ಡಿಸ್ನಿಇಂಡಿಯಾ ಬಳಿಕ ಈಗ ಮತ್ತೊಂದು ಬೃಹತ್ ಮಾಧ್ಯಮ ಸಂಸ್ಥೆ ಖರೀದಿಸ್ತಾರಾ ಮುಖೇಶ್ ಅಂಬಾನಿ?

ರಿಲಯನ್ಸ್  ಇಂಡಸ್ಟ್ರೀಸ್ ಇತ್ತೀಚೆಗಷ್ಟೇ  ಡಿಸ್ನಿ ಇಂಡಿಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿತ್ತು. ಈಗ ಬ್ಲೂಮ್ ಬರ್ಗ್ ವರದಿ ಪ್ರಕಾರ ಅಂಬಾನಿ ಇನ್ನೊಂದು ಬೃಹತ್ ಮಾಧ್ಯಮ ಸಂಸ್ಥೆ ಪ್ಯಾರಮೌಂಟ್ ಗ್ಲೋಬಲ್ ಜೊತೆಗೆ ಒಪ್ಪಂದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 
 

Mukesh Ambanis Rs 2035000 crore company may spend huge in another media deal anu

ನವದೆಹಲಿ (ಮಾ.7):  ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಸದ್ಯ ಭಾರತದ ಅತೀ ಶ್ರೀಮಂತ ಉದ್ಯಮಿ. ಇವರ ನಿವ್ವಳ ಸಂಪತ್ತು 9,75,819 ಕೋಟಿ ರೂ. ಇತ್ತೀಚೆಗೆ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸುವ ಮೂಲಕ ಮುಖೇಶ್ ಸುದ್ದಿಯಲ್ಲಿದ್ದಾರೆ. ಅಂಬಾನಿ ಕುಟುಂಬ ವೈಭವಯುತ ಜೀವನಶೈಲಿ, ಪಾರ್ಟಿ ಮುಂತಾದ ಕಾರ್ಯಕ್ರಮಗಳ ಮಾತ್ರ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮುಖೇಶ್ ಅಂಬಾನಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುವ ಮೂಲಕ ಕೂಡ ಸುದ್ದಿಯಾಗುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಅಂಬಾನಿ ಎಲ್ಲ ಕ್ಷೇತ್ರಗಳಲ್ಲೂ ಹೂಡಿಕೆ ಮಾಡುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ದೇಶೀಯ ಹಾಗೂ ವಿದೇಶಿ ಬ್ರ್ಯಾಂಡ್ ಗಳನ್ನು ಕೂಡ ಖರೀದಿಸಿದ್ದಾರೆ. ಇತ್ತೀಚೆಗೆ ಡಿಸ್ನಿ ಇಂಡಿಯಾದ ಜೊತೆಗೆ 7,0000 ಕೋಟಿ ರೂ. ಮೊತ್ತದ ಉದ್ಯಮಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಮಾಧ್ಯಮ ಕ್ಷೇತ್ರದತ್ತ ರಿಲಯನ್ಸ್ ಈಗ ವಿಶೇಷ ಗಮನ ಕೇಂದ್ರೀಕರಿಸಿದೆ ಎಂದು ಹೇಳಲಾಗುತ್ತಿದೆ. ಪ್ಯಾರಮೌಂಟ್ ಗ್ಲೋಬಲ್ ಸಂಸ್ಥೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಶೀಘ್ರದಲ್ಲೇ ಖರೀದಿಸಲಿದೆ ಎಂದು ಬ್ಲೂಮ್ ಬರ್ಗ್ ವರದಿಯೊಂದು ತಿಳಿಸಿದೆ. 

ಪ್ಯಾರಮೌಂಟ್ ಗ್ಲೋಬಲ್ ಬೃಹತ್ ಮಾಧ್ಯಮ ಸಮೂಹ ಸಂಸ್ಥೆಯಾಗಿದೆ. ಎಂಟಿವಿ, ನಿಕೆಲೋಡಿಯನ್ , ಕಾಮಿಡಿ ಸೆಂಟ್ರಲ್ ಸೇರಿದಂತೆ ಅನೇಕ ಜನಪ್ರಿಯ ಚಾನೆಲ್ ಗಳು ಈ ಸಂಸ್ಥೆ ಒಡೆತನದಲ್ಲಿವೆ. ವಾಯಾಕಾಮ್ 18 ಮೀಡಿಯಾ ಪ್ರೈವೇಟ್ ನಲ್ಲಿರುವ (Viacom18 Media Pvt) ಪ್ಯಾರಮೌಂಟ್ ಗ್ಲೋಬಲ್ ಷೇರುಗಳನ್ನು ಖರೀದಿಸುವ ಸಂಬಂಧ ರಿಲಯನ್ಸ್ ಮಾತುಕತೆ ನಡೆಸುತ್ತಿದೆ. ಮುಖೇಶ್ ಅಂಬಾನಿ ಅವರ ರಿಲಯನ್ಸ್  ಗೆ ವಾಯಕಾಮ್ 18 ಷೇರುಗಳನ್ನು ಮಾರಾಟ ಮಾಡೋದ್ರಿಂದ 4,555 ಕೋಟಿ ರೂ. ಗಳಿಸಬಹುದು, ಅದನ್ನು ಸಾಲ ತಗ್ಗಿಸಿಕೊಳ್ಳಲು ಬಳಸಬಹುದು ಎಂಬುದು ಪ್ಯಾರಮೌಂಟ್ ಯೋಚನೆಯಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಭಾರತದಲ್ಲಿನ ತಮ್ಮ ಮಾಧ್ಯಮ ಸಂಸ್ಥೆಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಇತ್ತೀಚೆಗೆ ರಿಲಯನ್ಸ್ ಹಾಗೂ ಡಿಸ್ನಿ ಸಹಿ ಹಾಕಿದ ಬಳಿಕ ವಾಯಾಕಾಮ್ 18 ನಲ್ಲಿ ಪ್ಯಾರಮೌಂಟ್ ಷೇರುಗಳು ಕುಸಿತ ಕಂಡಿವೆ.

ಡಿಸ್ನಿ ಜೊತೆ 70,352 ಕೋಟಿಯ ಜಂಟಿ ಉದ್ಯಮ ಘೋಷಿಸಿದ ರಿಲಯನ್ಸ್‌!

ರಿಯಲನ್ಸ್‌ ಇಂಡಸ್ಟ್ರೀಸ್‌ ಹಾಗೂ ವಾಲ್ಟ್‌ ಡಿಸ್ನಿ ಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾದ ವ್ಯವಹಾರಗಳನ್ನು ಸಂಯೋಜಿಸುವ ಜಂಟಿ ಉದ್ಯಮವನ್ನು ರೂಪಿಸಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಕಳೆದ ವಾರ ಘೋಷಣೆ ಮಾಡಿವೆ. ಆರ್‌ಐಎಲ್ ತನ್ನ ಬೆಳವಣಿಗೆಗಾಗಿ ಜಂಟಿ ಉದ್ಯಮದಲ್ಲಿ 11,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಈ ವಹಿವಾಟಿನ ಭಾಗವಾಗಿ, ವಯಾಕಾಮ್‌ 18ನ ಮಾಧ್ಯಮ ಉದ್ಯಮವನ್ನು ನ್ಯಾಯಾಲಯದ ಅನುಮೋದಿತ ವ್ಯವಸ್ಥೆಯ ಮೂಲಕ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ವಿಲೀನಗೊಳಿಸಲಾಗುತ್ತದೆ. ಎರಡೂ ಕಂಪನಿಗಳ ನಡುವಿನ ಸಹಕಾರ ವಿಚಾರವನ್ನು ಹೊರತಡುಪಡಿಸಿ, ಜಂಟಿ ಉದ್ಯಮದ ಮೌಲ್ಯವೇ 70,352 ಕೋಟಿ ರೂಪಾಯಿ ಆಗಿದೆ. ಒಮ್ಮೆ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಈ ಜಂಟಿ ಉದ್ಯಮವನ್ನು  ರಿಯಲನ್ಸ್‌ ಇಂಡಸ್ಟ್ರೀಸ್‌ ನಿಯಂತ್ರಿಸಲಿದೆ. ಈ ಉದ್ಯಮದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಪಾಲು ಶೇ. 16.34 ಆಗಿದ್ದರೆ, ರಿಲಯನ್ಸ್‌ನ ಮಾಧ್ಯಮ ವಿಭಾಗವಾಗಿರುವ ವಯಾಕಾಮ್‌18 ಶೇ. 46.82ರಷ್ಟು ಪಾಲು ಹೊಂದಿರಲಿದೆ. ಇನ್ನು ಡಿಸ್ನಿ ಶೇ. 36.84ರಷ್ಟು ಪಾಲು ಹೊಂದಿರಲಿದೆ.

ಪತ್ನಿಗೆ ಹೊಸ ಜವಾಬ್ದಾರಿ ನೀಡಲಿದ್ದಾರಾ ಮುಖೇಶ್ ಅಂಬಾನಿ? ಶತಕೋಟಿ ಮೌಲ್ಯದ ನೂತನ ಉದ್ಯಮಕ್ಕೆ ನೀತಾ ಸಾರಥ್ಯ!

ನೀತಾ ಅಂಬಾನಿ ಜೆವಿಯ ಅಧ್ಯಕ್ಷೆಯಾಗಲಿದ್ದು, ಉದಯ್ ಶಂಕರ್ ಉಪಾಧ್ಯಕ್ಷರಾಗಿ ಜಂಟಿ ಉದ್ಯಮಕ್ಕೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಹಿವಾಟು ನಿಯಂತ್ರಕ, ಷೇರುದಾರರು ಮತ್ತು ಇತರ ಸಾಂಪ್ರದಾಯಿಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಮತ್ತು 2024 ರ ಕೊನೆಯ ತ್ರೈಮಾಸಿಕದಲ್ಲಿ ಅಥವಾ 2025 ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 30,000 ಕ್ಕೂ ಹೆಚ್ಚು ಡಿಸ್ನಿ ಆಸ್ತಿಗಳ ಲೈಸೆನ್ಸ್‌ನೊಂದಿಗೆ  ಭಾರತದಲ್ಲಿ ಡಿಸ್ನಿ ಚಲನಚಿತ್ರಗಳು ಮತ್ತು ನಿರ್ಮಾಣಗಳನ್ನು ವಿತರಿಸಲು ಜಂಟಿ ಉದ್ಯಮಕ್ಕೆ ವಿಶೇಷ ಹಕ್ಕು ಸಿಗಲಿದೆ. ಇದು ಭಾರತೀಯ ಗ್ರಾಹಕರಿಗೆ ಸಂಪೂರ್ಣ ಮನರಂಜನಾ ಆಯ್ಕೆಗಳನ್ನು ಒದಗಿಸುತ್ತದೆ.
 

Latest Videos
Follow Us:
Download App:
  • android
  • ios