Rules Change:ಜುಲೈ 1ರಿಂದ ಡೆಬಿಟ್ , ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ; ನಿಮಗೆ ತಿಳಿದಿರಲಿ ಈ 10 ಸಂಗತಿಗಳು

ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬಳಕೆಯನ್ನು ಹೆಚ್ಚು ಗ್ರಾಹಕಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಇವೆರಡಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮ ಜುಲೈ 1ರಿಂದ ಜಾರಿಯಾಗಲಿದೆ. ಹಾಗಾದ್ರೆ ಹೊಸ ನಿಯಮಗಳಲ್ಲಿ ಏನಿದೆ? 
 

New credit card rules applicable from July 1 know 10 important things

ನವದೆಹಲಿ (ಜೂ.21): ಡೆಬಿಟ್ ಕಾರ್ಡ್ (Debit card) ಹಾಗೂ ಕ್ರೆಡಿಟ್ ಕಾರ್ಡ್ (Credit card) ಇಲ್ಲದವರ ಸಂಖ್ಯೆ ಇಂದು ಕಡಿಮೆ. ಪ್ರತಿ ವ್ಯವಹಾರಕ್ಕೂ ನಗದಿಗಿಂತ (Cash) ಇವೆರಡನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಎರಡೂ ಕಾರ್ಡ್ ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ. ಹೊಸ ನಿಯಮಗಳು (New rules) ಜುಲೈ 1ರಿಂದಲೇ ಜಾರಿಗೆ ಬರಲಿವೆ. ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಬಳಕೆಯನ್ನು ಹೆಚ್ಚು ಪ್ರಯೋಜನಕಾರಿಯನ್ನಾಗಿ ಮಾಡೋದು ಹೊಸ ನಿಯಮಗಳ ಉದ್ದೇಶವಾಗಿದೆ. 

ಆರ್ ಬಿಐ  (ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್-ಪ್ರಕಟಣೆ ಹಾಗೂ ನಿರ್ವಹಣೆ) ನಿರ್ದೇಶನಗಳು- 2022 ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ನಿಬಂಧನೆಗಳು ಪೇಮೆಂಟ್ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು ಹಾಗೂ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ ಪ್ರತಿ ಬ್ಯಾಂಕಿಗೆ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ (NBFCs) ಅನ್ವಯಿಸಲಿವೆ. ಹಾಗಾದ್ರೆ ನಿಯಮಗಳಲ್ಲಿ ಯಾವೆಲ್ಲ ಬದಲಾವಣೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ.

Earn Money : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ

ಕ್ರೆಡಿಟ್ ಕಾರ್ಡ್ ಹೊಸ ನಿಯಮಗಳಿಗೆ ಸಂಬಂಧಿಸಿದ 10 ಪ್ರಮುಖ ಅಂಶಗಳು ಇಲ್ಲಿವೆ. 
1.ಹೊಸ ನಿಯಮಗಳ ಪ್ರಕಾರ ಒಪ್ಪಿಗೆಯಿಲ್ಲದೆ ಕಾರ್ಡ್ ಗಳ ವಿತರಣೆ ಅಥವಾ ಉನ್ನತೀಕರಣಕ್ಕೆ ಅವಕಾಶವಿಲ್ಲ. ಒಂದು ವೇಳೆ ಗ್ರಾಹಕರ ಒಪ್ಪಿಗೆಯಿಲ್ಲದೆ ಕಾರ್ಡ್ ವಿತರಣೆ ಅಥವಾ ಈಗಾಗಲೇ ಇರುವ ಕಾರ್ಡ್ ನ ಉನ್ನತೀಕರಣಗೊಳಿಸಿದರೆ ಹಾಗೂ ಸಕ್ರಿಯಗೊಳಿಸಿದರೆ ಕಾರ್ಡ್ ವಿತರಿಸಿದ ಸಂಸ್ಥೆ ಹಣವನ್ನು ಮರುಪಾವತಿ ಮಾಡುವುದರ ಜೊತೆಗೆ ಕಾರ್ಡ್ ನೀಡಿದವರಿಗೂ ವಿಳಂಬವಿಲ್ಲದೆ ಹಣ ಪಾವತಿಸಬೇಕು. 
2.ಇನ್ನು ಯಾರ ಹೆಸರಿನಲ್ಲಿ ಕಾರ್ಡ್ ವಿತರಿಸಲಾಗಿದೆಯೋ ಆ ವ್ಯಕ್ತಿ ಕೂಡ ಭಾರತೀಯ ರಿಸರ್ವ್ ಬ್ಯಾಂಕಿನ ಒಂಬುಡ್ಸ್ ಮನ್ ಅವರನ್ನು ಸಂಪರ್ಕಿಸಬಹುದು.  ನಿಯಮಗಳಿಗನುಸಾರವಾಗಿ ಒಂಬುಡ್ಸ್ ಮನ್ ದಂಡದ ಮೊತ್ತವನ್ನು ನಿರ್ಧರಿಸುತ್ತಾರೆ.
3.ಕಾರ್ಡ್ ವಿತರಣೆ ಅಥವಾ ಕಾರ್ಡ್ ಜೊತೆಗೆ ಇತರ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸೋದಕ್ಕೆ ಗ್ರಾಹಕರ ಲಿಖಿತ ಒಪ್ಪಿಗೆ ಅಗತ್ಯ. ಇದರ ಜೊತೆಗೆ ಕಾರ್ಡ್ ವಿತರಕರು ಇತರ ಡಿಜಿಟಲ್ ಮಾದರಿಗಳನ್ನು ಕೂಡ ಬಳಸಬಹುದು.
4.ಕಾರ್ಡ್ ಯಾರ ಹೆಸರಿನಲ್ಲಿ ನೀಡಲಾಗಿದೆಯೋ ಆ ವ್ಯಕ್ತಿಗೆ ತಲುಪದಿದ್ದರೆ ಹಾಗೂ ಅದರ ದುರ್ಬಳಕೆಯಾದ ಪ್ರಕರಣಗಳು ಸಾಕಷ್ಟು ನಡೆದಿವೆ. ಗ್ರಾಹಕನ ಸಮ್ಮತಿಯಿಲ್ಲದೆ ಇಂಥ ಕಾರ್ಡ್ ಗಳ ದುರ್ಬಳಕೆಯಾದ್ರೆ ಅದರ ಸಂಪೂರ್ಣ ಜವಾಬ್ದಾರಿ ಕಾರ್ಡ್ ವಿತರಣೆ ಮಾಡಿದ ಸಂಸ್ಥೆಯದ್ದೇ ಆಗಿದೆ. ಅಲ್ಲದೆ, ಇದಕ್ಕೆ ಯಾರ ಹೆಸರಿನಲ್ಲಿ ಕಾರ್ಡ್ ವಿತರಿಸಲಾಗಿದೆಯೋ ಆತ ಜವಾಬ್ದಾರನಲ್ಲ.
5.ಒಂದು ವೇಳೆ ಕಾರ್ಡ್ ವಿತರಿಸಿ 30 ದಿನಗಳಿಗಿಂತ ಹೆಚ್ಚು ಸಮಯವಾಗಿದ್ದು, ಗ್ರಾಹಕ ಇನ್ನೂ ಸಕ್ರಿಯಗೊಳಿಸದಿದ್ರೆ ಕಾರ್ಡ್ ವಿತರಕರು ಅಂಥ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಕಾರ್ಡ್ ಹೊಂದಿರುವ ವ್ಯಕ್ತಿಯಿಂದ ಒನ್ ಟೈಮ್ ಪಾಸ್ ವರ್ಡ್ (OTP) ಆಧಾರಿತ ಒಪ್ಪಿಗೆ ಪಡೆಯಬಹುದು. ಒಂದು ವೇಳೆ ಗ್ರಾಹಕರಿಂದ ಒಪ್ಪಿಗೆ ಸಿಗದಿದ್ರೆ ಕಾರ್ಡ್ ವಿತರಕರು ಪ್ರತಿಕ್ರಿಯೆ ಸ್ವೀಕರಿಸಿದ 7 ಕಾರ್ಯನಿರತ ದಿನಗಳೊಳಗೆ ಯಾವುದೇ ವೆಚ್ಚವಿಲ್ಲದೆ ಅಂಥ ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚಬಹುದು.
6.ಕ್ರೆಡಿಟ್ ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಅರ್ಜಿ ಜೊತೆಗೆ ಒಂದು ಪುಟದ ಮಾಹಿತಿಗಳನ್ನು ಕೂಡ ನೀಡಬೇಕು. ಇದರಲ್ಲಿ ಬಡ್ಡಿದರ, ಶುಲ್ಕಗಳು ಹಾಗೂ ಇತರ ಮಾಹಿತಿಗಳನ್ನು ನಮೂದಿಸಿರಬೇಕು. ಒಂದು ವೇಳೆ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕೃತಗೊಂಡರೂ ಏಕೆ ಹಾಗೆ ಮಾಡಲಾಯಿತು ಎಂಬ ಬಗ್ಗೆ ಕಾರ್ಡ್ ವಿತರಕರು ಲಿಖಿತ ವಿವರಣೆ ನೀಡಬೇಕು.

Pension Scheme:ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ 36 ಸಾವಿರ ಲಾಭ; ಹೇಗೆ? ಯಾವ ಯೋಜನೆ? ಇಲ್ಲಿದೆ ಮಾಹಿತಿ

7.ಕಾರ್ಡ್ ವಿತರಣಾ ಸಂಸ್ಥೆಗಳು ಮುಖ್ಯವಾದ ನಿಯಮಗಳು ಹಾಗೂ ಷರತ್ತುಗಳ ಬಗ್ಗೆ ಹೈಲೈಟ್ ಮಾಡಬೇಕು. ಹಾಗೆಯೇ ಅದನ್ನು ಗ್ರಾಹಕರಿಗೆ ಕಳುಹಿಸಬೇಕು. 
8.ಕಾರ್ಡ್ ವಿತರಕರು ಕಾರ್ಡ್ಗಳ ವಂಚನೆ ಹಾಗೂ ಅವು ಕಳೆದು ಹೋದ ಕಾರಣದಿಂದ ಉಂಟಾದ ನಷ್ಟಗಳನ್ನು ತಪ್ಪಿಸಲು ಸಹಕಾರಿಯಾದ ವಿಮಾ ಕವರೇಜ್ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸಬೇಕು.
9.ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಸಕ್ರಿಯಗೊಳ್ಳುವ ಮುನ್ನ ಹೊಸ ಕ್ರೆಡಿಟ್ ಕಾರ್ಡ್ ಖಾತೆಗೆ ಸಂಬಂಧಿಸಿದ ಯಾವುದೇ ಕ್ರೆಡಿಟ್ ಮಾಹಿತಿಯನ್ನು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ನೀಡಬಾರದು.
10.ಕಾರ್ಡ್ ವಿತರಕರು ತಾವು ನೇಮಿಸಿಕೊಂಡಿರುವ ಟೆಲಿ ಮಾರ್ಕೆಟರ್ ಗಳು ಕಾಲಕಾಲಕ್ಕೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನೀಡುವ ಸೂಚನೆಗಳನ್ನು ಅನುಸರಿಸುತ್ತಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇನ್ನು ಕಾರ್ಡ್ ವಿತರಣಾ ಸಂಸ್ಥೆ ಪ್ರತಿನಿಧಿಗಳು ಗ್ರಾಹಕರನ್ನು ಬೆಳಗ್ಗೆ 10ರಿಂದ ರಾತ್ರಿ 7ರ ನಡುವೆ ಮಾತ್ರ ಸಂಪರ್ಕಿಸಬೇಕು. 
 

Latest Videos
Follow Us:
Download App:
  • android
  • ios