ಹೆಸರಿನ ಗೊಂದಲ: ಅಮೆರಿಕದ ಎಸ್‌ವಿಬಿ ಬ್ಯಾಂಕ್ ಪತನದಿಂದ ಮುಂಬೈ ಎಸ್‌ವಿಸಿ ಗ್ರಾಹಕರಿಗೆ ಆತಂಕ..!
ಪತನಗೊಂಡಿರುವುದು ಅಮೆರಿಕದ ಬ್ಯಾಂಕ್. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸಹಕಾರಿ ಬ್ಯಾಂಕ್ ಯಾವುದೇ ತೊಂದರೆಗೆ ಸಿಕ್ಕಿಬಿದ್ದಿಲ್ಲ ಎಂದು ಎಸ್‌ವಿಸಿ ಬ್ಯಾಂಕ್ ಮಾಹಿತಿ ನೀಡಿದೆ.
ಮುಂಬೈ (ಮಾರ್ಚ್ 13, 2023): ಕ್ಯಾಲಿಫೋರ್ನಿಯಾದ ಎಸ್‌ವಿಬಿ ಬ್ಯಾಂಕ್ ಪತನಗೊಂಡ ಸುದ್ದಿ ಎಲ್ಲೆಡೆ ಹಬ್ಬಿದ ಬೆನ್ನಲ್ಲೇ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಸ್‌ವಿಬಿ ಸಹಕಾರಿ ಬ್ಯಾಂಕ್‌ನ ಗ್ರಾಹಕರು ಆತಂಕಗೊಂಡ ಘಟನೆ ನಡೆದಿದೆ. ಎಸ್‌ವಿಬಿ ಪತನಗೊಂಡಿದೆ ಎಂಬ ಸುದ್ದಿ ಹಬ್ಬುತ್ತಲೇ ಇದು ಮುಂಬೈನ ಶ್ಯಾಮ್‌ರಾವ್ ವಿಠ್ಠಲ್‌ರಾವ್ ಬ್ಯಾಂಕ್ ಇರಬಹುದು ಎಂದು ನೂರಾರು ಗ್ರಾಹಕರು ಬ್ಯಾಂಕ್‌ನ ಹಲವು ಶಾಖೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸ್ಪಷ್ಟನೆ ನೀಡಿರುವ ಮುಂಬೈ (Mumbai) ಮೂಲದ 116 ವರ್ಷ ಹಳೆಯ ಎಸ್‌ವಿಸಿ ಬ್ಯಾಂಕ್‌ನ (SVC Bank) ಆಡಳಿತ ಮಂಡಳಿ, ಪತನಗೊಂಡಿರುವುದು ಅಮೆರಿಕದ (United States) ಬ್ಯಾಂಕ್. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸಹಕಾರಿ ಬ್ಯಾಂಕ್ (Co operative Bank) ಯಾವುದೇ ತೊಂದರೆಗೆ ಸಿಕ್ಕಿಬಿದ್ದಿಲ್ಲ ಎಂದು ಮಾಹಿತಿ ನೀಡಿದೆ.
ಇದನ್ನು ಓದಿ: ಅಮೆರಿಕದ ಬ್ಯಾಂಕ್ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ
‘’ಕ್ಯಾಲಿಫೋನಿರ್ಯಾ (California) ಮೂಲದ ಎಸ್‌ವಿಬಿ ಬ್ಯಾಂಕ್‌ಗೂ (SVB Bank), 116 ವರ್ಷ ಹಳೆಯ ಎಸ್‌ವಿಸಿ ಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ. ಬ್ರ್ಯಾಂಡ್ ಹೆಸರಿನಲ್ಲಿ ಸ್ವಲ್ಪ ಹೋಲಿಕೆ ಇದೆಯೆಂದು ಈ ರೀತಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ಬಗ್ಗೆ ಬ್ಯಾಂಕ್ ಸದಸ್ಯರು, ಗ್ರಾಹಕರು ಹಾಗೂ ಷೇರುದಾರರು ಈ ಸುಳ್ಳು ಸುದ್ದಿಯನ್ನು ನಂಬಬೇಡಿ. ನಮ್ಮ ಬ್ರ್ಯಾಂಡ್ ಹೆಸರು ಹಾಳು ಮಾಡುವವರ ವಿರುದ್ಧ ಎಸ್‌ವಿಸಿ ಬ್ಯಾಂಕ್‌ಗೆ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕಿದೆ’’ ಎಂದು ಎಸ್‌ವಿಸಿ ಬ್ಯಾಂಕ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.
ಇನ್ನು, ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ZyppElectric ಸಿಇಒ ಆಕಾಶ್ ಗುಪ್ತಾ, ‘’ಮುಂದೆ ಈ ವಿಚಾರದ ಬಗ್ಗೆ ಎಸ್‌ಎಲ್‌ಬಿ (ಸಂಜಯ್ ಲೀಲಾ ಬನ್ಸಾಲಿ) ಹೇಳಿಕೆಯನ್ನು ನೀಡಬಹುದು. ಭಾರತ ಅದ್ಭುತವಾಗಿದೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, "ನಮ್ಮ ಸಹ ಭಾರತೀಯರು ಮತ್ತು ವಾಟ್ಸ್‌ಆಪ್ ವಿಶ್ವವಿದ್ಯಾಲಯದ ಸ್ಥಿತಿ. SVC ವಾಸ್ತವವಾಗಿ ಈ ಪ್ರಮುಖ ಸ್ಪಷ್ಟೀಕರಣವನ್ನು ನೀಡಿರುವುದು ಅದ್ಭುತವಾಗಿದೆ, ನಿಮಗೆ ಕುದೋಸ್!" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಸ್ಟಾರ್ಟಪ್ ಸ್ಪೆಷಲಿಸ್ಟ್ ಸಿಲಿಕಾನ್ ವ್ಯಾಲಿ ಬ್ಯಾಂಕೇ ಬಂದ್: ಬಾಂಡಲ್ಲಿ ಹೂಡಿಕೆಯಿಂದ ಭಾರಿ ನಷ್ಟ
1906 ರಲ್ಲಿ ಸ್ಥಾಪನೆಯಾದ SVC, ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು ಬಂದ್ ಮಾಡಿರುವ ಅಮೆರಿಕ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಸಾಹಸೋದ್ಯಮ-ಕ್ಯಾಪಿಟಲ್ ಫೈನಾನ್ಸಿಂಗ್‌ನಲ್ಲಿ ಪರಿಣತಿ ಹೊಂದಿರುವ ಎಸ್‌ವಿಬಿಯ ಕುಸಿತವು ಜಾಗತಿಕ ಮಾರುಕಟ್ಟೆಗಳಲ್ಲಿ ಆಘಾತ ಉಂಟುಮಾಡಿದೆ. ಬ್ಯಾಂಕ್‌ನ ಗ್ರಾಹಕರ ಠೇವಣಿಗಳಲ್ಲಿ ಸುಮಾರು 175 ಬಿಲಿಯನ್ ಡಾಲರ್ ಈಗ ಫೆಡರಲ್ ಠೇವಣಿ ವಿಮಾ ನಿಗಮ ಅಥವಾ FDIC ನಿಯಂತ್ರಣದಲ್ಲಿದ್ದು, ಸೋಮವಾರ ಬೆಳಿಗ್ಗೆ ಬ್ಯಾಂಕ್‌ನ ಎಲ್ಲಾ ಶಾಖೆಗಳು ತೆರೆದ ನಂತರ ಠೇವಣಿದಾರರಿಗೆ ಅವರ ವಿಮೆ ಮಾಡಿದ ಠೇವಣಿಗಳಿಗೆ ಸಂಪೂರ್ಣ ಪ್ರವೇಶವನ್ನು ಭರವಸೆ ನೀಡಿದೆ.
ಗ್ರಾಹಕರ ಹಿಂಪಡೆಯುವಿಕೆಯಿಂದ ಎಸ್‌ವಿಬಿಯ ಸಮಸ್ಯೆಗಳು ಹುಟ್ಟಿಕೊಂಡಿದ್ದು, ಇದು ಫೆಡರಲ್ ರಿಸರ್ವ್‌ನ ಬಡ್ಡಿದರ ಹೆಚ್ಚಳದಿಂದಾಗಿ ಮೌಲ್ಯಗಳು ಕುಸಿದಿರುವ ಸೆಕ್ಯುರಿಟೀಸ್ ಸ್ಥಾನಗಳನ್ನು ದಿವಾಳಿಯಾಗುವಂತೆ ಮಾಡಿತು. ಬಡ್ಡಿದರಗಳ ತ್ವರಿತ ಜಂಪ್ ಎಂದರೆ ಅವರು ಖರೀದಿಸಿದ ಸೆಕ್ಯೂರಿಟಿಗಳು ಗಮನಾರ್ಹವಾಗಿ ಕಡಿಮೆ ಮಾರಾಟವಾಗುತ್ತಿವೆ.