ಬೆಂಗಳೂರಿನ ಕಿಂಗ್‌ಫಿಶನರ್ ಟವರ್ ಅತ್ಯಂತ ಐಷಾರಾಮಿ ಮನೆ ಹೊಂದಿದೆ. ಅತೀ ದುಬಾರಿ ಟವರ್‌ ಮೇಲೆ ವಿಜಯ್ ಮಲ್ಯ ಪೆಂಟ್‌ಹೌಸ್ ಮನೆ ಇದೆ. ವಿಶೇಷ ಅಂದರೆ ಈ ಕಿಂಗ್‌ಫಿಶರ್ ಟವರ್‌ನಲ್ಲಿ ಹಲವು ದಿಗ್ಗಜರು ಮನೆ ಖರೀದಿಸಿದ್ದಾರೆ. ಈ ದಿಗ್ಗಜರು ಯಾರು?

ಬೆಂಗಳೂರು(ಜೂ.11) ಉದ್ಯಮಿ ವಿಜಯ್ ಮಲ್ಯ ಪಾಡ್‌ಕಾಸ್ಟ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ಹಲವು ರೋಚಕ ಕತೆಗಳು ಹೊರಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಿಂಗ್‌ಫಿಶರ್ ಟವರ್ ಮೇಲಿರುವ ಪೆಂಟ್‌ಹೌಸ್ ಹಿಂದಿನ ರೋಚಕ ಕತೆಯೂ ಬಯಲಾಗಿದೆ.ಈ ಕಿಂಗ್‌ಫಿಶರ್ ಟವರ್‌ನಲ್ಲಿ ಮನೆ ಖರೀದಿಸಲು ಶ್ರಮಂತನಾಗಿದ್ದರೆ ಸಾಲದು ಆಗರ್ಭ ಶ್ರೀಮಂತನಾಗಿರಬೇಕು. ಕಾರಣ ಇಲ್ಲಿ ಒಂದು ಮನೆ ಖರೀದಸು ಕಡಿಮೆ ಎಂದರೆ 50 ಕೋಟಿ ರೂಪಾಯಿ ನೀಡಬೇಕು. ಅಧೀಕೃತ ಹೆಸರು ಕಿಂಗ್‌ಫಿಶರ್ ಟವರ್ ಎಂದಿದ್ದರೂ ಮಲ್ಯ ಟವರ್ ಎಂದೆಲ್ಲ ಹಲವು ಹೆಸರುಗಳಿವೆ. ಈ ಕಿಂಗ್‌ಫಿಶರ್ ಟವರ್‌ನಲ್ಲಿ ಹಲವು ದಿಗ್ಗಜರು ಮನೆ ಹೊಂದಿದ್ದಾರೆ.

ಕಿಂಗ್‌ಫಿಶರ್ ಟವರ್‌ನಲ್ಲಿ ಮನೆ ಹೊಂದಿರುವ ದಿಗ್ಗಜರು

ಬೆಂಗಳೂರಿನ ಹೃದಯ ಭಾಗ ಹಾಗೂ ಅತ್ಯಂತ ಪ್ರತಿಷ್ಠಿತ ವಲಯದಲ್ಲಿರುವ ಕಿಂಗ್‌ಫಿಶರ್ ಟವರ್ ಇದೆ. ಈ ಟವರ್‌ನಲ್ಲಿ ಇತ್ತೀಚೆಗೆ ಅಂದರೆ ಡಿಸೆಂಬರ್ ತಿಂಗಳು 2024ರಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಮನೆ ಖರೀದಿಸಿದ್ದಾರೆ. ನಾರಾಯಣ ಮೂರ್ತಿ 16ನೇ ಮಹಡಿಯಲ್ಲಿ ಮನೆ ಖರೀದಿಸಿದ್ದಾರೆ. 8,400 ಚದರ ಅಡಿ ವಿಸ್ತೀರ್ಣದ ಮನೆ ಇದಾಗಿದೆ. ಕಳೆದ ವರ್ಷ 50 ಕೋಟಿ ರೂಪಾಯಿ ನೀಡಿ ನಾರಾಯಣ ಮೂರ್ತಿ ಈ ಮನೆ ಖರೀದಿಸಿದ್ದಾರೆ. ಇದೇ ಟವರ್‌ನ 29ನೇ ಮಹಡಿಯಲ್ಲಿ ನಾರಾಯಣಮೂರ್ತಿ ಪತ್ನಿ, ಇನ್ಫೋಸಿಸ್ ಫೌಂಡೇಶನ್ ಚೇರ್ಮೆನ್, ಲೇಖಕಿ ಸುಧಾ ಮೂರ್ತಿ ಮನೆ ಹೊಂದಿದ್ದಾರೆ. ಇಷ್ಟೇ ಅಲ್ಲ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್, ಕಾಂಗ್ರೆಸ್ ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಸೇರಿದಂತೆ ಹಲವರು ಮನೆ ಹೊಂದಿದ್ದಾರೆ. ಯುವ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನಿಖಿಲ್ ಕಾಮತ್ ಕೂಡ ಇದೇ ಕಿಂಗ್‌ಫಿಶನ್ ಟವರ್ ಕಟ್ಟಡದಲ್ಲಿ ಮನೆ ಹೊಂದಿದ್ದಾರೆ.

ವಿಜಯ್ ಮಲ್ಯ ಪೆಂಟ್‌ಹೌಸ್ ರೋಚಕ ಸ್ಟೋರಿ

ಕಬ್ಬನ್ ಪಾರ್ಕ್, ಚಿನ್ನಸ್ವಾಮಿ ಕ್ರೀಡಾಂಗಣ ಪಕ್ಕದಲ್ಲಿರುವ ಕಿಂಗ್‌ಫಿಶರ್ ಟವರ್ 4.5 ಏಕರೆ ಪ್ರದೇಶದಲ್ಲಿದೆ.ಈ ಕಿಂಗ್‌ಫಿಶರ್ ಟವರ್ ಮೇಲಿರುವ ವಿಜಯ್ ಮಲ್ಯ ಪೆಂಟ್‌ಹೌಸ್ ಮೊದಲು ಕಳೆಗಿತ್ತು. ಮನೆ, ವಿಶಾಲವಾದ ಗಾರ್ಡನ್, ತೋಟಗಳಿಂದ ತುಂಬಿತ್ತು. ಆದರೆ ಪ್ರೆಸ್ಟೀಜ್ ಗ್ರೂಪ್ ಇಲ್ಲಿ ಟವರ್ ಕಟ್ಟಲು ಯೋಜನೆ ರೂಪಿಸಿತ್ತು. ಈ ವೇಳೆ ತನ್ನ ತಂದೆ ಇದ್ದ ಈ ಮನೆಯಲ್ಲೇ ನಾನು ಬಾಲ್ಯ ಕಳೆದಿದ್ದೇನೆ. ಈ ಮನೆಯನ್ನು ಟವರ್ ಮೇಲೆ ಇಟ್ಟರೆ ನಿಮ್ಮ ಯೋಜನೆಗೆ ನಾನು ಅನುಮತಿ ನೀಡುತ್ತೇನೆ ಎಂದಿದ್ದರು. ಇದರಂತೆ ಪ್ರಿಸ್ಟೀಜ್ ಗ್ರೂಪ್ ಕಳೆಗಿದ್ದ ಮನೆಯನ್ನು ಟವರ್ ಮೇಲಿಟ್ಟಿತ್ತು.

ಸದ್ಯ ಯುನೈಟೆಡ್ ಬ್ರಿವರಿಸಿ ಲಿಮಿಟೆಡ್ ಹಾಗೂ ಪ್ರಿಸ್ಟೀಜ್ ಗ್ರೂಪ್ ಈ ಕಿಂಗ್‌ಫಿಶರ್ ಟವರ್ ಮಾಲೀಕತ್ವ ಹೊಂದಿದೆ. ಪ್ರೇಸ್ಟೀಜ್ ಗ್ರೂಪ್ ಶೇಕಡಾ 45 ರಷ್ಟು ಪಾಲು ಹೊಂದಿದೆ. ಸದ್ಯ ಕಾನೂನು ಸಂಕಷ್ಟದಲ್ಲಿರುವ ವಿಜಯ್ ಮಲ್ಯ ಸತತವಾಗಿ ಹೋರಾಟ ಮಾಡುತ್ತಿದ್ದರೆ. ರಾಜ್ ಶಮಾನಿ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ತಮ್ಮ ಬಾಲ್ಯದಿಂದ ಹಿಡಿದು ನಷ್ಟದ ವರೆಗಿನ ಎಲ್ಲಾ ಕತೆಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರಮುಖವಾಗಿ ಭಾರತದಿಂದ ಪರಾರಿಯಾದ ಹಿಂದಿನ ಘಟನೆ, ಕಿಂಗ್‌ಫಿಶರ್ ನಷ್ಟ, ಬ್ಯಾಂಕ್ ವಂಚನೆ ಸೇರಿದಂತೆ ಹಲವು ಕಾರಣಗಳಿಂದ ವಿಜಯ್ ಮಲ್ಯ ವಿದೇಶಗಳಲ್ಲೇ ಉಳಿಯುವಂತಾಗಿದೆ. ಇದೇ ವೇಳೆ ತಾನು ಭಾರತಕ್ಕೆ ಮರಳಲು ಇಚ್ಚಿಸಿರುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.