ಡಿಸ್ನಿ ಜೊತೆ 70,352 ಕೋಟಿಯ ಜಂಟಿ ಉದ್ಯಮ ಘೋಷಿಸಿದ ರಿಲಯನ್ಸ್‌!


disney reliance ರಿಯಲನ್ಸ್‌ ಹಾಗೂ ಡಿಸ್ನಿ ಒಂದಾಗಿರುವ ಈ ಜಂಟಿ ಉದ್ಯಮಕ್ಕೆ ನೀತಾ ಅಂಬಾನಿ ಅವರು ಚೇರ್ಮನ್‌ ಆಗಿರಲಿದ್ದು, ವಾಲ್ಟ್‌ ಡಿಸ್ನಿಯ ಅಧಿಕಾರಿಯಾಗಿದ್ದ ಉದಯ್‌ ಶಂಕರ್‌ ಈ ಉದ್ಯಮದ ಉಪಾಧ್ಯಕ್ಷರಾಗಿ ಇರಲಿದ್ದಾರೆ. ಇನ್ನು ಉದ್ಯಮದಲ್ಲಿ ತನ್ನ ಪ್ರಗತಿಗಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ 11,500 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಿದೆ.

JV With Disney to merge streaming TV assets in India Reliance announces Rs 70 352 crore Plan san

ಮುಂಬೈ (ಫೆ.28): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಿಯಲನ್ಸ್‌ ಇಂಡಸ್ಟ್ರೀಸ್‌ ಹಾಗೂ ವಾಲ್ಟ್‌ ಡಿಸ್ನಿಬುಧವಾರ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾದ ವ್ಯವಹಾರಗಳನ್ನು ಸಂಯೋಜಿಸುವ ಜಂಟಿ ಉದ್ಯಮವನ್ನು ರೂಪಿಸಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಣೆ ಮಾಡಿದೆ. ಆರ್‌ಐಎಲ್ ತನ್ನ ಬೆಳವಣಿಗೆಗಾಗಿ ಜಂಟಿ ಉದ್ಯಮದಲ್ಲಿ 11,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಈ ವಹಿವಾಟಿನ ಭಾಗವಾಗಿ, ವಯಾಕಾಮ್‌ 18ನ ಮಾಧ್ಯಮ ಉದ್ಯಮವನ್ನು ನ್ಯಾಯಾಲಯದ ಅನುಮೋದಿತ ವ್ಯವಸ್ಥೆಯ ಮೂಲಕ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ವಿಲೀನಗೊಳಿಸಲಾಗುತ್ತದೆ. ಎರಡೂ ಕಂಪನಿಗಳ ನಡುವಿನ ಸಹಕಾರ ವಿಚಾರವನ್ನು ಹೊರತಡುಪಡಿಸಿ, ಜಂಟಿ ಉದ್ಯಮದ ಮೌಲ್ಯವೇ 70,352 ಕೋಟಿ ರೂಪಾಯಿ ಆಗಿದೆ. ಒಮ್ಮೆ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಈ ಜಂಟಿ ಉದ್ಯಮವನ್ನು  ರಿಯಲನ್ಸ್‌ ಇಂಡಸ್ಟ್ರೀಸ್‌ ನಿಯಂತ್ರಿಸಲಿದೆ. ಈ ಉದ್ಯಮದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಪಾಲು ಶೇ. 16.34 ಆಗಿದ್ದರೆ, ರಿಲಯನ್ಸ್‌ನ ಮಾಧ್ಯಮ ವಿಭಾಗವಾಗಿರುವ ವಯಾಕಾಮ್‌18 ಶೇ. 46.82ರಷ್ಟು ಪಾಲು ಹೊಂದಿರಲಿದೆ. ಇನ್ನು ಡಿಸ್ನಿ ಶೇ. 36.84ರಷ್ಟು ಪಾಲು ಹೊಂದಿರಲಿದೆ.

ನೀತಾ ಅಂಬಾನಿ ಜೆವಿಯ ಅಧ್ಯಕ್ಷೆಯಾಗಲಿದ್ದು, ಉದಯ್ ಶಂಕರ್ ಉಪಾಧ್ಯಕ್ಷರಾಗಿ ಜಂಟಿ ಉದ್ಯಮಕ್ಕೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ ಅಂಬಾನಿ ಈ ಬಗ್ಗೆ ಮಾತನಾಡಿದ್ದು,'ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗವನ್ನು ಸೂಚಿಸುವ ಮಹತ್ವದ ಒಪ್ಪಂದವಾಗಿದೆ. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮೀಡಿಯಾ ಗ್ರೂಪ್‌ ಎಂದೇ ಗೌರವಿಸುತ್ತೇವೆ ಮತ್ತು ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಾಟಿಯಿಲ್ಲದ ವಿಷಯವನ್ನು ತಲುಪಿಸಲು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮರ್ಥ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುವ ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಹಿವಾಟು ನಿಯಂತ್ರಕ, ಷೇರುದಾರರು ಮತ್ತು ಇತರ ಸಾಂಪ್ರದಾಯಿಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಮತ್ತು 2024 ರ ಕೊನೆಯ ತ್ರೈಮಾಸಿಕದಲ್ಲಿ ಅಥವಾ 2025 ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 30,000 ಕ್ಕೂ ಹೆಚ್ಚು ಡಿಸ್ನಿ ಆಸ್ತಿಗಳ ಲೈಸೆನ್ಸ್‌ನೊಂದಿಗೆ  ಭಾರತದಲ್ಲಿ ಡಿಸ್ನಿ ಚಲನಚಿತ್ರಗಳು ಮತ್ತು ನಿರ್ಮಾಣಗಳನ್ನು ವಿತರಿಸಲು ಜಂಟಿ ಉದ್ಯಮಕ್ಕೆ ವಿಶೇಷ ಹಕ್ಕು ಸಿಗಲಿದೆ. ಇದು ಭಾರತೀಯ ಗ್ರಾಹಕರಿಗೆ ಸಂಪೂರ್ಣ ಮನರಂಜನಾ ಆಯ್ಕೆಗಳನ್ನು ಒದಗಿಸುತ್ತದೆ.

ಪತ್ನಿಗೆ ಹೊಸ ಜವಾಬ್ದಾರಿ ನೀಡಲಿದ್ದಾರಾ ಮುಖೇಶ್ ಅಂಬಾನಿ? ಶತಕೋಟಿ ಮೌಲ್ಯದ ನೂತನ ಉದ್ಯಮಕ್ಕೆ ನೀತಾ ಸಾರಥ್ಯ!

ವಾಲ್ಟ್ ಡಿಸ್ನಿಯ ಸಿಇಒ ಬಾಬ್ ಇಗರ್ ಈ ಬಗ್ಗೆ ಮಾತನಾಡಿದ್ದು "ರಿಲಯನ್ಸ್ ಭಾರತೀಯ ಮಾರುಕಟ್ಟೆ ಮತ್ತು ಗ್ರಾಹಕರ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದೆ, ಮತ್ತು ನಾವು ಒಟ್ಟಾಗಿ ದೇಶದ ಪ್ರಮುಖ ಮಾಧ್ಯಮ ಕಂಪನಿಗಳಲ್ಲಿ ಒಂದನ್ನು ರಚಿಸುತ್ತೇವೆ, ಕ್ರೀಡೆ, ಡಿಜಿಟಲ್ ಸೇವೆಗಳು ಮತ್ತು ಮನರಂಜನೆಯ ವಿಶಾಲವಾದ ಪೋರ್ಟ್ಫೋಲಿಯೊದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಮಗೆ ಅವಕಾಶ ಮಾಡಿಕೊಡುತ್ತೇವೆ' ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಟ್‌, ಅಮೆಜಾನ್‌ ಪ್ರೈಂಗೆ ಭರ್ಜರಿ ಪೈಪೋಟಿ; ಬೃಹತ್ OTT ಒಪ್ಪಂದಕ್ಕೆ ಸಹಿ ಹಾಕಲಿರುವ ಮುಕೇಶ್ ಅಂಬಾನಿ!

Latest Videos
Follow Us:
Download App:
  • android
  • ios