ದಿಷ್ಟ ರಿಟರ್ನ್ಸ್ ಭರವಸೆ ನೀಡುವ ಹಾಗೂ ಕಡಿಮೆ ಅಪಾಯದ ಹೂಡಿಕೆಗೆ  ಇವರು ಮಹತ್ವ ನೀಡುತ್ತಾರೆ. ಸುರಕ್ಷಿತ ಹೂಡಿಕೆ ಎಂದ ತಕ್ಷಣ ನೆನಪಾಗೋದು ಬ್ಯಾಂಕಿನ ಸ್ಥಿರ ಠೇವಣಿ ಹಾಗೂ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು. ಎಷ್ಟೋ ಬಾರಿ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡೋದು ಎಂಬ ಗೊಂದಲವೂ ಕಾಡುತ್ತದೆ. 

ಒಂದು ವೇಳೆ ನೀವು ಒಂದು ವರ್ಷದಿಂದ 10 ವರ್ಷಗಳ ಅವಧಿಗೆ ನಿಶ್ಚಿತ ರಿಟರ್ನ್ ಒದಗಿಸುವ ಹೂಡಿಕೆಗಳಲ್ಲಿ ಹಣ ಉಳಿತಾಯ ಮಾಡಲು ಬಯಸಿದ್ರೆ ಬ್ಯಾಂಕಿನ ಸ್ಥಿರ ಠೇವಣಿಗಿಂತಲೂ ಅಧಿಕ ಬಡ್ಡಿದರ ನೀಡುವ ಅನೇಕ ಯೋಜನೆಗಳು ಅಂಚೆ ಕಚೇರಿಯಲ್ಲಿವೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸಿದ್ದರೂ ಕೂಡ ಅಂಚೆ ಕಚೇರಿಯ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಅದಕ್ಕಿಂತ ಉತ್ತಮ ಬಡ್ಡಿದರ ಸಿಗುತ್ತದೆ. ಇನ್ನು ಅಂಚೆ ಕಚೇರಿಯ ಬಹುತೇಕ ಸಣ್ಣ ಉಳಿತಾಯ ಯೋಜನೆಗಳು ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿವೆ. ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ವಿಶೇಷ ತೆರಿಗೆ ಉಳಿತಾಯ 5 ವರ್ಷ ಅವಧಿಯ ಎಫ್ ಡಿ ಮಾತ್ರ ತೆರಿಗೆ ಪ್ರಯೋಜನವನ್ನೊಳಗೊಂಡಿದೆ. 

SBI Hikes Interest:ಸಾಲದ ಬಡ್ಡಿದರ ಏರಿಸಿದ ಎಸ್ ಬಿಐ; ಸಾಲಗಾರರಿಗೆ ಮತ್ತೆ ಇಎಂಐ ಹೆಚ್ಚಳದ ಬಿಸಿ

ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಲ್ಲ ಅಂಚೆ ಕಚೇರಿಯ 5 ಹೂಡಿಕೆ ಯೋಜನೆಗಳ ಮಾಹಿತಿ ಇಲ್ಲಿದೆ. 
1.ಸಾರ್ವಜನಿಕ ಭವಿಷ್ಯ ನಿಧಿ ಖಾತೆ (PPF)
ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಇದು 15 ವರ್ಷಗಳ ಅವಧಿಯದ್ದಾಗಿದೆ.  5 ವರ್ಷಗಳ ಬಳಿಕ ಈ ಯೋಜನೆಯಿಂದ ಹೊರಬರಲು ಅವಕಾಶವಿದೆ. ಇನ್ನು 4ನೇ ವರ್ಷ ಪಿಪಿಎಫ್ ಖಾತೆಯಲ್ಲಿರೋ ಹಣದ ಆಧಾರದಲ್ಲಿ ಸಾಲ ಪಡೆಯಲು ಅವಕಾಶವಿದೆ. 7 ವರ್ಷಗಳ ಬಳಿಕ ಈ ಖಾತೆಯಿಂದ ಸ್ವಲ್ಪ ಹಣ ಹಿಂಪಡೆಯಬಹುದು. ಈ ಖಾತೆಯನ್ನು ಸಕ್ರಿಯವಾಗಿಡಲು ಪ್ರತಿ ಹಣಕಾಸು ಸಾಲಿನಲ್ಲಿ ಕನಿಷ್ಠ 500 ರೂ. ಠೇವಣಿ ಇಡೋದು ಕಡ್ಡಾಯ. ಹಾಗೆಯೇ ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಗರಿಷ್ಠ 1,50,000 ರೂ. ಠೇವಣಿ ಇಡಬಹುದು . ಪ್ರಸ್ತುತ ಪಿಪಿಎಫ್ ಖಾತೆಯಲ್ಲಿರೋ ಮೊತ್ತಕ್ಕೆ ವಾರ್ಷಿಕ ಶೇ.7.1 ಬಡ್ಡಿ ನೀಡಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್  ಖಾತೆಯಲ್ಲಿ ಹೂಡಿಕೆ ಮಾಡಿರುವ  ಹಣಕ್ಕೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.ಹಾಗೆಯೇ ಈ ಖಾತೆಯಲ್ಲಿರುವ ಹಣಕ್ಕೆ ಗಳಿಸಿದ ಬಡ್ಡಿ ಮೇಲೆಯೂ ಯಾವುದೇ ತೆರಿಗೆ ಇಲ್ಲ.

2.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ ಎನ್ ಎಸ್ ಸಿ  5 ವರ್ಷ ಅವಧಿಯ ಹೂಡಿಕೆಯಾಗಿದೆ.  ಕೇವಲ100 ರೂ. ಜಮೆ ಮಾಡೋ ಮೂಲಕ NSCಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಪ್ರಸ್ತುತ NSCಗೆ ವಾರ್ಷಿಕ ಶೇ.6.8 ಬಡ್ಡಿ ಸಿಗುತ್ತಿದೆ. ಇದ್ರಲ್ಲಿ 1000ರೂ. ಹೂಡಿಕೆ ಮಾಡಿದ್ರೆ 5 ವರ್ಷಗಳ ಬಳಿಕ 1,389.49 ರೂ. ಸಿಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಎನ್ಎಸ್ ಸಿಯಲ್ಲಿ ಹೂಡಿಕೆ ಮಾಡಿರೋ ಮೊತ್ತಕ್ಕೆ ಗರಿಷ್ಠ 1.50 ಲಕ್ಷ ರೂ. ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.

3.ಸುಕನ್ಯಾ ಸಮೃದ್ಧಿ ಯೋಜನೆ (SSY)
ಇದು ಹೆಣ್ಣುಮಗುವಿಗಾಗಿಯೇ ರೂಪಿಸಲ್ಪಟ್ಟಿರುವ ಉಳಿತಾಯ ಯೋಜನೆ. 10 ವರ್ಷ ವಯಸ್ಸಿನೊಳಗಿನ ಯಾವುದೇ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆಯಬಹುದು. ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಲ್ಲಿ ಪ್ರತ್ಯೇಕ ಖಾತೆ ತೆರೆಯಲು ಅವಕಾಶವಿದೆ. ಖಾತೆ ತೆರೆದ 15 ವರ್ಷಗಳ ತನಕ ಈ ಖಾತೆಗೆ ಹಣ ಜಮಾ ಮಾಡಿದರೆ ಸಾಕು. ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000ರೂ. ತನಕ ಈ ಖಾತೆಯಲ್ಲಿ ಜಮಾ ಮಾಡಬಹುದು. ಪ್ರಸ್ತುತ ಈ ಖಾತೆಯಲ್ಲಿರೋ ಹಣಕ್ಕೆ ವಾರ್ಷಿಕ ಶೇ. 7.6 ಬಡ್ಡಿ ವಿಧಿಸಲಾಗುತ್ತಿದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಕೂಡ ಇದೆ. 

WPI Inflation: ಚಿಲ್ಲರೆ ಹಣದುಬ್ಬರ ತಗ್ಗಿದರೂ ಕೆಳಗಿಳಿಯದ WPI;ಮೇನಲ್ಲಿ ಶೇ.15.88ಕ್ಕೆ ಏರಿಕೆಯಾದ ಸಗಟು ಹಣದುಬ್ಬರ

4.ಅಂಚೆ ಕಚೇರಿ ಟೈಮ್ ಡೆಪಾಸಿಟ್ ಅಕೌಂಟ್ (TD)
TD ಬ್ಯಾಂಕ್ಗಳಲ್ಲಿನ ಫಿಕ್ಸಡ್ ಡೆಫಾಸಿಟ್ಗೆ ಸರಿಸಮನಾದ ಯೋಜನೆ. ಅಂಚೆ ಕಚೇರಿಯಲ್ಲಿ 1,2, 3 ಹಾಗೂ 5 ವರ್ಷಗಳ ಅವಧಿಗೆ ಟೈಮ್ ಡೆಫಾಸಿಟ್ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು ಕೂಡ ಈ ಖಾತೆ ತೆರೆಯಬಹುದು. 5 ವರ್ಷಗಳ ಅವಧಿಯ ಟಿಡಿ ಖಾತೆಯಲ್ಲಿರುವ ಠೇವಣಿಗೆ ವಾರ್ಷಿಕ ಶೇ.6.7 ಬಡ್ಡಿದರವಿದೆ. ಇನ್ನು 5 ವರ್ಷಗಳ ಅವಧಿಯ ಟಿಡಿಗೆ ಮಾತ್ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯ್ತಿ ಇದೆ. 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಹುದು.

5.ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
60 ವರ್ಷ ತುಂಬಿದ ಅಥವಾ 55ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಪಡೆದವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 15 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಇದು 5 ವರ್ಷಗಳ ಅವಧಿಯದ್ದಾಗಿದೆ. ಈ ಖಾತೆಗೆ ವಾರ್ಷಿಕ ಶೇ. 7.4 ಬಡ್ಡಿ ನೀಡಲಾಗುತ್ತಿದೆ. 

Latest Videos
Follow Us:
Download App:
  • android
  • ios