ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರು ಬೆಲೆಯಲ್ಲಿ ಭಾರೀ ಹೆಚ್ಚಳ; ಅಲ್ಪಾವಧಿಯಲ್ಲಿ ಸರ್ವಕಾಲಿಕ ಏರಿಕೆ ದಾಖಲಿಸಿದ ಸಂಸ್ಥೆ

ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರಿನ ಬೆಲೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಶುಕ್ರವಾರ ಈ ಕಂಪನಿ ಷೇರಿನ ಬೆಲೆ ಶೇ.10ರಷ್ಟು ಏರಿಕೆ ಕಂಡು 347ರೂ. ತಲುಪಿದೆ. 

Mukesh Ambanis Jio Financial Services Share Hits All Time High Know Target Price anu

ಮುಂಬೈ (ಫೆ.24): ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದ ಅಂಗ ಸಂಸ್ಥೆ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರು ಬೆಲೆಯಲ್ಲಿ ಶುಕ್ರವಾರ (ಫೆ.24) ಶೇ.10ರಷ್ಟು ಏರಿಕೆಯಾಗಿದ್ದು, 347ರೂ. ತಲುಪಿದೆ. ಈ ಏರಿಕೆಯಿಂದ ಬಿಎಸ್ ಇ ಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ. ಮಾರ್ಕ್  ದಾಟಿದೆ. ಕಳೆದ ಒಂದು ತಿಂಗಳಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರುಗಳು ಶೇ.38.89ರಷ್ಟು ರಿಟರ್ನ್ಸ್ ನೀಡಿವೆ ಎಂದು ಬಿಎಸ್ ಇ ವಿಶ್ಲೇಷಕರು ತಿಳಿಸಿದ್ದಾರೆ. ಹಾಗೆಯೇ ಕಳೆದ ಮೂರು ತಿಂಗಳಲ್ಲಿ ಶೇ.50.88ರಷ್ಟು ಹಾಗೂ ಕಳೆದ ಆರು ತಿಂಗಳಲ್ಲಿ ಶೇ.46.93 ರಷ್ಟು ರಿಟರ್ನ್ಸ್ ಗಳಿಸಿವೆ ಎಂಬ ಮಾಹಿತಿ ನೀಡಿದ್ದಾರೆ.

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮೂರನೇ ತ್ರೈಮಾಸಿಕ ವರದಿಯಲ್ಲಿ 2023ರ ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ನಿವ್ವಳ ಲಾಭದಲ್ಲಿ ಶೇ.56ರಷ್ಟು ಇಳಿಕೆ ಕಂಡುಬಂದಿದೆ. ಇದರಿಂದ ಸಂಸ್ಥೆ ನಿವ್ವಳ ಲಾಭ 294 ಕೋಟಿ ರೂ. ಎಂದು ತಿಳಿಸಿತ್ತು. ಈ ಹಿಂದಿನ ತ್ರೈಮಾಸಿಕದಲ್ಲಿ ಇದು ಒಟ್ಟು 413.61 ಕೋಟಿ ರೂ. ಇತ್ತು. ಈ ಸಮಗ್ರ ಆದಾಯದಲ್ಲಿ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ. 32ರಷ್ಟು ಇಳಿಕೆ ದಾಖಲಿಸಿದೆ.ಇನ್ನು ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ವೆಚ್ಚ 98.95ಕೋಟಿ ರೂ. ಇತ್ತು. ಇದು ಸೆಪ್ಟೆಂಬರ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ 71.43 ಕೋಟಿ ರೂ. ಇತ್ತು. ಅಂದರೆ ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಏರಿಕೆ ಕಂಡಿದೆ. ಒಟ್ಟು ತೆರಿಗೆ ಹೊರಹೋಗಿರೋದು 88 ಕೋಟಿ ರೂ. ಇದು ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 86.3 ಕೋಟಿ ರೂ. ಇತ್ತು.

ಶೀಘ್ರದಲ್ಲೇ ಮ್ಯೂಚುವಲ್ ಫಂಡ್ ಕ್ಷೇತ್ರ ಪ್ರವೇಶಿಸಲು ಮುಖೇಶ್ ಅಂಬಾನಿ ಸಿದ್ಧತೆ;ಬ್ಲಾಕ್ ರಾಕ್ ಜೊತೆಗೆ ಒಪ್ಪಂದ

ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ ಮೆಂಟ್ಸ್ ಸಂಸ್ಥೆಯಿಂದ ಪ್ರತ್ಯೇಕವಾಗಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್  ಕಳೆದ ವರ್ಷ ಆಗಸ್ಟ್ ನಲ್ಲಿ ಸ್ಥಾಪನೆಯಾಯಿತು.  ಅದೇ ತಿಂಗಳು  ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿತ್ತು. ಡಿಸೆಂಬರ್ ಗೆ ಅಂತ್ಯದಲ್ಲಿ ಅಂದರೆ ಕಂಪನಿ ಸ್ಥಾಪನೆಯಾಗಿ 9 ತಿಂಗಳಲ್ಲಿ 1,294 ಕೋಟಿ ರೂ. ಲಾಭ ಹಾಗೂ 1,436 ಕೋಟಿ ರೂ. ಆದಾಯ ಗಳಿಸಿತ್ತು. 

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಅನ್ನು ವಿಶ್ವದ ಅತ್ಯಧಿಕ ಕ್ಯಾಪಿಟಲೈಸ್ಡ್ ಫೈನಾನ್ಷಿಯಲ್ ಸರ್ವೀಸ್ ಪ್ಲಾಟ್ ಫಾರ್ಮ್ ಆಗಿ ರೂಪಿಸಲು ರಿಲಯನ್ಸ್ ಇಂಡಸ್ಟ್ರೀಸ್ 1,20,000 ಕೋಟಿ ರೂ. ಬಂಡವಾಳ ತೊಡಗಿಸಿರೋದಾಗಿ ಕಳೆದ ಆಗಸ್ಟ್ ನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂನಲ್ಲಿ) ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದರು. 

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಜೀವ, ಆರೋಗ್ಯ ಹಾಗೂ ಜನರಲ್ ವಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಳೆದ ವರ್ಷ ಬ್ಲಾಕ್ ರಾಕ್ ಜೊತೆಗೆ 50:50 ಜಾಯಿಂಟ್ ವೆಂಚರ್ ನಡೆಸಿದೆ. ಈ ಎರಡೂ ಸಂಸ್ಥೆಗಳು ಭಾರತದಲ್ಲಿ ಆಸ್ತಿ ನಿರ್ವಹಣೆ ಉದ್ಯಮಕ್ಕೆ ಪ್ರವೇಶಿಸಲು ತಲಾ 1200 ಕೋಟಿ ರೂ. ಹೂಡಿಕೆ ಮಾಡಿವೆ. 

ಪೇಟಿಯಂ ವ್ಯಾಲೆಟ್‌ ಖರೀದಿಸಲಿದ್ದಾರಾ ಮುಖೇಶ್‌ ಅಂಬಾನಿ? ಜಿಯೋ ಫೈನಾನ್ಸ್‌, HDFC ಬ್ಯಾಂಕ್‌ ರೇಸ್‌ನಲ್ಲಿ

ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದರೂ ರಿಲಯನ್ಸ್ ಅಲ್ಲಿ ಹೊಸ ಉದ್ಯಮ ತಂತ್ರಗಳ ಮೂಲಕ ನೆಲೆಯೂರುತ್ತಲೇ ಬಂದಿದೆ. ಹೀಗಾಗಿ ಫೈನಾನ್ಷಿಯಲ್ ಸರ್ವೀಸಸ್ ಕ್ಷೇತ್ರದಲ್ಲಿ ಕೂಡ ಮುಂದಿನ ದಿನಗಳಲ್ಲಿ ರಿಲಯನ್ಸ್ ಭದ್ರ ನೆಲೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಈಗಾಗಲೇ ಈ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಸಂಸ್ಥೆಗಳಿಗೆ ನೇರ ಸ್ಪರ್ಧೆ ನೀಡುವುದು ಖಚಿತ.

Latest Videos
Follow Us:
Download App:
  • android
  • ios