ಹೊಸ ನಿಯಮ ಜಾರಿಗೊಳಿಸಿದ ರಿಸರ್ವ್ ಬ್ಯಾಂಕ್ ಖಾಲಿ ಲಾಕರ್‌ ಮಾಹಿತಿ ಕಡ್ಡಾಯ, ಎಸ್ಸೆಮ್ಮೆಸ್‌, ಇಮೇಲ್‌ ಅಲರ್ಟ್ 100 ಪಟ್ಟು ಪರಿಹಾರ,ಖಾಲಿ ಲಾಕರ್‌ ಮಾಹಿತಿ ಕಡ್ಡಾಯ 

ಮುಂಬೈ(ಏ.20): ಬ್ಯಾಂಕ್‌ ಲಾಕರ್‌ನಲ್ಲಿ ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ಇಟ್ಟಿರುವವರಿಗೆ ಹಾಗೂ ಇಡಲು ಬಯಸುವವರಿಗೆ ಖುಷಿಯ ಸುದ್ದಿ. ಒಂದು ವೇಳೆ ಲಾಕರ್‌ನಲ್ಲಿನ ವಸ್ತು ನಾಪತ್ತೆಯಾದರೆ ಲಾಕರ್‌ ಬಾಡಿಗೆಯ 100 ಪಟ್ಟು ಪರಿಹಾರವನ್ನು ಗ್ರಾಹಕರಿಗೆ ಬ್ಯಾಂಕ್‌ಗಳೇ ನೀಡಬೇಕು ಎಂಬ ಅಂಶ ಸೇರಿ ಹಲವು ಗ್ರಾಹಕ ಸ್ನೇಹಿ ಕ್ರಮಗಳನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಜಾರಿಗೊಳಿಸಿದೆ.

100 ಪಟ್ಟು ಪರಿಹಾರ:
ಲಾಕರ್‌ನಲ್ಲಿ ಇಟ್ಟವಸ್ತು ಬ್ಯಾಂಕ್‌ ನಿರ್ಲಕ್ಷ್ಯದಿಂದ ನಾಪತ್ತೆಯಾದರೆ ಅಥವಾ ಕಳೆದರೆ ಅದಕ್ಕೆ ಬ್ಯಾಂಕ್‌ ಹೊಣೆ. ಗ್ರಾಹಕನಿಗೆ ಬ್ಯಾಂಕುಗಳು ಬ್ಯಾಂಕ್‌ ಲಾಕರ್‌ ಬಾಡಿಗೆಯ 100 ಪಟ್ಟಿಗೆ ಸಮನಾದ ಪರಿಹಾರ ಮೊತ್ತವನ್ನು ನೀಡಬೇಕಾಗುತ್ತದೆ.

ಇಂದಿನಿಂದ ಈ 6 ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ

ಖಾಲಿ ಲಾಕರ್‌ ಮಾಹಿತಿ ಕಡ್ಡಾಯ:
ಈವರೆಗೆ ಬ್ಯಾಂಕ್‌ನಲ್ಲಿ ಎಷ್ಟುಲಾಕರ್‌ ಖಾಲಿ ಇವೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ಬ್ಯಾಂಕ್‌ಗಳು ನೀಡುತ್ತಿರಲಿಲ್ಲ. ಆದರೆ ಇನ್ನು ಮುಂದೆ ಎಷ್ಟುಲಾಕರ್‌ಗಳು ಖಾಲಿ ಇವೆ ಎಂದು ಶಾಖೆಯ ಫಲಕದಲ್ಲಿ ಬ್ಯಾಂಕ್‌ಗಳು ಪ್ರದರ್ಶಿಸಬೇಕು. ಹೊಸ ಅರ್ಜಿದಾರನಿಂದ ಅರ್ಜಿ ಸ್ವೀಕರಿಸಿದಾಗ ವೇಟಿಂಗ್‌ ಲಿಸ್ಟ್‌ ನಮೂದಿಸುವಿಕೆ ಕಡ್ಡಾಯ.

ಎಸ್ಸೆಮ್ಮೆಸ್‌, ಇಮೇಲ್‌ ಅಲರ್ಟ್:
ಪ್ರತಿ ಬಾರಿ ಗ್ರಾಹಕನು ಲಾಕರ್‌ಗೆ ಭೇಟಿ ನೀಡಿದಾಗ ಆ ದಿನದ ಅಂತ್ಯದೊಳಗೆ ಬ್ಯಾಂಕ್‌ಗಳು ಗ್ರಾಹಕನಿಗೆ ಎಸ್ಸೆಮ್ಮೆಸ್‌ ಹಾಗೂ ಇ-ಮೇಲ್‌ ಅಲರ್ಚ್‌ ಸಂದೇಶ ಕಳಿಸಬೇಕು. ಇದರಿಂದ ಅನ್ಯರು ಭೇಟಿ ನೀಡಿ ಎಸಗುವ ವಂಚನೆ ತಪ್ಪುತ್ತದೆ.

180 ದಿನದ ಸಿಸಿಟೀವಿ ಕಡ್ಡಾಯ:
ಬ್ಯಾಂಕ್‌ಗಳು ಲಾಕರ್‌ ಸಿಸಿಟೀವಿ ವಿಡಿಯೋ ಚಿತ್ರಿಕೆಗಳನ್ನು 180 ದಿನ ಸಂರಕ್ಷಿಸಿ ಇಡುವುದು ಕಡ್ಡಾಯ. ಇದರಿಂದ ಅನ್ಯರು ಲಾಕರ್‌ಗೆ ಭೇಟಿ ನೀಡಿ ವಂಚನೆ ಎಸಗಿದ್ದರೆ, ಸುಲಭ ಪತ್ತೆ ಸಾಧ್ಯ. ಗ್ರಾಹಕರಿಗೆ 6 ತಿಂಗಳವರೆಗೂ ದೂರಲು ಅವಕಾಶ ಲಭಿಸುತ್ತದೆ.

ಬ್ಯಾಂಕ್‌ ಲಾಕರ್‌ನಲ್ಲಿನ ಲಕ್ಷ ಲಕ್ಷ ರು. ತಿಂದ ಗೆದ್ದಲು ಹುಳು!

ಗರಿಷ್ಠ 3 ವರ್ಷದ ಬಾಡಿಗೆ ‘ಠೇವಣಿ’
ಗ್ರಾಹಕರಿಗೆ ಬ್ಯಾಂಕ್‌ಗಳು ಲಾಕರ್‌ ಠೇವಣಿ ಇಡುವ ಮೊತ್ತಕ್ಕೆ ಆರ್‌ಬಿಐ ಮಿತಿ ಹೇರಿದೆ. ಗರಿಷ್ಠ 3 ವರ್ಷದ ಬಾಡಿಗೆ ಮೊತ್ತವನ್ನು ಠೇವಣಿ ರೂಪದಲ್ಲಿ ಇಡಬಹುದಾಗಿದೆ. ಉದಾಹರಣೆಗೆ: ವರ್ಷಕ್ಕೆ 4 ಸಾವಿರ ರು. ಲಾಕರ್‌ ಬಾಡಿಗೆಯನ್ನು ಗ್ರಾಹಕ ಕಟ್ಟುತ್ತಿದ್ದರೆ, 12 ಸಾವಿರ ರು.ಗಳನ್ನು ಮಾತ್ರ ಠೇವಣಿಯಾಗಿ ಬ್ಯಾಂಕ್‌ಗಳು ಇರಿಸಿಕೊಳ್ಳಬೇಕು. ಇನ್ನೂ ಹೆಚ್ಚು ಮೊತ್ತ ಕೇಳುವಂತಿಲ್ಲ.

ಬ್ಯಾಂಕ್‌ ಲಾಕರ್‌ ರೂಂನಲ್ಲಿ 18 ಗಂಟೆ ಕಳೆದ 89ರ ವೃದ್ಧ!
ಬ್ಯಾಂಕ್‌ ಸಿಬ್ಬಂದಿಯ ನಿರ್ಲಕ್ಷ್ಯದಿಂದ 89 ವರ್ಷದ ವ್ಯಕ್ತಿಯೊಬ್ಬರು ಸುಮಾರು 18 ಗಂಟೆಗಳ ಕಾಲ ಬ್ಯಾಂಕ್‌ ಲಾಕರ್‌ನಲ್ಲಿ ಕಳೆಯಬೇಕಾದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇಲ್ಲಿನ ಜ್ಯುಬಿಲಿ ಹಿಲ್‌ನಲ್ಲಿರುವ ಯೂನಿಯನ್‌ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದೆ.

ವಿ.ಕೃಷ್ಣಾರೆಡ್ಡಿ (89)ಎಂಬ ವ್ಯಕ್ತಿ ಸೋಮವಾರ ಸಾಯಂಕಾಲ 4.20ರ ಸುಮಾರಿಗೆ ಬ್ಯಾಂಕ್‌ಗೆ ಭೇಟಿ ನೀಡಿ, ಅವರ ಲಾಕರ್‌ ಓಪನ್‌ ಮಾಡಿದ್ದಾರೆ. ಅವರು ಲಾಕರ್‌ ರೂಂನ ಒಳಗಿರುವಾಗಲೇ ಬ್ಯಾಂಕ್‌ನ ಸಿಬ್ಬಂದಿ ಬಾಗಿಲು ಮುಚ್ಚಿಕೊಂಡು ಹೊರಟು ಹೋಗಿದ್ದಾರೆ. ರಾತ್ರಿಯಾದರೂ ಕೃಷ್ಣಾರೆಡ್ಡಿಯವರು ಮನೆಗೆ ಮರಳದ ಕಾರಣ ಅವರ ಕುಟುಂಬದವರು ಪೊಲೀಸ್‌ಗೆ ದೂರು ನೀಡಿದ್ದಾರೆ. ಜ್ಯೂಬಿಲಿ ಹಿಲ್‌ ಪ್ರದೇಶ ಸಿಸಿಟೀವಿ ಪರೀಕ್ಷೆ ನಡೆಸಿದ ಪೊಲೀಸರು ಕೃಷ್ಣಾರೆಡ್ಡಿ ಅವರು ಬ್ಯಾಂಕ್‌ನಲ್ಲಿರುವುದನ್ನು ಕಂಡುಹಿಡಿದಿದ್ದಾರೆ. ಅಲ್‌ಝೈಮರ್‌ ಖಾಯಿಲೆಯಿಂದ ಬಳಲುತ್ತಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.