* ಆದಾಯ ತೆರಿಗೆ ಇಲಾಖೆಯ ಬಹುನಿರೀಕ್ಷಿತ ಹೊಸ ವೆಬ್‌ಸೈಟ್ ಬಿಡುಗಡೆಯಾಗಿ ಒಂದು ವಾರ * ವಾರ ಕಳೆದರೂ ಸರಿಯಾಗದ ಆದಾಯ ತೆರಿಗೆ ಹೊಸ ವೆಬ್‌ಸೈಟ್* ತೆರಿಗೆ ಪಾವತಿದಾರರಿಗೆ, ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಸಂಕಷ್ಟ
ನವದೆಹಲಿ(ಜೂ.15): ಆದಾಯ ತೆರಿಗೆ ಇಲಾಖೆಯ ಬಹುನಿರೀಕ್ಷಿತ ಹೊಸ ವೆಬ್‌ಸೈಟ್ ಬಿಡುಗಡೆಯಾಗಿ ಒಂದು ವಾರ ಕಳೆದರೂ ಅದರಲ್ಲಿನ ತಾಂತ್ರಿಕ ದೋಷಗಳು ನಿವಾರಣೆಯಾಗದಿರುವುದರಿಂದ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೆಬ್‌ಸೈಟ್‌ನಲ್ಲಿ ಈಗಲೂ ಇರುವ ಅನೇಕ ದೋಷಗಳಿಂದ ನಮಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಚಾರ್ಟರ್ಡ್ ಅಕೌಂಟೆಂಟ್‌ಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಟಿ ರಿಟರ್ನ್ಸ್‌ಗೆ ಹೊಸ ಪೋರ್ಟಲ್: ತೆರಿಗೆದಾರರಿಗಿಲ್ಲ ಹೊರೆ: ಈ ಎಲ್ಲಾ ಆಯ್ಕೆ ಇರುತ್ತೆ!
ಆದಾಯ ತೆರಿಗೆ ಪಾವತಿಯನ್ನು ಸುಲಭವಾಗಿಸುತ್ತದೆ ಮತ್ತು ಹೆಚ್ಚು ತೆರಿಗೆದಾರಸ್ನೇಹಿ ಆಗಿರುತ್ತದೆ ಎಂಬ ಪ್ರಚಾರದೊಂದಿಗೆ ಜೂ.7ರಂದು ಕೇಂದ್ರ ಸರ್ಕಾರ ಡಿಡಿಡಿ.ಜ್ಞ್ಚಿಟಞಛಿಠಿa್ಡ.ಜಟv.ಜ್ಞಿ ಬಿಡುಗಡೆ ಮಾಡಿದೆ. ಆದರೆ, ಕೆಲವರಿಗೆ ವೆಬ್‌ಸೈಟಿಗೆ ಲಾಗಿನ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅನೇಕ ಸೇವೆಗಳು ಇನ್ನೂ ‘ಕಮಿಂಗ್ ಸೂನ್’ ಹಣೆಪಟ್ಟಿಅಂಟಿಸಿಕೊಂಡಿವೆ. ಹಳೆಯ ರಿಟನ್ಸ್‌ರ್ ಸಲ್ಲಿಕೆಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ವಿದೇಶಗಳಿಗೆ ಹಣ ಕಳಿಸುವವರಿಗೆ 15ಸಿಎ/ಸಿಬಿ ಫಾಮ್‌ರ್ ಸಿಗುತ್ತಿಲ್ಲ. ಕೆಲವರಿಗೆ ವೆಬ್‌ಸೈಟಿನ ದೋಷದಿಂದಾಗಿ ಸಕಾಲಕ್ಕೆ ಹಣ ಪಾವತಿಸಲಾಗದೆ ದೊಡ್ಡ ನಷ್ಟಉಂಟಾಗಬಹುದು ಅಥವಾ ವ್ಯಾಜ್ಯ ಸಂಬಂಧಿ ನೋಟಿಸ್‌ಗಳು ಬರಬಹುದು. ಇವ್ಯಾವುವೂ ನಂದನ್ ನಿಲೇಕಣಿ ಹೇಳಿದಂತೆ ‘ಸಣ್ಣ ತೊಂದರೆಗಳಲ್ಲ’, ಬದಲಿಗೆ ದೊಡ್ಡ ತೊಂದರೆಗಳು ಎಂದು ಚಾರ್ಟರ್ಡ್ ಅಕೌಂಟೆಂಟ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಾರಿನ್ ರೆಮಿಟೆನ್ಸ್ ಖುದ್ದು ಭರ್ತಿಗೆ ಅವಕಾಶ:
ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಫಾರಿನ್ ರೆಮಿಟೆನ್ಸ್ (ವಿದೇಶದಲ್ಲಿರುವ ಭಾರತೀಯರು ತವರಿಗೆ ಕಳುಹಿಸುವ ಹಣ) ಸಲ್ಲಿಕೆಗೆ ಬೇಕಾದ ಫಾಮ್‌ರ್ 15ಸಿಎ/15ಸಿಬಿ ಅನ್ನು ಖುದ್ದು ಭರ್ತಿ ಮಾಡಿ ಬ್ಯಾಂಕ್‌ಗಳಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ಪಿಎಫ್ ಹಣವನ್ನು ಯಾವಾಗ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ
ಈ ಫಾಮ್‌ರ್‍ಗಳನ್ನು ಜೂ.30ರವರೆಗೂ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದಾಗಿದೆ. ಬಳಿಕ ಅವುಗಳನ್ನು ಆನ್‌ಲೈನ್ ಇ-ಫೈಲಿಂಗ್ ಪೋರ್ಟ್‌ಲ್‌ನಲ್ಲಿ ಸೇರಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ಮೊದಲ ದಿನದಿಂದಲೇ ಹೊಸ ವೆಬ್‌ಸೈಟ್‌ನಲ್ಲಿ ಸಾಕಷ್ಟುತಾಂತ್ರಿಕ ದೋಷಗಳಿವೆ ಎಂದು ಬಳಕೆದಾರರು ದೂರುತ್ತಾ ಬಂದಿದ್ದಾರೆ. ಅವುಗಳನ್ನು ಬೇಗ ಸರಿಪಡಿಸಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೆಬ್‌ಸೈಟ್ ಅಭಿವೃದ್ಧಿಪಡಿಸಿರುವ ಇಸ್ಫೋಸಿಸ್ ಕಂಪನಿಗೆ ಹಾಗೂ ಅದರ ಚೇರ್ಮನ್ ನಂದನ್ ನಿಲೇಕಣಿ ಅವರಿಗೆ ಟ್ವೀಟ್ ಮಾಡಿದ್ದರು. ಅವರು ಶೀಘ್ರದಲ್ಲೇ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಒಂದು ವಾರ ಕಳೆದರೂ ಆ ಸಮಸ್ಯೆಗಳು ಹಾಗೇ ಉಳಿದಿವೆ.
