ವಡೋದರಾ (ಜ.23):  ಮನೆಯಲ್ಲಿ ಹೆಚ್ಚಿನ ಮೌಲ್ಯದ ಹಣವಿಟ್ಟುಕೊಂಡರೆ ಕಳ್ಳರು-ಕಾಕರ ಭೀತಿ ಇದ್ದೇ ಇರುತ್ತದೆ. ಆದರೆ ಇದೀಗ ಬ್ಯಾಂಕ್‌ನ ಸೇಫ್‌ ಲಾಕರ್‌ನಲ್ಲಿಟ್ಟರೂ ಹಣ ಸುರಕ್ಷಿತವಲ್ಲ ಎಂಬಂಥ ಅಚ್ಚರಿ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. 

ವಡೋದರಾ ಮೂಲದ ರೆಹನಾ ಕುತುಬುದ್ದೀನ್‌ ದೆಸರವಾಲ್‌ ಎಂಬುವರು ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ನ ಪ್ರತಾಪ್‌ನಗರ ಶಾಖೆಯ ಲಾಕರ್‌ನಲ್ಲಿ 2.20 ಲಕ್ಷ ರು. ಇಟ್ಟಿದ್ದರು. 

ಸಂಪತ್ತು ವೃದ್ಧಿಗಾಗಿ ಈ ವಾಸ್ತು ಸಲಹೆಗಳನ್ನು ಮರೆಯದೆ ಪಾಲಿಸಿ

ಆದರೆ ಲಾಕರ್‌ನ ಒಳ ನುಸುಳಿರುವ ಗೆದ್ದಲು ಹುಳುಗಳು ಕಂತೆ-ಕಂತೆಯಾಗಿದ್ದ 2 ಲಕ್ಷ ರು. ಹಣವನ್ನೂ ತಿಂದು ತೇಗಿವೆ. ಹೀಗಾಗಿ ತನ್ನ ಹಣವನ್ನು ಬ್ಯಾಂಕ್‌ ಮರುಪಾವತಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಜನರ ಜೇಬಿಗೆ ಹೆಚ್ಚಿನ ಹಣ, ತೆರಿಗೆ ಕಡಿತ; ಕೇಂದ್ರ ಬಜೆಟ್ 2021 ಕುರಿತು ತಜ್ಞರು ಹೇಳುವುದೇನು? ..

ಇದರಿಂದ ಅಪಾರ ನಷ್ಟ ಎದುರಾದಂತಾಗಿದ್ದು ಬ್ಯಾಂಕ್ ಲಾಕರ್‌ನಲ್ಲಿಟ್ಟರೂ ತಮ್ಮ ಹಣ ಸೇಫಾಗಿ ಇರದೇ ಇರುವುದರಿಂದ ಬೇಸರ ವ್ಯಕ್ತಪಡಿಸಿದ್ದಾರೆ.