ಇನ್‌ಸ್ಟಾಗ್ರಾಂನಲ್ಲಿ ಸಾಲಕ್ಕೆ ಅರ್ಜಿ, 61 ಸಾವಿರ ರೂ ಕಳೆದುಕೊಂಡ ಮಹಿಳೆ!
ಆನ್‌ಲೈನ್, ಆ್ಯಪ್ ಮೂಲಕ ಸಾಲ ಅಪ್ಲೈ ಮಾಡಿ ಮೋಸ ಹೋದ ಅದೆಷ್ಟು ಉದಾಹರಣೆಗಳು ಇವೆ. ಇದೀಗ ಇನ್‌ಸ್ಟಾಗ್ರಾಂ ಮೂಲಕ ಲೋನ್‌ಗೆ ಅರ್ಜಿ ಸಲ್ಲಿಸಿದ ಮಹಿಳೆ 61,000 ರೂಪಾಯಿ ಕಳೆದುಕೊಂಡಿದ್ದಾರೆ.
ಮುಂಬೈ(ಫೆ.24): ಸಾಲಕ್ಕೆ ಅರ್ಜಿ ಹಾಕುವಾಗ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ಲೋನ್ ಆ್ಯಪ್ ದಂಧೆ ಭಾರತದಲ್ಲಿ ಭಾರಿ ಹಂಗಾಮ ಸೃಷ್ಟಿಸಿದೆ. ಚೀನಾ ಲೋನ್ ಆ್ಯಪ್ ದಂಧೆಯಿಂದ ಬಸವಳಿದಿರುವ ಜನರನ್ನು ಮೋಸ ಮಾಡಲು ಖದೀಮರು ಹೊಸ ವಿಧಾನ ಕಂಡುಕೊಂಡಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ ಮೂಲಕ ಸಾಲ ನೀಡುವ ಆಮಿಷ ತೋರಿಸಿ ಹಣ ದೋಚುತ್ತಿದ್ದಾರೆ. ಇದೇ ಇನ್‌ಸ್ಟಾಗ್ರಾಂ ಮೂಲಕ ಸಾಲಕ್ಕೆ ಅರ್ಜಿ ಹಾಕಿದ ಮುಂಬೈ ಮಹಿಳೆ 61,000 ರೂಪಾಯಿ ಕಳೆದುಕೊಂಡಿದ್ದಾರೆ.
ವರ್ಲಿ ನಿವಾಸಿ ರುತಾಲಿ ಕೊಲ್ಗೆ ತಮ್ಮ ವ್ಯವಾಹರ ವಿಸ್ತರಿಸಲು ಸಾಲಕ್ಕಾಗಿ ಹುಡುಕಾಡುತ್ತಿದ್ದರು. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ವಿವಿದ ಬ್ಯಾಂಕ್ ಸರ್ಚ್ ಮಾಡಿದ್ದಾರೆ. ಈ ವೇಳೆ ಇನ್‌ಸ್ಟಾಗ್ರಾಂ ಮೂಲಕ ಕಡಿಮೆ ಬಡ್ಡಿದರಲ್ಲಿ ಲೋನ್‌ಗಾಗಿ ಅಪ್ಲೈ ಮಾಡಿ ಅನ್ನೋ ಜಾಹೀರಾತು ನೋಡಿದ್ದಾರೆ. ಹೀಗಾಗಿ ವಿಚಾರಿಸಿ ಎಲ್ಲವೂ ಅಗತ್ಯಕ್ಕೆ ತಕ್ಕಂತೆ ಇದ್ದರೆ ಸಾಲ ಪಡೆಯಲು ಮುಂಜಾಗಿದ್ದಾರೆ. ಕ್ಲಿಕ್ ಮಾಡಿದಾಗ ಹೆಸರು, ಫೋನ್ ನಂಬರ್, ಆಧಾರ್ ಕಾರ್ಡ್ ನಂಬರ್ ಸೇರಿದಂತೆ ಕೆಲ ದಾಖಲೆಗಳನ್ನು ನಮೂದಿಸಿದ್ದಾರೆ.
Hubballi Crime: ಆನ್‌ಲೈನ್ ಆ್ಯಪ್‌ನಿಂದ ಸಾಲ ಡೇಂಜರ್: ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್..!
ಮರುದಿನ ರುತಾಲಿ ಕೊಲ್ಗೆ ಪಂಕಜ್ ಸಿಂಗ್ ಬಧೂರಿಯಾ ಹೆಸರಿನಲ್ಲಿ ಕರೆಯೊಂದು ಬಂದಿದೆ. ತಾನು ಫಿನಾನ್ಸ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಬಳಿಕ ವ್ಯಾಟ್ಸ್ಆ್ಯಪ್‌ಗೆ ತನ್ನ ಐಡಿ ಕಾರ್ಡ್ ಕಳುಹಿಸಿರುವುದಾಗಿ ಹೇಳಿದ್ದಾನೆ. ಬಳಿಕ ಲೋನ್ ಹಾಗೂ ಷರತ್ತುಗಳ ಕುರಿತು ವಿವರಿಸಿದ್ದಾನೆ. ರುತಾಲಿ 5 ಲಕ್ಷ ರೂಪಾಯಿ ಲೋನ್‌ಗೆ ಅಪ್ಲೈ ಮಾಡಿದ್ದರು. ಆದರೆ ಪಂಕಜ್ ಸಿಂಗ್ ಭದೂರಿಯಾ 10 ಲಕ್ಷ ರೂಪಾಯಿ ಸಾಲ ಪಡೆಯಲು ಸೂಚಿಸಿದ್ದಾರೆ. ಇದರಂತೆ 10 ಲಕ್ಷ ರೂಪಾಯಿಗೆ ರುತಾಲಿ ಮನವಿ ಮಾಡಿದ್ದಾಳೆ.
ಇದಾದದ ಬಳಿಕ ರುತಾಲಿಯ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇತರ ಮಾಹಿತಿಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಕಳುಹಿಸಲು ಸೂಚಿಸಿದ್ದಾನೆ. ದಾಖಲೆಗಳನ್ನು ಕಳುಹಿಸಿದ ಬಳಿಕ ನಿಮ್ಮ ಸಾಲಕ್ಕೆ ಅನುಮತಿ ಸಿಕ್ಕಿದೆ. ಎಂದು ಅಪ್ರೂವಲ್ ಲೆಟರ್ ಕಳುಹಿಸಿದ್ದಾನೆ. ಬಳಿಕ ಸಾಲ ಪ್ರಕ್ರಿಯೆ ಮೊತ್ತ ಕಟ್ಟಲು ಕ್ಯೂಆರ್ ಕಳುಹಿಸಿದ್ದಾನೆ. ಈ ಕ್ಯೂರ್ ಆರ್ ಕೋಡ್‌ಗೆ ಪ್ರೊಸೆಸಿಂಗ್ ಫೀ ಕಳುಹಿಸಿದ್ದಾರೆ. ಆದರೆ ಈ ಮೊತ್ತ ಬಂದಿಲ್ಲ, ಮತ್ತೆ ಕಳುಹಿಸಲು ಸೂಚಿಸಿದ್ದಾನೆ. ಇಷ್ಟೇ ಅಲ್ಲ ಮೊದಲು ಕಳುಹಿಸಿದ ಮೊತ್ತ ಬಂದರೆ ಅದನ್ನು ಹಿಂತಿರುಗುವುದಾಗಿ ಭರವಸೆ ನೀಡಿದ್ದಾನೆ.
Loan Fraud: 100 ಕೋಟಿ ಸಾಲದಾಸೆ ತೋರಿಸಿ 1.8 ಕೋಟಿ ಧೋಖಾ: ಕಂಗಾಲಾದ ಉದ್ಯಮಿ..!
ಕೆಲ ಹೊತ್ತಿನ ಬಳಿಕ NEFT ಹಾಗೂ RTGS ಹೆಸರಿನಲ್ಲಿ ಮಹಿಳೆಯನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ. ಜಿಎಸ್‌ಟಿ ಹಾಗೂ ಟಿಡಿಎಸ್ ಕಟ್ಟುವಂತೆ ಸೂಚಿಸಿದ್ದಾರೆ. ಪ್ರೊಸೆಸಿಂಗ್ ಫೀ ಹೆಸರಲ್ಲಿ ಪದೇ ಪದೇ ಕರೆ ಬಂದಾಗ ಮಹಿಳೆಗೆ ಅನುಮಾನಗೊಂಡಿದ್ದಾರೆ. ಹೀಗಾಗಿ ಕಚೇರಿಗೆ ಆಗಮಿಸುವುದಾಗಿ ಹೇಳಿ ವಿಳಾಸ ಪಡೆದುಕೊಂಡಿದ್ದಾರೆ. ಬಳಿಕ ಸಹೋದರ ಜೊತೆ ವಿಳಾಸಕ್ಕೆ ತೆರಳಿದಾಗ ಅಲ್ಲಿ ಯಾವುದೇ ಫಿನಾನ್ಸ್ ಕಂಪನಿಯೇ ಇರಲಿಲ್ಲ. ಈ ವೇಳೆ ತಾವು ಮೋಸ ಹೋಗಿರುವುದಾಗಿ ಖಚಿತಗೊಂಡಿದೆ. ಹೀಗಾಗಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.