ಇನ್ಫೋಸಿಸ್ ನಾರಾಯಣಮೂರ್ತಿ 70 ಗಂಟೆ ಕೆಲಸದ ಚರ್ಚೆ ಹುಟ್ಟುಹಾಕಿ ಕೋಲಾಹಲ ಸೃಷ್ಟಿಸಿದ್ದಾರೆ. ಇದರ ನಡುವೆ ಎರಡೇ ನಿಮಿಷದಲ್ಲಿ ನಾರಾಯಣ ಮೂರ್ತಿ 1,800 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 

ಬೆಂಗಳೂರು(ಜ.18) ದೇಶಾದ್ಯಂತ ಕಳೆದ ಹಲವು ದಿನಗಳಿಂದ 70 ಗಂಟೆ ಕೆಲಸ, 90 ಗಂಟೆ ಕೆಲಸ ಚರ್ಚೆಗಳು ನಡೆಯುತ್ತಿದೆ. ನಾರಾಯಣಮೂರ್ತಿ ಕೆಲಸದ ಕುರಿತು ನೀಡಿದ ಹೇಳಿಕೆ ಪರ ವಿರೋಧಕ್ಕೂ ಕಾರಣವಾಗಿದೆ. 70 ಗಂಟೆ ಕೆಲಸದ ಚರ್ಚೆ ನಡುವೆ ಎರಡೇ ನಿಮಿಷದಲ್ಲಿ ನಾರಾಯಣ ಮೂರ್ತಿ ಬರೋಬ್ಬರಿ 1,800 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಹೌದು, ಷೇರುಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳ ಮೇಲಿನ ಹೊಡೆತ ನಾರಾಯಣ ಮೂರ್ತಿಗೆ ತೀವ್ರ ಹಿನ್ನಡೆ ತಂದಿದೆ. ಇನ್ಫೋಸಿಸ್ ಷೇರುಗಳು ಶೇಕಡಾ 6 ರಷ್ಟು ಕುಸಿತ ಕಂಡಿರುವುದೇ ಈ ಆರ್ಥಿಕ ಹೊಡೆತಕ್ಕೆ ಕಾರಣವಾಗಿದೆ.

ಇನ್ಪೋಸಿಸ್‌ನಲ್ಲಿ ನಾರಾಯಣ ಮೂರ್ತಿ ಕುಟುಂಬ ಶೇಕಡಾ 4.02ರಷ್ಟು ಪಾಲು ಹೊಂದಿದೆ. ಇದರ ಒಟ್ಟು ಮೌಲ್ಯ 32,152 ಕೋಟಿ ರೂಪಾಯಿ. ಆದರೆ ಶುಕ್ರವಾರ ಷೇರುಮಾರುಕಟ್ಟೆ ವಹಿವಾಟು ಅಂತ್ಯದವೇಳೆ ಇನ್ಪೋಸಿಸ್ ಷೇರುಗಳು ಶೇಕಡಾ 6ರಷ್ಟು ಕುಸಿತ ಕಂಡ ಕಾರಣ ನಾರಾಯಣ ಮೂರ್ತಿ ಕುಟುಂಬದ ಒಟ್ಟು ಷೇರು ಮೌಲ್ಯ 30,300 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. 

LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್

ಇನ್ಫೋಸಿಸ್‌ನಲ್ಲಿ ನಾರಾಯಣಮೂರ್ತಿ ಶೇಕಡಾ 0.40 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಪತ್ನಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಶೇಕಡಾ 0.92ರಷ್ಟು ಷೇರುಗಳನ್ನು ಹೊಂದಿದ್ದಾರೆ. ಇನ್ನು ನಾರಾಯಣಮೂರ್ತಿ ಸುಧಾ ಮೂರ್ತಿ ಪುತ್ರ ರೋಹನ್ ಮೂರ್ತಿ ಶೇಕಡಾ 1.62 ಹಾಗೂ ಪುತ್ರಿ ಅಕ್ಷತಾ ಮೂರ್ತಿ ಶೇಕಡಾ 1.04 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಇನ್ನು ನಾರಾಯಣಮೂರ್ತಿ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿ ಶೇಕಡಾ 0.04 ರಷ್ಟು ಷೇರು ಹೊಂದಿದ್ದಾರೆ. 

ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರುವ ನಾರಾಯಣಮೂರ್ತಿ ಕಟ್ಟಿ ಬೆಳೆಸಿದ ಸಂಸ್ಥೆ ಇಂದು ವಿಶ್ವಾದ್ಯಂತ ಐಟಿ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ. ಈ ಮೂಲಕ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಆದರೆ ನಾರಾಯಣ ಮೂರ್ತಿ ಸಂದರ್ಶನದಲ್ಲಿ ವಾರಕ್ಕೆ 70 ಗಂಟೆ ಕೆಲಸದ ಕುರಿತು ಮಾತನಾಡಿದ್ದರು. ನಾರಾಯಣ ಮೂರ್ತಿ ವಾರಕ್ಕೆ 90ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದರು. ಕೆಲಸದ ಸಮಯ, ಕೆಲಸ ಮಾಡುವ ರೀತಿ ಕುರಿತು ಮಾತನಾಡುವಾಗ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡುವ ಅವಶ್ಯಕತೆ ಇದೆ ಎಂದಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 

ನಾರಾಯಣಮೂರ್ತಿ 70 ಗಂಟೆ ಕೆಲಸಕ್ಕೆ ಸೂಚಿಸಿ ಸುದೀರ್ಘ ದಿನಗಳಾಗಿದೆ. ಆದರೆ ಇತ್ತೀಚೆಗೆ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಈ ವೇಳೆ ಮತ್ತೆ ನಾರಾಯಣ ಮೂರ್ತಿಯ 70 ಗಂಟೆ ಕೆಲಸದ ಚರ್ಚೆಯೂ ಜೋರಾಗಿ ಕೇಳಿಬಂದಿತ್ತು. 

70 ಗಂಟೆ ಕೆಲಸದಿಂದ GST ಪೋರ್ಟಲ್ ಡೌನ್, ನಾರಾಯಣಮೂರ್ತಿ ರೋಸ್ಟ್ ಮಾಡಿದ ನೆಟ್ಟಿಗರು