ನವದೆಹಲಿ[ಡಿ.17]: ದಿನದ 24 ಗಂಟೆ, ವರ್ಷದ 365 ದಿನವೂ ಯಾವುದೇ ಅಡೆ ತಡೆ ಇಲ್ಲದೆಯೇ ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಅವಕಾಶ ನೀಡುವ ನೆಫ್ಟ್‌ (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫಂಡ್‌ ಟ್ರಾನ್ಸ್‌ಫರ್‌) ಸೇವೆ ಸೋಮವಾರದಿಂದ ಆರಂಭವಾಗಿದೆ.

ಇದುವರೆಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7ರವರೆಗೂ ಮಾತ್ರವೇ ನೆಫ್ಟ್‌ ಮೂಲಕ ಹಣ ವರ್ಗಾವಣೆ ಮಾಡಬಹುದಿತ್ತು. ಜೊತೆಗೆ ಭಾನುವಾರ, ರಜಾ ದಿನಗಳಂದು ಹಣ ವರ್ಗಾವಣೆ ಸಾಧ್ಯವಿರಲಿಲ್ಲ. ಇದೀಗ ಡಿಜಿಟಲ್‌ ಪಾವತಿ ಹೆಚ್ಚಿಸಲು ಸೇವೆಯನ್ನು ದಿನದ 24 ಗಂಟೆಗಳ ಕಾಲವೂ ವಿಸ್ತರಿಸಲಾಗಿದೆ.

ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯವಾಗಿ 2 ಲಕ್ಷ ರು.ವರೆಗಿನ ಹಣ ವರ್ಗಾವಣೆಗೆ ನೆಫ್ಟ್‌ ಬಳಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆರ್‌ಟಿಜಿಎಸ್‌ ವ್ಯವಸ್ಥೆ ಬಳಸಲಾಗುತ್ತದೆ.

ಹಗಲು -ರಾತ್ರಿ ವಹಿವಾಟು: NEFT ಇನ್ಮುಂದೆ ಬೊಂಬಾಟು!