Personal Finance :20 ರೂ. ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಿ
ಪ್ರತಿಯೊಬ್ಬ ಮನುಷ್ಯನಿಗೆ ಉಳಿತಾಯ, ಹೂಡಿಕೆ ಮುಖ್ಯ. ಆರಂಭದಲ್ಲಿ ಇದು ಹೊರೆ ಎನ್ನಿಸಿದ್ರೂ ತುರ್ತು ಸಂದರ್ಭದಲ್ಲಿ ಇದ್ರ ಮಹತ್ವ ತಿಳಿಯುತ್ತದೆ. ಮ್ಯೂಚ್ಯುವಲ್ ಫಂಡ್ ನಲ್ಲಿ ನೀವು ಕನಿಷ್ಠ ಹಣ ಉಳಿತಾಯ ಮಾಡಿಯೂ ಶ್ರೀಮಂತರಾಗ್ಬಹುದು.
ಭಾರತದಲ್ಲಿ ಈಗ್ಲೂ ಹೂಡಿಕೆಗೆ ಬಹುತೇಕರು ಎಫ್‌ಡಿಯನ್ನು ಆಯ್ಕೆ ಮಾಡಿಕೊಳ್ತಾರೆ. ಈಗಿನ ದುಬಾರಿ ಜೀವನದಲ್ಲಿ ಎಫ್ ಡಿಯಿಂದ ಹೆಚ್ಚು ರಿಟರ್ನ್ ಸಿಗೋದು ಕಷ್ಟ. ನಿಮಗೆ ಹೆಚ್ಚು ರಿಟರ್ನ್ಸ್ ಬೇಕು ಎಂದಾದ್ರೆ ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡೋದು ಬೆಸ್ಟ್ ಆಯ್ಕೆ ಎನ್ನುತ್ತಾರೆ ತಜ್ಞರು. ಕಳೆದ ಎರಡು ದಶಕಗಳಿಂದ ಮ್ಯೂಚ್ಯುವಲ್ ಫಂಡ್ ನಲ್ಲಿ ಹೂಡಿಕೆ ಮಾಡ್ತಿರುವ ಜನರು ಹೆಚ್ಚು ರಿಟರ್ನ್ಸ್ ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.
ಮ್ಯೂಚ್ಯುವಲ್ ಫಂಡ್ (Mutual Fund) ನಲ್ಲಿ ಹೆಚ್ಚಿನ ಹಣ ಸಿಗುತ್ತೆ ಎಂದಾದ್ರೂ ಜನರು ಯಾಕೆ ಮ್ಯೂಚ್ಯುವಲ್ ಫಂಡ್ ನಲ್ಲಿ ಹಣ ಹೂಡಿಕೆ (Investment) ಮಾಡೋದಿಲ್ಲ ಎನ್ನುವ ಪ್ರಶ್ನೆ ಕಾಡೋದು ಸಹಜ. ಇದಕ್ಕೆ ಒಂದೇ ಉತ್ತರವೆಂದ್ರೆ ಜನರಿಗೆ ಮ್ಯೂಚ್ಯುವಲ್ ಫಂಡ್ ಬಗ್ಗೆ ಸರಿಯಾದ ಮಾಹಿತಿ, ಜ್ಞಾನದ ಕೊರತೆ. ಕೆಲವರು ಮ್ಯೂಚ್ಯುವಲ್ ಫಂಡ್‌ನಲ್ಲಿ ಹಣ ಹೂಡಿರ್ತಾರೆ ಆದ್ರೆ ಸರಿಯಾದ ಹೂಡಿಕೆ ಅಥವಾ ಕಂಪನಿ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ತಪ್ಪು ಮಾಡ್ತಾರೆ. ಪೋರ್ಟ್ಫೋಲಿಯೊದಲ್ಲಿ ನಕಾರಾತ್ಮಕತೆ ನೋಡಿದಾಗ ಬೇಸರಗೊಳ್ತಾರೆ. ಇದೇ ಕಾರಣಕ್ಕೆ ಅನೇಕರು ಎಸ್‌ಐಪಿ ಬಂದ್ ಮಾಡ್ತಾರೆ.
ಐಷಾರಾಮಿ ಜೀವನ ಅಂದ್ರೆ ಇದಪ್ಪಾ! 60 ಸಾವಿರ ರೂ. ಮೌಲ್ಯದ ಟವಲ್ ಖರೀದಿಸಿದ ಯೂಟ್ಯೂಬರ್
ಸರಿಯಾದ ಮಾರ್ಗದಲ್ಲಿ ಮ್ಯೂಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡೋದು ಹೇಗೆ?: ಯಾವುದರಲ್ಲಿ ಅಪಾಯ ಹೆಚ್ಚಿದೆ ಎಂಬುದನ್ನು ಮೊದಲು ಪತ್ತೆ ಮಾಡಿ, ಒಳ್ಳೆಯ ನಿಧಿಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ನಂತ್ರ ನೀವು ಪ್ರತಿ ತಿಂಗಳು ನಿಯಮಿತವಾಗಿ ಎಸ್‌ಐಪಿ ಮಾಡಬಹುದಾದ ಮೊತ್ತ ನಿರ್ಧರಿಸಿ. ಫಂಡ್ ಆಯ್ಕೆಯಲ್ಲಿ ನೀವು ಮ್ಯೂಚುವಲ್ ಫಂಡ್ ಸಲಹೆಗಾರರ ಸಹಾಯ ತೆಗೆದುಕೊಳ್ಳಬಹುದು . ಹಣಕಾಸಿನ ಸಲಹೆಗಾರರು ನಿಮಗೆ ಅಪಾಯ ಮತ್ತು ಗುರಿಯ ಪ್ರಕಾರ ನಿಧಿಗಳ ಆಯ್ಕೆಯನ್ನು ನೀಡುತ್ತಾರೆ.
ಮ್ಯೂಚುವಲ್ ಫಂಡ್‌ಗಳನ್ನು ಸಲಹೆಗಾರರ ಸಹಾಯದಿಂದ ತೆಗೆದುಕೊಂಡಿದ್ದರೆ ಇನ್ನೊಂದು ಲಾಭವಿದೆ. ಅವರು ಮಾರುಕಟ್ಟೆಯನ್ನು ಪರಿಶೀಲನೆ ನಡೆಸುತ್ತಿರುತ್ತಾರೆ. ನಿಮ್ಮ ಆಯ್ಕೆ ಗುರಿ ಸಾಧಿಸುವ ದಿಕ್ಕಿನಲ್ಲಿದೆಯೇ ಇಲ್ಲವೇ ಎಂಬುದನ್ನು ಇದು ಹೇಳುತ್ತದೆ.
ಭಾರತದಲ್ಲಿ ಪಾಸ್‌ವರ್ಡ್ ಶೇರಿಂಗ್‌ಗೆ ಕೊನೆ ಹಾಡಿದ ನೆಟ್‌ಫ್ಲಿಕ್ಸ್!
ನೀವು ಸರಿಯಾದ ದಿಕ್ಕಿನಲ್ಲಿ ಸಾಗ್ತಿದ್ದರೆ ನಿಮ್ಮ ಪೋರ್ಟ್‌ಫೋಲಿಯೋ ಕೆಲವೇ ತಿಂಗಳುಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಇದ್ರಿಂದ ನಿಮಗೂ ಖುಷಿಯಾಗುತ್ತೆ. ಇದು ನಿಮ್ಮ ಬೂಸ್ಟರ್ ಆಗಿ ಕೆಲಸ ಮಾಡುತ್ತೆ. ಹೂಡಿಕೆದಾರರು ಪೋರ್ಟ್‌ಫೋಲಿಯೊದಲ್ಲಿ ಲಾಭ ನೋಡಿದ ತಕ್ಷಣ ತಮ್ಮ ಹೂಡಿಕೆಯ ಬಗ್ಗೆ ಉತ್ಸುಕರಾಗುತ್ತಾರೆ. ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಶುರು ಮಾಡ್ತಾರೆ. ಇದ್ರಿಂದ ಆರ್ಥಿಕ ಗುರಿ ಮುಟ್ಟಲು ಅವರಿಗೆ ಸಹಾಯವಾಗುತ್ತದೆ.
10 – 20 ರೂಪಾಯಿ ಉಳಿಸಿಯೂ ನೀವು ಕೋಟ್ಯಾಧಿಪತಿ ಆಗ್ಬಹುದು: ನೀವು ಒಂದೇ ಬಾರಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಬೇಕಾಗಿಲ್ಲ. ನಿಮಗೆ ಸಮಯವಿದೆ ಎಂದಾದ್ರೆ ನೀವು ತಿಂಗಳು ತಿಂಗಳು ಕಡಿಮೆ ಹಣವನ್ನು ಹೂಡಿಕೆ ಮಾಡಿಯೂ ಶ್ರೀಮಂತರಾಗಬಹುದು. ಆದ್ರೆ ಈ ಮಾತನ್ನು ಜನರು ನಂಬೋದಿಲ್ಲ. ಒಂದೇ ಬಾರಿ ಕೋಟ್ಯಾಂತರ ಹಣ ಗಳಿಸಬೇಕು ಎಂಬುದು ಅವರ ಗುರಿಯಾಗಿರುತ್ತದೆ. ಮ್ಯೂಚ್ಯುವಲ್ ಫಂಡ್ ನಲ್ಲಿ ಒಂದೇ ಬಾರಿ ಲಕ್ಷಾಂತರ ರೂಪಾಯಿ ಲಾಭ ಸಿಗದೆ ಹೋಗಬಹುದು, ಇಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ. ನೀವು ಸರಿಯಾದ ಪ್ರಮಾಣದಲ್ಲಿ ಹೂಡಿಕೆ ಮಾಡ್ತಾ ಬಂದಲ್ಲಿ ಕೆಲವೇ ವರ್ಷಗಳಲ್ಲಿ ಶ್ರೀಮಂತರಾಗಬಹುದು.
ನೀವು ಎಸ್ ಐಪಿ ಮೂಲಕ ಮ್ಯೂಚ್ಯುವಲ್ ಫಂಡ್ ನಲ್ಲಿ ಪ್ರತಿ ತಿಂಗಳು ಕಡಿಮೆ ಅಂದ್ರೆ 500 ರೂಪಾಯಿ ಹೂಡಿಕೆ ಮಾಡಬಹುದು. ಈ ಹೂಡಿಕೆ ಮೂಲಕ ನೀವು ಪ್ರತಿ ದಿನ 10 – 20 ರೂಪಾಯಿ ಉಳಿತಾಯ ಮಾಡಿದ್ರೂ ಸಾಕು. ದಿನದಲ್ಲಿ 20 ರೂಪಾಯಿ ಹೂಡಿಕೆ ಮಾಡಿ ನೀವು ಕೋಟ್ಯಾಧಿಪತಿಯಾಗೋದು ಸುಲಭ.
ದಿನಕ್ಕೆ 20 ರೂಪಾಯಿಯಂತೆ ತಿಂಗಳಿಗೆ 600 ರೂಪಾಯಿ, 40 ವರ್ಷ ಇದೇ ಹೂಡಿಕೆ ಮಾಡಿದಲ್ಲಿ ಶೇಕಡಾ 15ರ ಬಡ್ಡಿಯಂತೆ ಲೆಕ್ಕ ಹಾಕಿದ್ರೆ ನಿಮಗೆ ಕೊನೆಯಲ್ಲಿ 1 . 88 ಕೋಟಿ ರೂಪಾಯಿ ಸಿಗಲಿದೆ. ನೀವು ಈ 40 ವರ್ಷದಲ್ಲಿ ಒಟ್ಟೂ 2,88,000 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಶೇಕಡಾ 20ರಷ್ಟು ರಿಟರ್ನ್ ಸಿಕ್ಕಿದ್ರೆ 40 ವರ್ಷದಲ್ಲಿ ನಿಮ್ಮ ಕೈಗೆ 10.21 ಕೋಟಿ ಸಿಗಲಿದೆ. ಆದ್ರೆ ನಿಯಮಿತವಾಗಿ ಹೂಡಿಕೆ ಮಾಡೋದು ಇಲ್ಲಿ ಮುಖ್ಯವಾಗುತ್ತೆ.