ಪೇಟಿಯಂ ವ್ಯಾಲೆಟ್ ಖರೀದಿಸಲಿದ್ದಾರಾ ಮುಖೇಶ್ ಅಂಬಾನಿ? ಜಿಯೋ ಫೈನಾನ್ಸ್, HDFC ಬ್ಯಾಂಕ್ ರೇಸ್‌ನಲ್ಲಿ
ಪೇಟಿಯಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧ ವಿಧಿಸಿದ ಬಳಿಕ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿರುವ ಪೇಟಿಯಂ ಸಂಸ್ಥೆಯ ವ್ಯಾಲೆಟ್ ಸೇವೆಯನ್ನು ಮುಖೇಶ್ ಅಂಬಾನಿ ಖರೀಸಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ನವದೆಹಲಿ: ಪೇಟಿಯಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧ ವಿಧಿಸಿದ ಬಳಿಕ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿರುವ ಪೇಟಿಯಂ ಸಂಸ್ಥೆಯ ವ್ಯಾಲೆಟ್ ಸೇವೆಯನ್ನು ಮುಖೇಶ್ ಅಂಬಾನಿ ಖರೀಸಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಈ ವರದಿಯ ಬೆನ್ನಲ್ಲೇ ಜಿಯೋ ಫೈನಾನ್ಷಿಯಲ್ ಸೇವೆಗಳ ಷೇರುಗಳು ಶೇ.14ರಷ್ಟು ಏರಿಕೆ ಕಂಡಿವೆ. ಪೇಟಿಯಂ ವ್ಯಾಲೆಟ್ ಖರೀದಿಗೆ ಸಂಬಂಧಿಸಿದಂತೆ ಪೇಟಿಯಂ ಮಾತೃ ಸಂಸ್ಥೆಯಾದ 97 ಕಮ್ಯುನಿಕೇಶನ್ ಸಂಸ್ಥೆ ಮುಕೇಶ್ ಅಂಬಾನಿ ಒಡೆತನದ ಎನ್‌ಬಿಎಫ್‌ಸಿ ಮತ್ತು ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿ ತಿಳಿಸಿದೆ.
ಪೇಟಿಯಂ ವ್ಯಾಲೆಟ್ ಸೇವೆಯನ್ನು ಖರೀದಿ ಮಾಡಲು ಜಿಯೋ ಫೈನಾನ್ಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಮುಂಚೂಣಿ ರೇಸ್‌ನಲ್ಲಿವೆ. ಪೇಟಿಯಂ ವ್ಯಾಲೆಟ್ ಖರೀದಿಗೆ ಸಂಬಂಧಿಸಿದಂತೆ ಕಳೆದ ನವೆಂಬರ್‌ನಲ್ಲೇ ಮಾತುಕತೆಗಳು ನಡೆದಿತ್ತು. ಇದೀಗ ಆರ್‌ಬಿಐ ಪೇಟಿಯಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಮತ್ತೊಮ್ಮೆ ಈ ಮಾತುಕತೆಗಳು ತೀವ್ರಗೊಂಡಿವೆ. ಸರ್ಕಾರದ ನಿರ್ಬಂಧದ ಬಳಿಕ ಕಳೆದ 3 ದಿನಗಳಲ್ಲಿ ಪೇಟಿಯಂನ ಮೌಲ್ಯ ಶೇ.42ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರಿಗೆ 20 ಸಾವಿರ ಕೋಟಿ ರು. ನಷ್ಟ ಉಂಟುಮಾಡಿದೆ.