Asianet Suvarna News Asianet Suvarna News

ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್, ಬಯಲಾಯ್ತು ಅಡ್ರೆಸ್ ಕೇಳಿದ ರಹಸ್ಯ!

* ಅಂಬಾನಿ ಮನೆ ಬಳಿ ಮತ್ತೆ ಶಂಕಿತರ ಓಡಾಟ

* ಆ್ಯಂಟೀಲಿಯಾ ನಿವಾಸದ ಬಳಿ ಮತ್ತೆ ಹೈಅಲರ್ಟ್‌

* ಅಡ್ರೆಸ್‌ ಕೇಳಿದಾತ ಅರೆಸ್ಟ್

Mumbai Police tightens security outside Mukesh Ambani house Antilia pod
Author
Bangalore, First Published Nov 9, 2021, 12:41 PM IST
  • Facebook
  • Twitter
  • Whatsapp

ಮುಂಬೈ(ನ.09): ಭಾರತದ ನಂ.1 ಶ್ರೀಮಂತ ಮುಖೇಶ್‌ ಅಂಬಾನಿ (Mukesh Ambani) ಅವರ ಮನೆ ವಿಳಾಸವನ್ನು ಇಬ್ಬರು ಅನಾಮಿಕ ವ್ಯಕ್ತಿಗಳು ಕೇಳಿದರು ಎಂಬ ಸುದ್ದಿ ಭಾರೀ ಸದ್ದು ಮಾಡಿದ್ದು, ಆ್ಯಂಟೀಲಿಯಾ ನಿವಾಸದ ಬಳಿ ಮತ್ತೆ ಹೈಅಲರ್ಟ್‌ (High Alert) ಘೋಷಿಸಿ, ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ವಿಳಾಸ (Address) ಕೇಳಿದ ಇಬ್ಬರು ಶಂಕಿತರ ಪೈಕಿ ಒಬ್ಬನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಈ ಯುವಕನ ವಿಚಾರಣೆ ನಡೆಸುತ್ತಿದ್ದಾರೆ. ಅವರು ಆಂಟಿಲಿಯಾವನ್ನು ಮಾತ್ರ ನೋಡಲು ಬಯಸಿದ್ದರು ಎಂದು ಹೇಳಿದ್ದಾರೆ.

ಅಂಟಿಲಿಯಾ ವಿಳಾಸ ಕೇಳಿದ್ದಕ್ಕೆ ಆತಂಕ

ವಾಸ್ತವವಾಗಿ, ಸೋಮವಾರ, ಮುಂಬೈನ ಟ್ಯಾಕ್ಸಿ ಚಾಲಕನೊಬ್ಬ ಇಬ್ಬರು ಯುವಕರು ಆಂಟಿಲಿಯಾ (Antilia) ವಿಳಾಸವನ್ನು ಕೇಳುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ನೀಡಿದ್ದ. ಅನುಮಾನಾಸ್ಪದವಾಗಿ ಕಾಣುತ್ತಿ ಅವರ ಬಳಿ ಕಪ್ಪು ಚೀಲವೊಂದಿದ್ದು, ಒಬ್ಬ ಗಡ್ಡಧಾರಿಯಾಗಿದ್ದ. ಇನ್ನು ಶಂಕಿತರು ಉರ್ದುವಿನಲ್ಲಿ ಮಾತನಾಡುತ್ತಿದ್ದರು. ಇದಾದ ನಂತರ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಮನೆಯ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮಾಹಿತಿ ನೀಡಿದ ಚಾಲಕನನ್ನು ಕೂಡಲೇ ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆ ಬಳಿಕ ಪ್ರಕರಣದ ತನಿಖೆ ಆರಂಭ ಮಾಡಲಾಗಿದೆ. 

ಟ್ಯಾಕ್ಸಿ ಚಾಲಕ ನೀಡಿದ ಮಾಹಿತಿ ಆಧರಿಸಿ ನಿರ್ದಿಷ್ಟಬಣ್ಣವೊಂದರ ಕಾರಿನ ಬೆನ್ನು ಹತ್ತಿದ್ದಾರೆ. ಜೊತೆಗೆ ಮುಕೇಶ್‌ ಅಂಬಾನಿ ಮನೆಯ ಸುತ್ತಲಿನ ಸಿಸಿ ಟೀವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಹಾಗೂ ಒಬ್ಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಟಿಲಿಯಾ ವಿಳಾಸ ಕೇಳಿದವರು ಯಾರು?

ನವಿ ಮುಂಬೈ ಪೊಲೀಸರು ಬಂಧಿಸಿರುವ ವ್ಯಕ್ತಿ ಮೂಲತಃ ಗುಜರಾತ್‌ನವರಾಗಿದ್ದು, ವೃತ್ತಿಯಲ್ಲಿ ಗುಜರಾತ್‌ನಲ್ಲಿ ಟ್ಯಾಕ್ಸಿ ಡ್ರೈವರ್  ಆಗಿದ್ದಾರೆ. ಪ್ರವಾಸಿ ಕಾರನ್ನು ಓಡಿಸುತ್ತಾರೆ. ಪೊಲೀಸರ ತನಿಖೆಯಲ್ಲಿ ಆತನಿಂದ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಪೋಲೀಸರ ಪ್ರಕಾರ, ವಿಳಾಸ ಕೇಳಿದ ವಾಹನ ವ್ಯಾಗನಾರ್ ಕಾರಾಗಿತ್ತು. ಸದ್ಯ ಪೊಲೀಸರಿಗೆ ಸಿಕ್ಕಿದ್ದು ಪ್ರವಾಸಿ ವಾಹನ. ಬಂಧಿತ ವ್ಯಕ್ತಿ ಆಂಟಿಲಿಯಾವನ್ನು ನೋಡುವುದು ಮಾತ್ರ ಅವರ ಉದ್ದೇಶವಾಗಿತ್ತೆಂದು ಹೇಳಿದ್ದಾರೆ. ಅಲ್ಲದೇ ಅಂಬಾನಿ ನಿವಾಸಕ್ಕೆ ಹಾನಿಯುಂಟು ಮಾಡಲು ಬಂದಿರಲಿಲ್ಲ ಎಂದಿದ್ದಾನೆ.

ಇದಕ್ಕೂ ಮೊದಲು ಆಂಟಿಲಿಯಾಗೆ ಅಪಾಯ

ಆಂಟಿಲಿಯಾ ಭದ್ರತೆಗೆ ಬೆದರಿಕೆಯ ಪ್ರಕರಣಗಳು ಈ ಹಿಂದೆ ನಿರಂತರವಾಗಿ ಬರುತ್ತಿವೆ. ಫೆಬ್ರವರಿಯಲ್ಲಿ ಮುಕೇಶ್ ಅಂಬಾನಿ ಅವರ ಮನೆಯ ಹೊರಗೆ ಸ್ಫೋಟಕಗಳನ್ನು ತುಂಬಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಹಾಗೂ ಪತ್ರವೊಂದು ಪತ್ತೆಯಾಗಿತ್ತು. ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಸಚಿನ್ ವಾಜೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಆಂಟಿಲಿಯಾ ದೇಶದ ಅತ್ಯಂತ ದುಬಾರಿ ಮತ್ತು ದೊಡ್ಡ ಮನೆ

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ವಾಸಿಸುವ ಮನೆಯ ಹೆಸರು ಆಂಟಿಲಿಯಾ . ಇದು 27 ಮಹಡಿಗಳನ್ನು ಹೊಂದಿದೆ ಮತ್ತು 400,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. 2012ರಿಂದ ಈ ಬಂಗಲೆಯಲ್ಲಿ ಅಂಬಾನಿ ಕುಟುಂಬ ವಾಸವಾಗಿದೆ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶವಾದ ಕಂಬಾಲಾ ಹಿಲ್ ಪ್ರದೇಶದಲ್ಲಿ ನಿರ್ಮಿಸಲಾದ ಆಂಟಿಲಿಯಾದಲ್ಲಿ ಬಾಲಿವುಡ್ ಪಾರ್ಟಿಗಳು ಪ್ರತಿದಿನ ನಡೆಯುತ್ತವೆ. ಇದು ಯಾವುದೇ ಪಂಚತಾರಾ ಹೋಟೆಲ್‌ಗಿಂತ ಕಡಿಮೆಯಿಲ್ಲದಂತಹ ಸೌಲಭ್ಯಗಳನ್ನು ಹೊಂದಿದೆ. ಛಾವಣಿಯ ಮೇಲೆಯೇ ಹೆಲಿಪ್ಯಾಡ್ ಇದೆ.

 ಬ್ರಿಟನ್‌ಗೆ ಅಂಬಾನಿ ಸ್ಥಳಾಂತರ ಸುದ್ದಿ ಸುಳ್ಳು: ರಿಲಯನ್ಸ್‌

 

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮುಖ್ಯಸ್ಥ ಮುಖೇಶ ಅಂಬಾನಿ ಅವರು ಬ್ರಿಟನ್‌ನಲ್ಲಿ ಸ್ಟೋಕ್‌ ಪಾರ್ಕ್ ಎಸ್ಟೇಟ್‌ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಹೀಗಾಗಿ ಅಂಬಾನಿ ಅವರು ಕುಟುಂಬ ಸಮೇತ ಲಂಡನ್‌ ತೆರಳುವ ಸಾಧ್ಯತೆಗಳಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ರಿಲಯನ್ಸ್‌ ಕಂಪನಿ ಈ ವರದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದೆ.

‘ಅಂಬಾನಿ ಹಾಗೂ ಅವರ ಕುಟುಂಬವು ಲಂಡನ್‌ ಅಥವಾ ಪ್ರಪಂಚದ ಬೇರೆ ಯಾವ ಸ್ಥಳದಲ್ಲಿಯೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ. ಖರೀದಿಸಿದ ಜಾಗವನ್ನು ಗಾಲ್ಫಿಂಗ್‌ ಹಾಗೂ ಕ್ರೀಡಾ ರೆಸಾರ್ಟ್‌ ಆಗಿ ಮಾರ್ಪಡಿಸುವ ಗುರಿಯನ್ನು ಹೊಂದಿದೆ’ ಎಂದು ರಿಲಯನ್ಸ್‌ ಸ್ಪಷ್ಟಪಡಿಸಿದೆ.

‘ಈಗ ಮುಂಬೈನಲ್ಲಿರುವ ಅಂಬಾನಿ ಕುಟುಂಬವು ಬಂಕಿಂಗ್‌ಹ್ಯಾಮ್‌ಶೈರ್‌, ಸ್ಟೋಕ್‌ ಪಾರ್ಕಿನಲ್ಲಿರುವ ಜಾಗ ಖರೀದಿಸಿದೆ. ಅದನ್ನು ತಮ್ಮ ಪ್ರಾಥಮಿಕ ನಿವಾಸವಾಗಿ ಮಾಡಿಕೊಳ್ಳುವ ನಿರೀಕ್ಷೆಯಿದೆ’ ಎಂದು ಹಲವಾರು ವರದಿಗಳು ಪ್ರಕಟವಾಗಿದ್ದವು.

Follow Us:
Download App:
  • android
  • ios